

ಮುಂಬೈ: ಆಟಗಾರರು ಇಲ್ಲವೇ ಮಾಧ್ಯಮದವರು ಸೀಮಿತ ಓವರ್‍ಗಳ ಭಾರತ ತಂಡದ ನಾಯಕ ಯಾರು ಎಂಬುದನ್ನು ಸರಿಯಾಗಿ ತಿಳಿಯಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸಂದೀಪ್ ಪಾಟೀಲ್ ಧೋನಿ ಪರ ಬ್ಯಾಟಿಂಗ್ ನಡೆಸಿದ್ದಾರೆ.
ಶನಿವಾರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾವನ್ನು ಪ್ರಕಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಾರ್ಚ್ 8ರಿಂದ ಏಪ್ರಿಲ್ 3ರವರೆಗೆ ನಡೆಯಲಿರುವ ಚುಟುಕು ವಿಶ್ವಕಪ್ ಪಂದ್ಯಾವಳಿಯವರೆಗೂ ಧೋನಿ ಭಾರತ ತಂಡದ ನಾಯಕನಾಗಿ ಮುಂದುವರೆಯಲಿ ದ್ದಾರೆ. ಈ ಸಂಗತಿಯನ್ನು ಮಾಧ್ಯಮಗಳು ಮಾತ್ರವೇ ಅಲ್ಲದೆ, ಮುಖ್ಯವಾಗಿ ತಂಡದ ಆಟಗಾರರು ತಮ್ಮ ನಾಯಕ ಯಾರು ಎಂಬುದನ್ನು ತಿಳಿದಿರಬೇಕು'' ಎಂದು ಹೇಳಿದರು.