ಆ್ಯಪಲ್ ಆದಾಯ ಹೆಚ್ಚಳ

ಸ್ಯಾಮ್ ಸಂಗ್, ಎಲ್ ಜಿಯಂಥ ಕಂಪನಿಗಳ ಸ್ಪರ್ಧೆಯ ನಡುವೆಯೂ ಕಳೆದ ತ್ರೈಮಾಸಿಕದಲ್ಲಿ ಆ್ಯಪಲ್...
ಆ್ಯಪಲ್ ಆದಾಯ ಹೆಚ್ಚಳ
Updated on: 

ಸ್ಯಾನ್ ಫ್ರಾನ್ಸಿಸ್ಕೋ: ಸ್ಯಾಮ್ ಸಂಗ್, ಎಲ್ ಜಿಯಂಥ ಕಂಪನಿಗಳ ಸ್ಪರ್ಧೆಯ ನಡುವೆಯೂ ಕಳೆದ ತ್ರೈಮಾಸಿಕದಲ್ಲಿ ಆ್ಯಪಲ್ ಕಂಪನಿಯ ಆದಾಯದಲ್ಲಿ ಹೆಚ್ಚಳವಾಗಿದೆ. ಡಿಸೆಂಬರ್ 31ರಂದು ಅಂತ್ಯಗೊಂಡ ಕೊನೆಯ ತ್ರೈಮಾಸಿಕದಲ್ಲಿ 7.45 ಕೋಟಿ ಐಫೋನ್ ಮಾರಾಟವಾಗಿವೆ. ಇದರಿಂದ ಕಂಪನಿಯ ಆದಾಯ ಈ ವರ್ಷದ ಆರಂಭದಲ್ಲಿ ರು.4578 ಶತಕೋಟಿ
ತಲುಪಿದೆ. ಅಂದರೆ ಒಟ್ಟಾರೆ ಕಂಪನಿಯ ಆದಾಯ ಶೇ.38ರಷ್ಟು ಏರಿಕೆಯಾಗಿದೆ.

ಇದೆಲ್ಲ ಸಾಧ್ಯವಾದದ್ದು ಸೆಪ್ಟೆಂಬರ್‍ನಲ್ಲಿ ಬಿಡುಗಡೆ ಮಾಡಲಾದ ಐಫೋನ್6 ಮತ್ತು 6 ಪ್ಲಸ್ ನಿಂದಾಗಿ! ಪ್ರತಿಸ್ಪರ್ಧಿಗಳಾದ ಸ್ಯಾಮ್ ಸಂಗ್, ಎಲ್‍ಜಿಯಂಥ ಕಂಪನಿಗಳು ದೊಡ್ಡ
ಸ್ಕ್ರೀನ್‍ನ ಮೊಬೈಲ್‍ಗಳನ್ನು ಬಿಡುಗಡೆ ಮಾಡುತ್ತಿದ್ದಾಗ ಆ್ಯಪಲ್ ಮಾತ್ರ ಸಣ್ಣ ಸ್ಕ್ರೀನ್ ಅನ್ನೇ ನೆಚ್ಚಿಕೊಂಡಿತ್ತು. ಈ ಹಿಂದೆ ಬಿಡುಗಡೆಯಾಗಿದ್ದ ಐಫೋನ್5 ಮಾದರಿಯ ಎಲ್ಲ ಮೊಬೈಲ್‍ಗಳು ಕೇವಲ 4 ಇಂಚಿನ ಸ್ಕ್ರೀನ್ ಹೊಂದಿದ್ದವು.

ಆದರೆ, 4.7 ಇಂಚಿನ ಐಫೋನ್ 6 ಮತ್ತು 5.5 ಇಂಚಿನ ಸ್ಕ್ರೀನ್‍ನ ಐಫೋನ್6 ಪ್ಲಸ್ ಬಿಡುಗಡೆಯಾಗುತ್ತಿದ್ದಂತೆ ಸ್ಯಾಮ್ ಸಂಗ್‍ನಂಥ ಕಂಪನಿಗಳತ್ತ ಮುಖ ಮಾಡಿದ್ದ ಗ್ರಾಹಕರು ಈಗ ಮತ್ತೆ ಐಫೋನತ್ತ ಆಕರ್ಷಿತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com