

ಒಮ್ಮೆ ಡಿ.ವಿ. ಗುಂಡಪ್ಪ ಅವರಿಗೆ ಪೈಲ್ಸ್ ಸಮಸ್ಯೆ ಬಂದಿತ್ತು. ಅತ್ತಿತ್ತ ಹಂದಾಡದ ಸ್ಥಿತಿ. ಸರಿಯಾಗಿ ಕೂರಲೂ ಸಾಧ್ಯವಾಗುತ್ತಿರಲಿಲ್ಲ. ಆದರೂ, ಒಬ್ಬರು ಅವರನ್ನು ಯಾವುದೋ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. 'ಇಲ್ಲಪ್ಪ ನನಗೆ ಆರೋಗ್ಯ ಸರಿಯಿಲ್ಲ' ಅಂತ ಹೇಳಿದರೂ ಅವರು ಕೇಳಲಿಲ್ಲ. 'ಸರ್ ನಿಮಗೂ ಹೀಗಾಗುತ್ತಾ?' ಎಂದು ಪ್ರಶ್ನಿಸಿದರಂತೆ. ಕೊನೆಗೆ ಸಂದೇಶವನ್ನಾದರೂ ಬರೆದುಕೊಡಿ ಎಂದು ಕಾಗದ ಕೊಟ್ಟರಂತೆ. ಡಿವಿಜಿ ಒಂದು ಸಂದೇಶ ಬರೆದು, ಕವರ್ನೊಳಗೆ ಹಾಕಿ ಸೀಲ್ ಮಾಡಿ ಕೊಟ್ಟರು. ಅದನ್ನು ಸಮಾರಂಭದಲ್ಲೇ ಒಡೆದು, ಓದುವಂತೆ ಸೂಚಿಸಿದರು.
ಅದರಲ್ಲೇನಿತ್ತು ಗೊತ್ತೇ?
'ಗುಂಡಪ್ಪನಾದೊಡೇನು ಕುಂಡಿಯದು
ನೋಯದಿಹುದೆ..?'