ಟೀಚರ್ : ಭೂಮಿಗೂ ಚಂದ್ರನಿಗೂ ಏನು ಸಂಬಂಧ ?
ಗುಂಡ : ಅಣ್ಣ ತಂಗಿ ಸಂಬಂಧ ಸಾರ್..
ಟೀಚರ್ : ಅದು ಹೇಗೆ ?
ಗುಂಡ : ಏಕೆಂದರೆ ಭೂಮೀನ ನಾವು ತಾಯಿ ಅಂತ ಕರಿತೀವಿ.. ಚಂದ್ರನನ್ನು ಮಾಮಾ ಅಂತ ಕರಿತೀವಿ.. ಅದಕ್ಕೆ ಸಾರ್.
=
ಒಂದು ದಿನ ಸರ್ದಾರ್ ಆಫೀಸ್ಗೆ ತುಸು ಬೇಗನೇ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್ಗೆ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಕಾಣಿಸಿತು. ಅದನ್ನು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿ ಏನಿರಬಹುದು ಎಂದು ಯೋಚಿಸಿದ. ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು "ಛೀ... ಸಗಣಿ... ಸದ್ಯ ತುಳಿಯಲಿಲ್ಲ..." ಎಂದು ಉದ್ಗರಿಸಿದ!
=
ಸರ್ದಾರ್ : ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ...?
ಗುಂಡ : ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ...
ಸರ್ದಾರ್ : ಅಯ್ಯೋ ಪೆದ್ದ... ಪತ್ರ ಸಿಗದಿದ್ರೂ ಬಾ ಅಂತ ಬರೆದಿದ್ನಲ್ಲೋ ಮಾರಾಯಾ !!!
=
ಅಮಾಯಕ ತಿಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಡಾಕ್ಟರ್ ಬಳಿಗೆ ಹೋಗುತ್ತಾನೆ,
ಡಾಕ್ಟರ್ : ನಿನ್ನ ಅನಾರೋಗ್ಯಕ್ಕೆ ಕಾರಣ ಕಿಡ್ನಿ ಫೇಲ್ ಆಗಿರುವುದೇ...!!!
ತಿಮ್ಮಾ : ಏನ್ಮಾತಾಡ್ತಾ ಇದ್ದೀರಾ ಸಾರ್... ನನ್ನ ಕಿಡ್ನಿ ಯಾವತ್ತೂ ಸ್ಕೂಲಿಗೇ ಹೋಗಿಲ್ಲ. ಅದೆಂಗ್ ಫೇಲ್ ಆಗುತ್ತದೆ!?
=
ಗುಂಡಿ : ರೀ ರೀ ಪರವಾಗಿಲ್ಲರೀ.. ನನ್ನ ಫೋಟೋ ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡಿದ್ದೀರಾ.
ಗುಂಡ : ಹೌದು ಕಣೆ. ನನಗೆ ಎಷ್ಟೇ ಸಂಕಷ್ಟಗಳು ಬೆನ್ನತ್ತಿ ಬರಲಿ, ಎಷ್ಟೇ ಸಂಕಟಗಳು ನನ್ನ ಅಟ್ಟಿಸಿಕೊಂಡು ಬರಲಿ, ನಿನ್ನ ಫೋಟೋ ನೋಡುತ್ತಿದ್ದಂತೆ ಆ ಸಂಕಟ, ಸಂಕಷ್ಟಗಳೆಲ್ಲ ಮಾಯವಾಗಿಬಿಡುತ್ತವೆ. ಇದು ಹೊಳೆದದ್ದು ಇತ್ತೀಚೆಗೆ. ಅಂದಿನಿಂದ ಫೋಟೋ ಪರ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದೇನೆ.
ಗುಂಡಿ : ಈಗಲಾದರೂ ಗೊತ್ತಾಯ್ತಲ್ಲ ನಾನು ಎಷ್ಟು ಪ್ರಭಾವಶಾಲಿ ಮತ್ತು ಎಂಥ ಮಾಂತ್ರಿಕತೆ ನನ್ನ ಭಾವಚಿತ್ರದಲ್ಲಿದೆಯೆಂದು ?
ಗುಂಡ : ಹೌದು ಕಣೆ, ತೊಂದರೆಗೆ ಸಿಲುಕಿಕೊಂಡಾಗಲೆಲ್ಲಾ ನಿನ್ನ ಫೋಟೋ ನೋಡುತ್ತ ನನಗೆ ನಾನೇ ಹೇಳಿಕೊಳ್ಳುತ್ತೇನೆ, 'ನೋಡೋ ಗುಂಡ, ನಿನಗೆ ಎಷ್ಟೇ ಕಷ್ಟ ಬಂದರೂ ಅದು ಇವಳಿಗಿಂತ ದೊಡ್ಡ ಕಷ್ಟವಾಗಿರಲು ಸಾಧ್ಯವೇ ಇಲ್ಲ' ಇಷ್ಟು ಹೇಳುತ್ತಿದ್ದಂತೆ ತೊಂದರೆಗಳೆಲ್ಲ ಮಂಗಮಾಯ !