ಅದರಂತೆ ಸಿದ್ಧತೆಯೂ ಆಯಿತು. ಕೇವಲ ರು.10 ಲಕ್ಷಗಳ ವೆಚ್ಚದಲ್ಲಿ ಇಬ್ಬರಿಗೂ ಕಿಡ್ನಿ ಕಸಿ ಚಿಕಿತ್ಸೆಯೂ ಆಗಿ ಅವರೆಲ್ಲರೂ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಯೋಗದಲ್ಲಿ ಯಶಸ್ವಿಯಾದ ಆಸ್ಪತ್ರೆಯ ಹಿರಿಯ ತಜ್ಞವೈದ್ಯ ಡಾ. ಅಜಿತ್ ಕೆ. ಹುಯಿಲಗೋಳ್ ಮತ್ತು ತಜ್ಞ ವೈದ್ಯ ಡಾ. ಸಂಕರನ್ ಸುಂದರ್ ಯಶೋಗಾಥೆಯನ್ನು ವಿವರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ದಾನಿ ಅನುರಾಧ, ಕಿಡ್ನಿದಾನ ಮಹಾದಾನವಾಗಿದ್ದು, ಇದಕ್ಕೆ ಜನರು ಮುಂದಾಗಬೇಕು. ಕಿಡ್ನಿದಾನದ ನಂತರವೂ ದಾನಿಗಳು ಸಹಜ ಜೀವನ ನಡೆಸಬಹುದಾಗಿದ್ದು, ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಮತ್ತೊಬ್ಬ ಕಿಡ್ನಿದಾನಿ ಸಾವಿತ್ರಿ ಮಾತನಾಡಿ, ನನ್ನ ಕಿಡ್ನಿಯನ್ನು ಮತ್ತೊಬ್ಬರಿಗೆ ದಾನ ಮಾಡಿ ನನ್ನ ಪತಿಯನ್ನು ಉಳಿಸಿಕೊಳ್ಳುತ್ತೇನೆಂದು ಕನಸಿನಲ್ಲೂ ಭಾವಿಸರಲಿಲ್ಲ. ನಿಜಕ್ಕೂ ಇದು ವೈದ್ಯ ಲೋಕದ ಕೊಡುಗೆ ಹಾಗೂ ದೇವರ ದಯೆ ಎಂದರು.