ಬರಲಿವೆ ಸೆಲ್ಫ್ ಹೀಲಿಂಗ್ ವಿಮಾನ ರೆಕ್ಕೆಗಳು!

ಬ್ರಿಟನ್ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿದ್ದು ಹಾನಿಗೊಳಗಾದಾಗ ಸ್ವಯಂ ಸರಿಪಡಿಸಿಕೊಳ್ಳುವ ವಿನೂತನ ವಿಮಾನ ರೆಕ್ಕೆಗಳನ್ನು ಸಿದ್ಧಪಡಿಸಿದ್ದಾರೆ.
ವಿಮಾನ ರೆಕ್ಕೆಗಳು(ಸಾಂದರ್ಭಿಕ ಚಿತ್ರ)
ವಿಮಾನ ರೆಕ್ಕೆಗಳು(ಸಾಂದರ್ಭಿಕ ಚಿತ್ರ)
Updated on: 

ಲಂಡನ್: ಬ್ರಿಟನ್ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿದ್ದು ಹಾನಿಗೊಳಗಾದಾಗ ಸ್ವಯಂ ಸರಿಪಡಿಸಿಕೊಳ್ಳುವ ವಿನೂತನ ವಿಮಾನ ರೆಕ್ಕೆಗಳನ್ನು ಸಿದ್ಧಪಡಿಸಿದ್ದಾರೆ.

ವೈಜ್ಞಾನಿಕ ಕಲ್ಪನೆಯಿಂದ ಇದು ಸಾಧ್ಯವಾಗಿದ್ದು, ಸೆಲ್ಫ್ ಹೀಲಿಂಗ್ (ಸ್ವಯಂ ಸರಿಪಡಿಸಿಕೊಳ್ಳಬಹುದಾದ) ತಂತ್ರಜ್ಞಾನ ಇನ್ನು ಮುಂದಿನ  ದಿನಗಳಲ್ಲಿ ಸಾಮಾನ್ಯದ ವಿಷಯವಾಗಲಿದೆ ಎಂದು ಬ್ರಿಟನ್ ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೇ ಒಡೆದು ಹೋಗಿರುವ ಮೊಬೈಲ್ ಸ್ಕ್ರೀನ್  ಗಳನ್ನು ಸರಿಪಡಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಬನ್ ಫೈಬರ್ ಉತ್ಪನ್ನದ ಕ್ಷಿಪ್ರ ರಾಸಾಯನಿಕ ಕ್ರಿಯೆಯಿಂದ ಹಾನಿಗೊಳಗಾಗಿರುವ ಪ್ರದೇಶವನ್ನು ಗಟ್ಟಿಯಾಗಿಸುತ್ತದೆ. ಈ ಮೂಲಕ ಸೆಲ್ಫ್ ಹೀಲಿಂಗ್ ತಂತ್ರಜ್ಞಾನ ಕಾರ್ಯನಿರ್ವಹಿಸಲಿದೆ. ಹಾನಿಗೀಡಾಗಿರುವ ಪ್ರದೇಶದಲ್ಲಿ ಹೀಲಿಂಗ್ ಏಜೆಂಟ್ ನಂತೆ  ಕಾರ್ಯನಿರ್ವಹಿಸಲಿರುವ ವಸ್ತುವಿಗೆ ಬಣ್ಣ ನೀಡಬಹುದಾಗಿರುವುದರಿಂದ ಹಾನಿಗೀಡಾಗಿರುವ ಪ್ರದೇಶವನ್ನು ತಪಾಸಣೆ ನಡೆಸುವ ಪ್ರಕ್ರಿಯೆ ಇಂಜಿನಿಯರ್ ಗಳಿಗೆ ಸುಲಭವಾಗಲಿದೆ. ಈ ತಂತ್ರಜ್ಞಾನದಿಂದ ವಿಮಾನಯಾನ ಸುರಕ್ಷತೆ ತಪಾಸಣೆಯಲ್ಲಿ ಉಂಟಾಗುವ ವಿಳಂಬವನ್ನು ಮತ್ತಷ್ಟು ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com