ಈ ವಾರ್ ರೂಂ ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್ ಹಾಗೂ ಮತ್ತಿತರ ಕಡೆಗಳಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಫೇಸ್ಬುಕ್ ಮೂಲಕ ಪ್ರಭಾವ ಬೀರಲು ಪ್ರಯತ್ನಿಸುವ ಖಾತೆದಾರರು ತಪ್ಪು ಮಾಹಿತಿ ಬಿತ್ತರಿಸುವುದರ ವಿರುದ್ಧ ಹೋರಾಡಲಿದೆ. ವಾರ್ ರೂಂನ ಒಳಗೋಡೆಗಳಲ್ಲಿ ಹಲವು ಗಡಿಯಾರಗಳಿದ್ದು, ಅವು ಯುಎಸ್ ಹಾಗೂ ಬ್ರೆಜಿಲ್ನ ವಿವಿಧ ಪ್ರದೇಶಗಳ ಸಮಯವನ್ನು ತೋರಿಸುತ್ತವೆ. ಮ್ಯಾಪ್ ಮತ್ತು ಟಿವಿ ಪರದೆಗಳ ಮೇಲೆ ಸಿಎನ್ಎನ್, ಫಾಕ್ಸ್ ನ್ಯೂಸ್, ಟ್ವಿಟರ್ ಗಳು ಕಾಣಿಸುತ್ತವೆ.