

ಕೋಲ್ಕತಾ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆದ್ದ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಭಾರಿ ತಂಡವನ್ನು ವೈಟ್ ವಾಶ್ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಟಿ20 ವಿಶ್ವಕಪ್ ನಡೆಯಲಿದ್ದು, ಭಾರತ ಪ್ರಬಲ ಪ್ರತಿಸ್ಪರ್ಧಿ ಎಂದು ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್ ರೌಂಡರ್ ಶೇನ್ ವಾಟ್ಸನ್ ಹೇಳಿದ್ದಾರೆ.
ಗುಂಪು ಹಂತದಲ್ಲಿ ಮಾರ್ಚ್ 27ರಂದು ಮೊಹಾಲಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪರಸ್ಪರ ಸೆಣಸಾಡಲಿವೆ. ತಮ್ಮದೇ ನೆಲದಲ್ಲಿ ಭಾರತ ನಿಜವಾಗಿ ಇತರ ತಂಡಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ವಾಟ್ಸನ್ ಹೇಳಿದ್ದಾರೆ.
ನಾಯಕ ಎಂಎಸ್ ಧೋನಿ ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿಯೂ ಸಮತೋಲನ ಕಾಯ್ಡುಕೊಂಡಿದೆ. ಅದರಲ್ಲೂ ಪ್ರಸ್ತುತ ಟೀಂ ಇಂಡಿಯಾ ಯುವ ಆಟಗಾರರಿಂದ ಸಶಕ್ತವಾಗಿದೆ ಎಂದು ಶೇನ್ ತಿಳಿಸಿದ್ದಾರೆ.