ಈಗ ಆ್ಯಂಡ್ರಾಯ್ಡ್‏ನ ಕ್ರೋಮ್ ನಲ್ಲಿ ಇಂಟರ್‏ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು!

ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೂಗಲ್ ಕ್ರೋಮ್ ವಿಶಿಷ್ಟ ಆಯ್ಕೆಯನ್ನು ನೀಡಿದ್ದು, ಇಂಟರ್ ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಸೌಲಭ್ಯ ಒದಗಿಸಿದೆ.
ಈಗ ಆ್ಯಂಡ್ರಾಯ್ಡ್‏ನ ಕ್ರೋಮ್ ನಲ್ಲಿ ಇಂಟರ್‏ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು!
ಈಗ ಆ್ಯಂಡ್ರಾಯ್ಡ್‏ನ ಕ್ರೋಮ್ ನಲ್ಲಿ ಇಂಟರ್‏ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು!
ನವದೆಹಲಿ: ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೂಗಲ್ ಕ್ರೋಮ್ ವಿಶಿಷ್ಟ ಆಯ್ಕೆಯನ್ನು ನೀಡಿದ್ದು, ಇಂಟರ್ ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಸೌಲಭ್ಯ ಒದಗಿಸಿದೆ. 
ಜೂ.21 ರಂದು ಗೂಗಲ್ ಕ್ರೋಮ್ ಈ ವಿಶಿಷ್ಟ ಆಯ್ಕೆಯನ್ನು ನೀಡಿದ್ದು, ನಿರಂತರ ಇಂಟರ್ ನೆಟ್ ಸಂಪರ್ಕ ಇಲ್ಲದೆಯೂ ಬ್ರೌಸ್ ಮಾಡಬಹುದಾದ ಆಯ್ಕೆಯನ್ನು ನೀಡಿದೆ. "ಉಚಿತ ವೈಫೈ ನೆಟ್ವರ್ಕ್ ಗೆ ಕನೆಕ್ಟ್ ಆದ ಕೂಡಲೇ ಆ ಪ್ರದೇಶದಲ್ಲಿನ ಜನಪ್ರಿಯ ಸುದ್ದಿಗಳು ಡೌನ್ ಲೋಡ್ ಆಗಿರುತ್ತದೆ. ಈ ಸುದ್ದಿಗಳನ್ನು ಇಂಟರ್ ನೆಟ್ ಸಂಪರ್ಕವಿಲ್ಲದೇಯೂ ವೀಕ್ಷಿಸಬಹುದು ಎಂದು ಗೂಗಲ್ ಕ್ರೋಮ್ ನ ಪ್ರಾಡಕ್ಟ್ ಮ್ಯಾನೇಜರ್ ಹೇಳಿದ್ದಾರೆ. 
ಗೂಗಲ್ ಕ್ರೋಮ್ ಗೆ ಸೈನ್ ಇನ್ ಆದರೆ ಪ್ರಸ್ತುತವಾಗಿರುವ ಲೇಖನಗಳನ್ನೂ ಬ್ರೌಸಿಂಗ್ ಹಿಸ್ಟರಿ ಮೂಲಕ ಓದಬಹುದಾಗಿದೆ ಎಂದು ಗೂಗಲ್ ಕ್ರೋಮ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com