ವಿಜ್ಞಾನ-ತಂತ್ರಜ್ಞಾನ

ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಮೋಟೊರೋಲಾ ಒನ್ ಪವರ್ ವಿಶೇಷತೆಗಳೇನು?: ಇಲ್ಲಿದೆ ಮಾಹಿತಿ

ಲೆನೊವೋ ಒಡೆತನದ ಮೋಟೊರೋಲಾ ಸಂಸ್ಥೆ ಮೋಟೊರೊಲಾ ಒನ್ ಪವರ್ ಮೊಬೈಲನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಮೋಟೊರೋಲಾ ಒನ್ ಪವರ್ ವಿಶೇಷತೆಗಳೇನು?: ಇಲ್ಲಿದೆ ಮಾಹಿತಿ
ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಮೋಟೊರೋಲಾ ಒನ್ ಪವರ್ ವಿಶೇಷತೆಗಳೇನು?: ಇಲ್ಲಿದೆ ಮಾಹಿತಿ
Published On :
ಲೆನೊವೋ ಒಡೆತನದ ಮೋಟೊರೋಲಾ ಸಂಸ್ಥೆ ಮೋಟೊರೊಲಾ ಒನ್ ಪವರ್ ಮೊಬೈಲನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಮೋಟೊರೊಲಾ ಒನ್ ಪವರ್ ನ್ನು 2018 ರ ಆಗಸ್ಟ್ ನಲ್ಲಿ ಐಎಫ್ಎ ನಲ್ಲಿ ಮೋಟೊರೊಲಾ ಒನ್ ಜೊತೆಗೆ ಬಿಡುಗಡೆ ಮಾಡಲಾಗಿತ್ತು. ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿರುವ ಈ ಮೊಬೈಲ್ ನ ಬೆಲೆ 15,000 ರೂಪಾಯಿಯಾಗಿರಲಿದೆ.   
ಮೋಟೊರೋಲಾ ಒನ್ ಪವರ್ 6.2 ಇಂಚ್ (17.5 ಸೆ.ಮೀ) 19:9  ಮ್ಯಾಕ್ಸ್ ವಿಷನ್ ಪೂರ್ಣ ಹೆಚ್ ಡಿ + ಡಿಸ್ಪ್ಲೆ,  ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 1.8GHz ಆಕ್ಟಾ-ಕೋರ್ ಪ್ರೊಸೆಸರ್ ನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನಗಳ ವರೆಗೆ ಬ್ಯಾಟರಿ ಉಪಯೋಗಿಸಬಹುದು ಎಂದು ಮೋಟೋರೊಲಾ ಸಂಸ್ಥೆ ತಿಳಿಸಿದ್ದು, 64 ಜಿಬಿ ಮೆಮೊರಿ ಇದ್ದು, 256 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ.
ಅವಳಿ ಹಿಂಬದಿ ಕ್ಯಾಮರಾ ಹಾಗೂ 12 ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಸೌಲಭ್ಯವನ್ನು ಮೋಟೋರೋಲಾ ಒನ್ ಪವರ್ ನಲ್ಲಿ ನೀಡಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.