ನಗಬೇಕು

Updated on: 

ಖತರ್ನಾಕ್ ಸರ್ದಾರ್ಜಿಗಳಿಬ್ಬರು ಕಾರಿನ ಬುಡಕ್ಕೆ ಬಾಂಬ್ ಸಿಕ್ಕಿಸಿರುತ್ತಾರೆ. ಕಾರನ್ನು ಉಡಾಯಿಸುವುದರ ಹಿಂದಿನ ಉದ್ದೇಶವೇನು ಎಂಬುದು ಇಬ್ಬರಿಗೂ ಗೊತ್ತಿರುವುದಿಲ್ಲ.
ಸರ್ದಾರ್ಜಿ 2: ಓಯ್, ನಿಲ್ಲೋ ನಿಲ್ಲು. ಬಾಂಬ್ ಫಿಕ್ಸ್ ಮಾಡುವ ಹಂತದಲ್ಲಿ ಅದೇ ಸ್ಫೋಟವಾಗಿ ಬಿಟ್ಟರೆ ಏನೋ ಮಾಡ್ತೀಯಾ?
ಸರ್ದಾರ್ಜಿ 1: ಸ್ಫೋಟ ಆದ್ರೆ ಆಗ್ಲಿ ಬಿಡೋ, ಚಿಂತೆ ಮಾಡ್ಬೇಡ. ನನ್ನ ಬಳಿ ಇನ್ನೊಂದು ಬಾಂಬ್ ಇದೆ!
===
ವಿದ್ಯಾರ್ಥಿ: (ದಪ್ಪ ದನಿ ಮಾಡಿಕೊಂಡು) ಇವತ್ತು ನನ್ನ ಮಗ ತುಂಬಾ ಜ್ವರ, ಶೀತದಿಂದ ಬಳಲುತ್ತಿದ್ದಾನೆ. ಅವನಿಗೆ ಇವತ್ತು ಶಾಲೆಗೆ ಬರಲಾಗುವುದಿಲ್ಲ.
ಟೀಚರ್: ಯಾರದು ಮಾತಾಡ್ತಿರೋದು?
ವಿದ್ಯಾರ್ಥಿ: ನನ್ನಪ್ಪ ಮಾತಾಡ್ತಿದ್ದೀನಿ!
===
ಗುಂಡ: ನಾನೇನಾದ್ರೂ ಈ ಜೋಕ್ ಹೇಳಿದ್ರೆ ನೀನು ನಕ್ಕು ನಕ್ಕು ಸಾಯ್ತೀಯಾ.
ತಿಮ್ಮ: ಹೌದಾ? ಪ್ಲೀಸ್, ಬೇಗ ಆ ಜೋಕ್ ಹೇಳು.
ಗುಂಡ: ನಾನು ಹೇಳಲ್ಲಪ್ಪಾ.
ತಿಮ್ಮ: ಯಾಕೋ?
ಗುಂಡ: ಯಾಕಂದ್ರೆ ಜೋಕ್‌ಗಿಂತ ನನಗೆ ನಿನ್ನ ಪ್ರಾಣ ಮುಖ್ಯ ಕಣೋ!
===
ಸರ್ದಾರ್ಜಿಗೆ ರಸ್ತೆಯಲ್ಲಿ ಹೋಗೋ ಹುಡುಗಿಯರನ್ನು ವಿನಾಕಾರಣ ಚುಡಾಯಿಸೋ ಚಟ. ಒಂದು ದಿನ ಹುಡುಗಿಯೊಬ್ಬಳಿಗೆ 'ನನ್ನ ಹೃದಯದ ಅರಮನೆ ನಿನಗಾಗಿ ತೆರೆದಿದೆ ಬರುವೆಯಾ ಪ್ರಿಯೆ' ಎಂದು ಕೆಣಕಿದ.
ಹುಡುಗಿಗೆ ಸಿಟ್ಟು ನೆತ್ತಿಗೇರಿತು. 'ಕಾಲಲ್ಲಿರೋ ಚಪ್ಪಲಿ ಬಿಚ್ಚಬೇಕಾ?' ಎಂದಳು.
ಸರ್ದಾಜಿ ಅಷ್ಟೇ ಕೂಲಾಗಿ ಹೇಳಿದ, 'ಪರವಾಗಿಲ್ಲ. ಹಾಗೇ ಬರಬಹುದು. ನನ್ನ ಹೃದಯ ದೇವಸ್ಥಾನವಲ್ಲ'.
===
ಸರ್ದಾರ್ಜಿಗೆ ರೇಸ್‌ಕೋರ್ಸ್‌ಗೆ ಫೋನಾಯಿಸಿ ಟಿಕೇಟು ಪಡೆದುಕೊಳ್ಳಬೇಕಾಗಿತ್ತು. ಆದರೆ ರೇಸ್‌ಕೋರ್ಸ್ ಕಚೇರಿಯ ಫೋನ್ ನಂಬರ್ ಬಗ್ಗೆ ಗೊಂದಲವಿತ್ತು.
ಆದರೂ ಡೈರಿಯಲ್ಲಿದ್ದ ಹಳೆಯ ನಂಬರಿಗೇ ಫೋನಾಯಿಸಿ -ಇದು ರೇಸ್‌ಕೋರ್ಸಾ? ಎಂದು ಕೇಳಿದ.
Of Course ಎಂದಿತ್ತು ಅತ್ತಲಿನ ದನಿ.
ಸಾರಿ. ರಾಂಗ್ ನಂಬರ್ ಅಂತ ಫೋನಿಟ್ಟ ಸರ್ದಾರ್ಜಿ.
===
ಮಂಜುಳಾ: ಏನಪ್ಪ, ನಿನ್ನ ಅಂಗಡಿಯಲ್ಲಿರುವ ಯಾವ ಬುಟ್ಟಿಯ ದ್ರಾಕ್ಷಿಯನ್ನು ಬಾಯಿಗೆ ಹಾಕಿಕೊಂಡರೂ ತುಂಬಾ ಹುಳಿಯಾಗಿದೆ.
ಅಂಗಡಿಯಾತ: ಹಾಗೇನಿಲ್ಲ ಮೇಡಂ. ದ್ರಾಕ್ಷಿ ಏನೋ ಸಿಹಿಯಾಗಿದೆ. ಆದರೆ, ನಿಮ್ಮ ಲಿಪ್‌ಸ್ಟಿಕ್ ಹುಳಿ ಇರಬೇಕು!
===
ಗಿರಾಕಿ: ಈ ಇಲಿ ಪಾಷಾಣ ಚೆನ್ನಾಗಿದೆಯಾ?
ವ್ಯಾಪಾರಿ: ಸ್ವಲ್ಪ ನೆಕ್ಕಿ ನೋಡಿ. ಚೆನ್ನಾಗಿದ್ರೆ ತೊಗೊಳ್ಳಿ ಸಾರ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com