ಭಾರತದಲ್ಲಿ ಐಫೋನ್ X ಮಾರಾಟಕ್ಕೆ ಚಾಲನೆ: ವಿಶೇಷತೆಗಳೇನು ಗೊತ್ತೇ?

ಅ.27 ರಿಂದ ಮುಂಗಡ ಬುಕ್ಕಿಂಗ್ ಕಂಡಿದ್ದ ಐಫೋನ್ X ಭಾರತದಲ್ಲಿ ಸಂಜೆ 6 ಗಂಟೆಯಿಂದ ಮಾರಾಟಕ್ಕೆ ಲಭ್ಯವಾಗಿದೆ.
ಐಫೋನ್ X
ಐಫೋನ್ X
Updated on: 
ಅ.27 ರಿಂದ ಮುಂಗಡ ಬುಕ್ಕಿಂಗ್ ಕಂಡಿದ್ದ ಐಫೋನ್ X ಭಾರತದಲ್ಲಿ ಸಂಜೆ 6 ಗಂಟೆಯಿಂದ ಮಾರಾಟಕ್ಕೆ ಲಭ್ಯವಾಗಿದೆ.
ಸಂಜೆ 6 ರಿಂದ ಆಫ್ ಲೈನ್ ಸ್ಟೋರ್ ಗಳಲ್ಲಿಯೂ ಐಫೋನ್ X ನ್ನು ಖರೀದಿಸಬಹುದಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಟೆಲಿಕಾಂ ಸಂಸ್ಥೆಗಳು ಐಫೋನ್ X ಗಾಗಿ ಆಕರ್ಷಕ ಆಫರ್ ಗಳನ್ನು ನೀಡಿದ್ದು ಐಫೋನ್ ನ್ನು ಮಾರಾಟ ಮಾಡಲು ಏರ್ ಟೆಲ್ ಹಾಗೂ ಜಿಯೋ ಆಪಲ್ ನೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿವೆ. 
ಭಾರತದಲ್ಲಿ ಐಫೋನ್ X ನ ಬೆಲೆ 89,000 (64GB) ತಷ್ಟಿದ್ದು, ಸಿಲ್ವರ್ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಇದೇ ಫೋನ್ ನ  256GB ಸ್ಟೋರೇಜ್ ಆವೃತ್ತಿಗೆ 1,02,000 ಬೆಲೆ ನಿಗದಿಯಾಗಿದೆ. ಪ್ರೀ-ಆರ್ಡರ್ ಪ್ರಾರಂಭವಾದ ಕೇವಲ ಅರ್ಧ ಗಂಟೆಯಲ್ಲಿಯೇ ಐಫೋನ್ X ಔಟ್ ಆಫ್ ಸ್ಟಾಕ್ ಆಗಿತ್ತು. 
ಫೇಸ್ ಐಡಿ ಗುರುತಿಸುವ ಮೂಲಕ ಅನ್ ಲಾಕ್ ಆಗುವ, ನಿಸ್ತಂತು ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯವನ್ನು ಐಫೋನ್ ಹೊಂದಿದ್ದು, ಡ್ಯುಯಲ್ ಬ್ಯಾಟರಿಗಳ ಸೌಲಭ್ಯವನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com