ಬಚ್ಚನ್ ಕಾಮೆಂಟರಿ

ಮೇ ಅಮಿತಾಭ್ ಬಚ್ಚನ್ ಬೋಲ್ ರಹಾ ಹ್ಞುಂ'-- ವಿಶ್ವದ ಪಾಲಿಗಿದು ಹಳೇ ದನಿ...
ಅಮಿತಾಬ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್
ಅಮಿತಾಬ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್

'ಮೇ ಅಮಿತಾಭ್ ಬಚ್ಚನ್ ಬೋಲ್ ರಹಾ ಹ್ಞುಂ'-- ವಿಶ್ವದ ಪಾಲಿಗಿದು ಹಳೇ ದನಿ. ಆದರೀ ದನಿಯನ್ನು ಎಷ್ಟೇ ರಿಪೀಟ್ ಮಾಡಿ ಕೇಳಿ, ಬೇಜಾರಾಗಲ್ಲ. ಗಡಸು ಕಂಠ. ಅದೇ ಮಾಧುರ್ಯದ ಕಂಠ. ಇರಬಹುದು ಯಜಮಾನಿಕೆಯ ಕಂಠ. ಅಮಿತಾಭ್ ಬಚ್ಚನ್ ತಮ್ಮನ್ನು ಯಾವ ಧಾಟಿಯಲ್ಲಿ ಪರಿಚಯಿಸಿಕೊಂಡರೂ ನಮ್ಮಿಂದ ಅವರಿಗೆ ಸಿಗೋದು ಶಿಳ್ಳೆ ಮತ್ತು ಚಪ್ಪಾಳೆ!

ಈ ಹೆಗ್ಗಳಿಕೆಯೇ ಇಂದು ಬಿಗ್‍ಬಿಗೆ ಡಿಮ್ಯಾಂಡ್ ಸೃಷ್ಟಿಸುತ್ತಿದೆ. ಈ ಹಿಂದೆ ತೆರೆಕಂಡ 'ಶಮಿತಾಭ್' ಸಿನಿce ಕೂಡ ಅವರ ದನಿಯ ಕ್ರೇಜ್ ಅನ್ನೇ ಜಗವ್ಯಾಪಿ ಮಾಡಿತು. ಇವರ ದನಿಯ ಹೊರತಾಗಿ ಮಿಂಚಲು ಹೋದ ಡ್ಯಾನಿಶ್‍ನ ಕಥೆ ಏನಾಯಿತೆಂಬುದು ಸಿನಿಮಾ ನೋಡಿದೋರಿಗೆ ಗೊತ್ತು. ಅಷ್ಟಕ್ಕೂ 'ಕೌನ್ ಬನೇಗಾ ಕರೋಡ್‍ಪತಿ'ಗೆ ಸ್ಟಾರ್‍ಪ್ಲಸ್ ಈ ಬಿಗ್‍ಬಿಯನ್ನು ಪ್ರಧಾನ ಖುರ್ಚಿಯಲ್ಲಿ ಕೂರಿಸಿದ್ದೇ 'ವಿಶಿಷ್ಟ ದನಿ'ಯ ಕಾರಣಕ್ಕೇ.

ಇದೇ ವಾಯ್ಲ್ ಇವತ್ತು ಕ್ರಿಕೆಟಿನತ್ತವೂ ಮುಖ ಮಾಡಿ, ಹೊಸದೊಂದು ಇನ್ನಿಂಗ್ಸ್ ಕಟ್ಟುತಿದೆ. ಮೊನ್ನೆ ಮುಂಬೈ ಇಂಡಿಯನ್ಸ್- ಕೆಕೆಆರ್ ನಡುವೆ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಬಿಗ್‍ಬಿ ತೆಂಡೂಲ್ಕರ್ ಜತೆಗಿದ್ದರು. ಅಷ್ಟರಲ್ಲೇ ಸುನೀಲ್ ಗವಾಸ್ಕರ್ ಇವರಿಬ್ಬರನ್ನೂ ಇಂಟರ್ ವ್ಯೂ ಮಾಡಲು ಮೈಕ್ ಹಿಡಿದು ಬಂದರು. ಬಿಗ್‍ಬಿಗೆ ಕ್ರಿಕೆಟೇನು ಹೊಸ ಪರಿಚಯವಲ್ಲ. ಭಾರತ ಪ್ರತೀ ಸಲ ಕ್ರಿಕೆಟ್ ಆಡುವಾಗಲೂ ಏನಾದರೂ ಟ್ವೀಟನ್ನು ಬಿಗ್‍ಬಿ ಹರಿಯಬಿಡ್ತಾರೆ.

ಇಷ್ಟಲ್ಲದೆ ಇತ್ತೀಚೆಗೆ ಮುಗಿದ ವರ್ಲ್ಡ್‍ಕಪ್‍ನಲ್ಲೂ ಇಂಡೋ- ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕೆ ಬಿಗ್ ಬಿ ಕಾಮೆಂಟರಿ ಕೊಟ್ಟಿದ್ದರು. ಆಕಾಶ್ ಚೋಪ್ರಾ, ಶೋಯೋಬ್ ಅಖ್ತರ್, ರಾಹುಲ್ ದ್ರಾವಿಡ್, ಕಪಿಲ್‍ದೇವ್ ಜತೆ ಕ್ರಿಕೆಟಿನ ವ್ಯಾಕರಣವನ್ನು ಪಕ್ಕಾ ಬಲ್ಲವರಂತೆ ಬಿಂಬಿಸಿಕೊಂಡಿದ್ದು ಹಳೇ ಕಥೆ. ಈ ಐಪಿಎಲ್‍ನಲ್ಲೂ ಅಷ್ಟೇ; ಗವಾಸ್ಕರ್ ಕೇಳಿದ ಪ್ರಶ್ನೆಗಳಿಗೆ ಬಿಗ್‍ಬಿ ತೊದಲಲಿಲ್ಲ. ನಾನು ಕೋಲ್ಕತ್ತಾದ ಜಮೈಬಾಬು, ಆದರೆ ನನ್ನ ಹೃದಯ ಮಾತ್ರ ಮುಂಬೈ ಪರ ನಿಲ್ಲುತ್ತದೆ' ಎಂದು ಮ್ಯಾಜಿಕಲ್ ಮಾತುಗಳಲ್ಲಿ ಎರಡೂ ಕಡೆಯ ಪ್ರೇಕ್ಷಕರನ್ನು ಒಲಿಸಿಕೊಂಡರು.

ಅಷ್ಟಕ್ಕೂ ಯಾವುದೇ ಒಬ್ಬ ಕಾಮೆಂಟೇಟರ್ ಮಾಡಬೇಕಾದುದ್ದೇ ಇಷ್ಟು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ'ದ ನೀತಿ ವೀಕ್ಷಕ ವಿವರಣೆಯಲ್ಲಿ ನಡೆಯೋದಿಲ್ಲ. ಆದರೆ, ಒಂದೇ ಒಂದು ಬೇಸರದ ಸಂಗತಿ. ಬಿಗ್‍ಬಿ ಸುಮ್ಮ ಸುಮ್ಮನೆ ಕಾರಣವಿಲ್ಲದೆ ಕ್ರಿಕೆಟ್ ಮೈದಾನಕ್ಕೆ ಬರುವುದಿಲ್ಲ. ಅವತ್ತು ವರ್ಲ್ಡ್‍ಕಪ್ ಟೈಮಿನಲ್ಲಿ 'ಶಮಿತಾಭ್' ಸಿನಿಮಾದ ಬಿಡುಗಡೆ ಇತ್ತು. ಕಾಮೆಂಟರಿ ಹೇಳುತ್ತಲೇ, ಸಿನಿಮಾಕ್ಕೂ ಮಾರುಕಟ್ಟೆ ಮಾಡಿಕೊಂಡರು.

ಈ ಐಪಿಎಲ್‍ನಲ್ಲೂ ಬಿಗ್‍ಬಿ ಅದೇ ಸ್ವಾರ್ಥವನ್ನೇ ಮುಂದುವರಿಸಿದರು. 'ಪೀಕು' ಸಿನಿಮಾಕ್ಕೆ ಭರ್ಜರಿ ಪ್ರಚಾರ ತಂದುಕೊಟ್ಟರು. ದೀಪಿಕಾ ಪಡುಕೋಣೆ ಕೂಡ ಇವರ ಜತೆಗೂಡಿ ಕಾಣಿಸಿಕೊಂಡಿದ್ದು ಇನ್ನೊಂದು ವಿಶೇಷ. ಹಾಗಾದರೆ, ಬಿಗ್‍ಬಿ ನಿಜವಾಗಿ ಕ್ರಿಕೆಟನ್ನು ಪ್ರೀತಿಸುವುದು, ಹುರಿದುಂಬಿಸುವುದು ಯಾವಾಗ? ಸಿನಿಮಾ ಪಾಲಿಗೆ ಅವರ ದನಿ ನಮಗೇನೋ ಇಷ್ಟವಾಗಿದ್ದು ನಿಜ. ಆದರೆ, ಕ್ರಿಕೆಟ್ ಪಾಲಿಗೆ..?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com