ಮೊಹಾಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಪ್ರಥಮ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿದೆ.
ಟೀಂ ಇಂಡಿಯಾ ನೀಡಿದ 218 ರನ್ ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 109 ರನ್ ಗಳಿಗೆ ಸರ್ವಪತನಗೊಂಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಜಯ ಗಳಿಸಿದೆ.
ಆಫ್ರಿಕಾ ಪರ ಎಲ್ಗರ್ 16, ಫಿಲಾಂಡರ್ 1, ದುಪ್ಲೆಸಿಸ್ 1, ಆಶಿಮ್ ಆಮ್ಲಾ 0, ಎಬಿಡಿ ವಿಲಿಯರ್ಸ್ 16, ವಿಲಾಸ್ 7, ವಾನ್ ಝೈಲ್ 36, ಹರ್ಮೆರ್ 11, ಸ್ಟೇನ್ 2 ಇಮ್ರಾನ್ ತಾಹೀರ್ 4 ರನ್ ಗಳಿಸಿ ಔಟಾದರೆ. ರಬಾಡಾ 1 ರನ್ ಗಳಿಸಿ ಅಜೇಯರಾಗಿ ಉಳಿಸಿದ್ದಾರೆ.
ಟೀಂ ಇಂಡಿಯಾ ಪರ ಜಡೇಜಾ 5, ಅಶ್ವಿನ್ 3, ಮಿಶ್ರಾ, ಅರೋನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಕೇವಲ 200 ರನ್ ಗಳಿಗೆ ಆಲೌಟ್ ಆಗಿದೆ. 2ನೇ ದಿನದಾಟದಂತ್ಯಕ್ಕೆ 125 ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಮೂರನೆದಿನ ಒಂದಾದರಂತೆ ಒಂದು ವಿಕೆಟ್ ಕಳೆದುಕೊಂಡು 200ಕ್ಕೆ ಆಟ ಮುಗಿಸಿತು.
ಸ್ಕೋರು ವಿವರ:
ಭಾರತ ಮೊದಲ ಇನ್ನಿಂಗ್ಸ್ 201, ದ್ವಿತೀಯ ಇನ್ನಿಂಗ್ಸ್ 200
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 184 ದ್ವಿತೀಯ ಇನ್ನಿಂಗ್ಸ್ 109