ಅಕ್ಷರಗಳ ಬಳಕೆ ಮಿತಿಯನ್ನು 280ಕ್ಕೆ ವಿಸ್ತರಿಸಲು ಟ್ವಿಟ್ಟರ್ ನಿರ್ಧಾರ: ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ

ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ತನ್ನ ಅಕ್ಷರದ ಬಳಕೆ ಮಿತಿಯನ್ನು 280ಕ್ಕೆ ವಿಸ್ತರಿಸುವುದಾಗಿ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ತನ್ನ ಅಕ್ಷರದ ಬಳಕೆ ಮಿತಿಯನ್ನು 280ಕ್ಕೆ ವಿಸ್ತರಿಸುವುದಾಗಿ ಘೋಷಿಸಿದೆ. ಇದಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಹಿಂದೆ ಟ್ವಿಟ್ಟರ್ ನಲ್ಲಿ ಬಳಕೆದಾರರಿಗೆ 140 ಅಕ್ಷರಗಳ ಮಿತಿಯನ್ನು ನೀಡಲಾಗುತ್ತಿತ್ತು. ಇದು ಹಲವರಿಗೆ ಸಾಕಾಗುತ್ತಿರಲಿಲ್ಲ. ತಮ್ಮ ಆಲೋಚನೆಗಳನ್ನು, ಅಭಿಪ್ರಾಯಗಳನ್ನು ವಿಶೇಷ ಅಕ್ಷರಗಳನ್ನು ಸೇರಿಸಿ ಅಷ್ಟು ಸಣ್ಣ ಮಿತಿಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅನೇಕರಿಗೆ ಗೊಂದಲ ಉಂಟಾಗುತ್ತಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.
ಅಕ್ಷರಗಳ ಮಿತಿಯನ್ನು ಹೆಚ್ಚಿಸಲಾಗಿದ್ದರೂ ಕೂಡ ಕೊರಿಯಾ, ಜಪಾನ್ ಮತ್ತು ಚೀನಾ ಭಾಷೆಗಳ ಬಳಕೆದಾರರಿಗೆ ಹಳೆಯ 140 ಅಕ್ಷರಗಳ ಬಳಕೆ ಮಿತಿ ಜಾರಿಯಲ್ಲಿದೆ. 
ಟ್ವಿಟ್ಟರ್ ನತ್ತ ಇನ್ನಷ್ಟು ಬಳಕೆದಾರರನ್ನು ಆಕರ್ಷಿಸಲು ಅದರಲ್ಲಿ ಕೆಲವು ಬದಲಾವಣೆಗಳನ್ನು ತರಲು ಯೋಜಿಸಿದೆ. ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಸಾಮಾಜಿಕ ಮಾಧ್ಯಮಗಳಿಗೆ ಕೋಟ್ಯಂತರ ಬಳಕೆದಾರರಿದ್ದರೆ ಟ್ವಿಟ್ಟರ್ ಪ್ರಾರಂಭವಾದ ದಿನದಿಂದ ಸೀಮಿತ ಬಳಕೆದಾರರನ್ನು ಮಾತ್ರ ಆಕರ್ಷಿಸಿದೆ.
ಟ್ವಿಟ್ಟರ್ ನ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ. ಹೆಚ್ಚು ಅಕ್ಷರಗಳ ಬಳಕೆ ಮಿತಿಯನ್ನು ವಿಸ್ತರಿಸಿರುವುದರಿಂದ ಜನರಿಗೆ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿದೆ ಎನ್ನುತ್ತಾರೆ. ಇನ್ನು ಕೆಲವರು ಟ್ವಿಟ್ಟರ್ ಪುಟದಲ್ಲಿ ಅಕ್ಷರಗಳ ಬಳಕೆ ಮಿತಿಯನ್ನು ಹೆಚ್ಚಿಸುವುದರ ಬದಲಿಗೆ ಎಡಿಟ್ ಬಟನ್ ನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಟ್ವಿಟ್ಟರ್ ಫೇಸ್ ಬುಕ್ ತರಹ ಬದಲಾಗುತ್ತಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com