ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಶಿಷ್ಟ ರೀತಿಯಲ್ಲಿ ಕರೆ ನೀಡಿದ ಉಸೇನ್ ಬೋಲ್ಟ್!ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಸದ್ಯ ಸ್ತಬ್ಧಗೊಂಡಿದೆ. ವಿಶ್ವದ ಪ್ರಮುಖ ನಾಯರು ಮತ್ತು ಗಣ್ಯವ್ಯಕ್ತಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮನೆಯಲ್ಲಿ ಇರುವಂತೆ ಕರೆ ನೀಡಿದ್ದಾರೆ.
ಕೊರೋನಾಗೆ ಡೊಂಟ್ ಕೇರ್: ಫುಟ್ಬಾಲ್ ಪಂದ್ಯ ವೀಕ್ಷಿಸಲು ಸಾವಿರಾರೂ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು!ಇಟಲಿಯಲ್ಲಿ ಕೊರೋನಾ ರೌದ್ರತಾಂಡವವಾಡಲು ಫುಟ್ಬಾಲ್ ಪಂದ್ಯವೊಂದು ಕಾರಣ ಎಂದು ಹೇಳಲಾಗುತ್ತಿದೆ. ಇಂತಹ ಆಘಾತಕಾರಿ ಸನ್ನಿವೇಶದಲ್ಲೇ ಮತ್ತೊಂದು ದೇಶದಲ್ಲಿ ಫುಟ್ಬಾಲ್ ವೀಕ್ಷಿಸಲು ಕ್ರೀಡಾಂಗಣದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದುಆತಂಕಕ್ಕೆ ಕಾರಣವಾಗಿದೆ.
20 ಬಾರಿ ಪಿಜಿಎ ಟೂರ್ ವಿಜೇತ, ಮಾಜಿ ಗಾಲ್ಫ್ ಆಟಗಾರ ಡೌಗ್ ಸ್ಯಾಂಡರ್ಸ್ ನಿಧನಇಪ್ಪತು ಬಾರಿ ಪಿಜಿಎ ಟೂರ್ ವಿಜೇತ ಡೌಗ್ ಸ್ಯಾಂಡರ್ಸ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಿಜಿಎ ಟೂರ್ ವೆಬ್ ಸೈಟ್ ಪ್ರಕಾರ 'ಪೀಕಾಕ್ ಆಫ್ ದಿ ಫೇರ್ ವೆಸ್' ಎಂಬ ಅಡ್ಡ ಹೆಸರು ಗಳಿಸಿದ್ದ ಸ್ಯಾಂಡರ್ಸ್, ವಯೋ ಸಹಜ ಕಾರಣಗಳಿಂದಾಗಿ ಹ್ಯೂಸ್ಟನ್ ನಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಕೊವಿಡ್-19 ಎಫೆಕ್ಟ್: ಅಂತರರಾಷ್ಟ್ರೀಯ ಚಾಂಪಿಯನ್ಸ್ ಫುಟ್ಬಾಲ್ ಕಪ್ ರದ್ದುಕೊರೋನಾ ವೈರಸ್ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ಚಾಂಪಿಯನ್ಸ್ ಕಪ್-2020 ಫುಟ್ಬಾಲ್ ಪಂದ್ಯಾವಳಿಯನ್ನು ರದ್ದುಪಡಿಸಲಾಗಿದೆ ಎಂದು ಸಂಘಟಕರು ಶನಿವಾರ ಖಚಿತಪಡಿಸಿದ್ದಾರೆ.
ಕೊರೋನಾ ಲಾಕ್ಡೌನ್ ಮಧ್ಯೆ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ನೀಡಿದ ಲಿಯಾಂಡರ್ ಪೇಸ್!ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಈಗ ಲಾಕ್ ಡೌನ್ ವೇಳೆ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪೇಸ್ ಹೊಸ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ಮೂಲಕ ಸಾಮಾಜಿಕ ತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ತಯಾರಾಗಿದ್ದಾರೆ. ಕೊರೋನಾ ಕಾರಣ ದೇಶವೇ ಲಾಕ್ ಡೌನ್ ಆಗಿ ಎಲ್ಲರೂ ಮನೆಗಳಲ್ಲಿರುವ ಕಾರಣ ತಮ್ಮ ಅಭಿಮಾನಿಗಳು ಈ ಚಾಲೆಂಜ್ ತೆಗೆದುಕೊಳ್ಳಿ ಎಂದು
ಅಮೆರಿಕಾದದಲ್ಲಿ ಲಾಕ್ ಡೌನ್ ಆದ ಹಾಕಿ ಚಾಂಪಿಯನ್: ತಕ್ಷಣದ ವೈದ್ಯಕೀಯ ನೆರವಿಗಾಗಿ ಅಶೋಕ್ ದಿವಾನ್ ಗೆ ಕೇಂದ್ರದ ಸಹಾಯಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದು ಅಮೆರಿಕಾದಲ್ಲಿ ಸಿಲುಕಿರುವ ಭಾರತದ ಮಾಜಿ ಹಾಕಿ ಆಟಗಾರ ಅಶೋಕ್ ದಿವಾನ್ ಅವರಿಗೆ "ತಕ್ಷಣದ ವೈದ್ಯಕೀಯ ಚಿಕಿತ್ಸೆ" ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಜೈಲಿನಿಂದ ಬಿಡುಗಡೆ, ಗೃಹ ಬಂಧನಪರಾಗ್ವೆಯ ನ್ಯಾಯಾಧೀಶರು ಗೃಹ ಬಂಧನದಲ್ಲಿರಲು ಅನುಮತಿಸಿದ ನಂತರ ಬ್ರೆಜಿಲ್ನ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಅವರನ್ನು ಪರಾಗ್ವೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕೋವಿಡ್-19 ಹೋರಾಟಕ್ಕೆ ನೆರವಾಗಲು ಟ್ರೋಫಿ ಮಾರಿದ ಗಾಲ್ಫರ್ ಅರ್ಜುನ್ಭಾರತದ ಯುವ ಗಾಲ್ಫರ್ ಅರ್ಜುನ್ ಭಾಟಿ, ಪ್ರಸ್ತುತ ದೇಶವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ಥಾಪಿಸಲಾಗಿರುವ ಪಿಎಂ-ಕೇರ್ಸ್ ನಿಧಿಗೆ 4.30 ಲಕ್ಷ ರೂ. ದೇಣಿಗೆ ನೀಡಿದ್ದಾರೆ
ಪಿಎಂ- ಕೇರ್ಸ್ ನಿಧಿಗೆ ಹೆಚ್ಚುವರಿಯಾಗಿ 75 ಲಕ್ಷ ದೇಣಿಗೆ ಪ್ರಕಟಿಸಿದ ಹಾಕಿ ಇಂಡಿಯಾಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಪಿಎಂ- ಕೇರ್ಸ್ ನಿಧಿಗೆ ಹಾಕಿ ಇಂಡಿಯಾ ಇಂದು ಹೆಚ್ಚುವರಿಯಾಗಿ 75 ಲಕ್ಷ ರೂಪಾಯಿ ದೇಣಿಗೆಯನ್ನು ಪ್ರಕಟಿಸಿದೆ.
ಕೊರೋನಾ ಕಂಟಕ: ಭಾರತದಲ್ಲಿ ನಡೆಯಲಿದ್ದ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಮುಂದೂಡಿಕೆನವೆಂಬರ್ನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯಿಂದಾಗಿ ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಿ ಫಿಫಾ ಫುಟ್ಬಾಲ್ನ ಆಡಳಿತ ಮಂಡಳಿ ಶನಿವಾರ ಆದೇಶಿಸಿದೆ.
ಎರಡನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕೊರೋನಾದ ಕಾರಣ ರದ್ದುಗೊಂಡ ವಿಂಬಲ್ಡನ್!ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಕೋವಿಡ್ -19 ಸಂಖ್ಯೆ ದಿನೇ ದಿನೆ ಏರುತ್ತಿರುವ ಹಿನ್ನೆಲೆಯಲ್ಲಿ ವರ್ಷದ ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ರದ್ದುಗೊಂಡಿದೆ.
ಒಲಂಪಿಕ್ಸ್ ಚಿನ್ನ ಗೆಲ್ಲುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ: ಮೇರಿ ಕೋಮ್ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ತಾವು ಭಾರತಕ್ಕಾಗಿ ಒಲಂಪಿಕ್ಸ್ ಚಿನ್ನ್ದ ಪದಕ ಪಡೆಯಬೇಕು ಅದಕ್ಕಾಗಿ ಗುರಿ ತಲುಪುವವರೆಗೆ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಕೊರೋನಾ ಭೀತಿಯಿಂದ ಮುಂದೂಡಿಕೆಯಾಗಿದ್ದ ಟೋಕಿಯೊ ಒಲಿಂಪಿಕ್ಸ್ 2021ರ ಜುಲೈ 23ರಿಂದ ಆರಂಭಕೊವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವಾರ ಮುಂದೂಡಲ್ಪಟ್ಟಿದ್ದ ಟೋಕಿಯೊ ಒಲಿಂಪಿಕ್ಸ್ -2020 ಕ್ರೀಡಾಕೂಟ ಮುಂದಿನ ವರ್ಷದ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕೊರೋನಾವೈರಸ್ ನಿಂದ ಪಾಕ್ ಸ್ಕ್ವ್ಯಾಷ್ ಆಟಗಾರ ಅಜಂಖಾನ್ ಸಾವುಕೊರೋನಾವೈರಸ್ ನಿಂದಾಗಿ ಪಾಕಿಸ್ತಾನದ ಖ್ಯಾತ ಸ್ಕ್ವ್ಯಾಷ್ ಆಟಗಾರ ಅಜಂ ಖಾನ್ ಮೃತಪಟ್ಟಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ತೆಲಂಗಾಣ-ಆಂಧ್ರಪ್ರದೇಶ ಸರ್ಕಾರಕ್ಕೆ ತಲಾ 5 ಲಕ್ಷ ರು. ದೇಣಿಗೆ ನೀಡಿದ ಪಿ.ವಿ ಸಿಂಧುಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಲವು ಕ್ರೀಡಾಪಟುಗಳು ಹಾಗೂ ಸಿನಿ ತಾರೆಯರು ಕೈಜೋಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!