ಫೇಸ್ ಬುಕ್ ಹೊಸ ದಾಖಲೆ: ಒಂದೇ ದಿನದಲ್ಲಿ ಒಂದು ಬಿಲಿಯನ್ ಜನರಿಂದ ಬಳಕೆ

ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ದಾಖಲೆ ನಿರ್ಮಿಸಿದೆ. ವಿಶ್ವಾದ್ಯಂತ ಪ್ರತಿ ದಿನ ಒಂದು ಬಿಲಿಯನ್ ಜನರು ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ.
ಮಾರ್ಕ್ ಝಕರ್ಬರ್ಗ್
ಮಾರ್ಕ್ ಝಕರ್ಬರ್ಗ್
Updated on: 

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ದಾಖಲೆ ನಿರ್ಮಿಸಿದೆ. ವಿಶ್ವಾದ್ಯಂತ ಪ್ರತಿ ದಿನ ಒಂದು ಬಿಲಿಯನ್ ಜನರು ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ.

ಫೇಸ್ ಬುಕ್ ನಲ್ಲಿ ಪೋಸ್ಟ್ ಅಪ್ ಡೇಟ್ ಮಾಡಿರುವ ಫೇಸ್ ಬುಕ್ ನ ಸಿಇಒ ಮಾರ್ಕ್ ಝಕರ್ಬರ್ಗ್ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಒಂದು ಬಿಲಿಯನ್ ಬಳಕೆದಾರರು ಫೇಸ್ ಬುಕ್ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರದಂದು ಪ್ರತಿ 7 ಜನರಲ್ಲಿ ಒಬ್ಬರು ಫೇಸ್ ಬುಕ್ ಬಳಕೆ ಮಾಡಿದ್ದಾರೆ ಎಂದು ಮಾರ್ಕ್ ಝಕರ್ಬರ್ಗ್ ಮಾಹಿತಿ ನೀಡಿದ್ದಾರೆ.

ಆಧುನಿಕ ಜಗತ್ತಿನ ಅವಕಾಶಗಳನ್ನು ತಿಳಿದುಕೊಳ್ಳುವುದಕ್ಕೆ ನಮ್ಮ ಸಂಸ್ಥೆ ಪ್ರತಿಯೊಬ್ಬ ವ್ಯಕ್ತಿಗೂ ಧ್ವನಿಯಾಗಿರುತ್ತದೆ. ಸಂಪರ್ಕ ಹೊಂದಿರುವ ಜಗತ್ತು ಎಂದಿಗೂ ಉತ್ತಮವಾಗಿರುತ್ತದೆ, ಫೇಸ್ ಬುಕ್  ನ ಸಮುದಾಯದ ಭಾಗವಾಗಿರುವವರಿಗೆ ಮಾರ್ಕ್ ಝಕರ್ಬರ್ಗ್ ಧನ್ಯವಾದ ಅರ್ಪಿಸಿದ್ದಾರೆ. ಫೇಸ್ ಬುಕ್ ಅತಿ ಹೆಚ್ಚು ನೆಟ್ ಟ್ರಾಫಿಕ್ ಹೊಂದಿರುವ ಜಗತ್ತಿನ ಎರಡನೇ ಜಾಲತಾಣವಾಗಿದೆ.           
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com