ಉಚಿತ ನೆಟ್: ಬೆಂಬಲ ಕೋರಿದ ಫೇಸ್ಬುಕ್

ಮೂಲ ಇಂಟರ್ನೆಟ್ ಸೇವೆಗಳನ್ನು ಉಚಿತವಾಗಿ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಫೇ ಸ್‍ಬುಕ್ ತನ್ನ ಖಾತೆದಾರರರಿಗೆ ಪಾಪ್ ಅಪ್..
ಫೇಸ್ ಬುಕ್
ಫೇಸ್ ಬುಕ್
Updated on: 

ನವದೆಹಲಿ :ಮೂಲ ಇಂಟರ್ನೆಟ್ ಸೇವೆಗಳನ್ನು  ಉಚಿತವಾಗಿ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಫೇ ಸ್‍ಬುಕ್ ತನ್ನ ಖಾತೆದಾರರರಿಗೆ ಪಾಪ್ ಅಪ್
ಸಂದೇಶ ರವಾನಿಸಿ ಬೆಂಬಲ ಕೋರುತ್ತಿದೆ. ಕೇಂದ್ರ ದೂರಸಂಪರ್ಕ ಸಚಿವಾಲಯ ಅಂತರ್ಜಾಲ ತಟಸ್ಥ ಅದನ್ನು  ಪ್ರಸ್ತಾಪಿಸಿತ್ತು . ಇದರಿಂದ ಕೆಲ ಮೂಲ  (ಬೇಸಿಕ್) ಇಂಟರ್ನೆಟ್ ಸೇವೆಗಳಿಗೂ ಶುಲ್ಕ ಪಾವತಿಸುವ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಫೇಸ್‍ಬುಕ್ ತನ್ನ ಖಾತೆ ದಾರರಿಗೆ ಸಂದೇಶ ರವಾನಿಸುವ ಮೂಲಕ ಬೆಂಬಲ ಯಾಚಿಸುತ್ತಿದೆ. ಫೇಸ್‍ಬುಕ್ ಖಾತೆ ತೆರೆಯುತ್ತಿದ್ದಂತೆ
ಪೇಜ್ ಮೇಲೆ ಭಾರತದಲ್ಲಿ ಮೂಲ ಇಂಟರ್ನೆಟ್ ಸೇವೆಗಳನ್ನು ಉಚಿತವಾಗಿ ಪಡೆಯಬೇಕೆ ಎಂಬ ಪ್ರಶ್ನೆ ಕೇಳಲಾಗಿದೆ. ಅದಕ ಕೆಳಗೆ ``ನಾಟ್ ನೌ''``ಎಸ್. ಆ್ಯಮ್ ಇನ್'' ಎಂಬ ಆಯ್ಕೆಯನ್ನೂ
ಕೊಡಲಾಗಿದೆ. ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವ ಮೂಲಕ ಖಾತೆದಾರರು ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಉಂಟು.

ವೆಬ್‍ಸೈಟ್ ತಡೆ ತೆರವಿಗೆ  ಸರ್ಕಾರವೇ ಪಟ್ಟಿ ಕೊಡಲಿ

ನವದೆಹಲಿ : ಅಶ್ಲೀಲ ಚಿತ್ರಗಳನ್ನು ನಿಷೇಧಿಸಿ 857 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡುವಂತೆ ಇಂಟರ್‍ನೆಟ್ ಸೇವಾ ಪೂರೈಕೆದಾರರಿಗೆ (ಐಎಸ್‍ಪಿ) ಸರ್ಕಾರ  ಆದೇಶ ನೀಡಿದ್ದು, ಅದೇ
ವೇಗದಲ್ಲಿ ಮತ್ತೆ ಯೂಟರ್ನ್ ಹೊಡೆದಿದೆ. ಹಿಂಸಾತ್ಮಕ ಸೆಕ್ಸ್ ಹಾಗೂ ಚೈಲ್ಡ್  ಪೋರ್ನ್ ಹೊರತು ಪಡಿಸಿ ಮಿಕ್ಕೆಲ್ಲ ಸೈಟ್‍ಗಳ ಮೇಲಿನ ನಿಷೇಧವನ್ನುಮಂಗಳವಾರ ವಾಪಸ್ ಪಡೆದಿದೆ. ಆದರೆ ಈಗ ಐಎಸ್‍ಪಿಗಳು ಮಾತ್ರ ನಿಷೇಧ ತೆರವಾಗಬೇಕಿರುವ ಸೈಟ್‍ಗಳ ಪಟ್ಟಿಯನ್ನು ಸರ್ಕಾರವೇ ನೀಡಬೇಕು.ಅದರ ಅನುಸಾರ ತಡೆ ಹಿಂಪಡೆಯಬಹುದು. ಸೇವಾ ಸಂಸ್ಥೆಗಳೇ ನಿರ್ಧಾರ ತೆಗೆದುಕೊಂಡು ಸೈಟ್ ಗಳನ್ನು ಅನ್ ಬ್ಲಾಕ್ ಮಾಡುವುದು ಸಾಧ್ಯವಿಲ್ಲ ಎಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com