

ಮೆಲ್ಬೋರ್ನ್: ಆಸ್ಟ್ರೇಲಿಯದ ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ 3ನೇ ಟೆಸ್ಟ್ ಕ್ರಿಕೆಟ್ ನ ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ಐದು ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಉಮೇಶ್ ಯಾದವ್ರ ಬೌಲಿಂಗ್ನಲ್ಲಿ ಶಿಖರ್ ಧವನ್ಗೆ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು. ನಂತರ ಕ್ರಿಸ್ ರೋಜರ್ಸ್ಗೆ ಜೊತೆಯಾದ ಶೇನ್ ವಾಟ್ಸನ್ ಉತ್ತಮವಾಗಿ ಬ್ಯಾಟ್ ಬೀಸ್ ಆಸ್ಟ್ರೇಲಿಯದ ರನ್ ಗತಿಯನ್ನು ಏರಿಸಿದರು.
ರೋಜರ್ಸ್ 57 ರನ್ ಗಳಿಸಿದ್ದಾಗ ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಧೋನಿಗೆ ಕ್ಯಾಚ್ ನೀಡಿದರು. ಬಳಿಕ 57 ರನ್ ಗಳಿಸಿದ್ದ ವಾಟ್ಸನ್ ಅಶ್ವಿನ್ ಬೌಲಿಂಗ್ನಲ್ಲಿ ಔಟಾದರು. 32 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಶಾನ್ ಮಾರ್ಶ್ ಮೊಹಮ್ಮದ್ ಶಮಿಗೆ ಬಲೆಗೆ ಬಿದ್ದರು. ಜೋಯ್ ಬರ್ನ್ಸ್ ಕೇವಲ 13 ರನ್ ಗಳಿಸಿ ನಿರ್ಗಮಿಸಿದರು.
ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ 72 ರನ್ ಹಾಗೂ ಬ್ರಾಡ್ ಹಾಡಿನ್ 23 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಭಾರತ ಪರ ಉಮೇಶ್ ಯಾದವ್, ಮೊಹಮ್ಮದ್ ಶಮಿ ತಲಾ ಎರಡು ವಿಕೆಟ್. ಆರ್ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.