ಬಾಂಗ್ಲಾಗೆ ಬೃಹತ್ ಸವಾಲು

ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಪಂದ್ಯ ನಿರ್ಣಾಯಕ ಹಂತ ತಲುಪಿದೆ.
ಪಾಕ್ - ಬಾಂಗ್ಲಾ ನಡುವಿನ ಪಂದ್ಯ
ಪಾಕ್ - ಬಾಂಗ್ಲಾ ನಡುವಿನ ಪಂದ್ಯ
Updated on: 

ಮೀರ್‍ಪುರ: ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಪಂದ್ಯ ನಿರ್ಣಾಯಕ ಹಂತ ತಲುಪಿದೆ.

ಪಾಕಿಸ್ತಾನ ತಂಡ, ತನ್ನ ಮೊದಲ ಇನಿಂಗ್ಸ್ ನಲ್ಲಿ ಪೇರಿಸಿದ್ದ 557 ರನ್ ಮೊತ್ತಕ್ಕೆ ಪ್ರತಿಯಾಗಿ ತನ್ನ ಪಂದ್ಯದ ಎರಡನೇ ದಿನವಾದ ಗುರುವಾರ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ್ದ ಬಾಂಗ್ಲಾದೇಶ, ಶುಕ್ರವಾರವೂ ತನ್ನ ಇನಿಂಗ್ಸ್ ಮುಂದುವರಿಸಿ 203 ರನ್‍ಗಳಿಗೆ ಆಲೌಟ್ ಆಯಿತು. ತದನಂತರ, ತನ್ನ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ, 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ಬಾಂಗ್ಲಾದೇಶಕ್ಕೆ ದ್ವಿತೀಯ ಇನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಟ್ಟಿತು.

ಹಾಗಾಗಿ, ಗೆಲವಿಗಾಗಿ ಒಟ್ಟು 550 ರನ್ ಗುರಿಯೊಂದಿಗೆ ಶುಕ್ರವಾರ ದಿನಾಂತ್ಯದ ಹೊತ್ತಿಗೆ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾ, ದಿನಾಂತ್ಯದ ಹೊತ್ತಿಗೆ ಒಂದು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com