ಒಬ್ಬ : ಏ... ನಿನಗೆ ಆಕ್ಸಿಡೆಂಟ್ ಆಯ್ತಾ ?
ಇನ್ನೊಬ್ಬ : ಹೌದು, ಒಂದು ಹುಡುಗಿಗೆ ಡ್ಯಾಷ್ ಹೊಡೆದೆ..
ಒಬ್ಬ : ಹುಡುಗಿಗೆ ಡ್ಯಾಷ್ ಹೊಡೆದರೆ ಕೈಗೆ ಈ ರೀತಿ ಪೆಟ್ಟಾಗುತ್ತಾ..?
ಇನ್ನೊಬ್ಬ : ಇಲ್ಲಾ... ಇದು ಹುಡುಗಿಯ ಅಪ್ಪ ಮುರಿದಿದ್ದು...
---
ಹೆಂಡತಿ : ನಾನು ಸಾಯ್ತೀನಿ...
ಗಂಡ : ಹೌದಾ... ತಗೋ ಕ್ಯಾಡ್ಬರೀಸ್...
ಹೆಂಡತಿ : ಯಾಕೆ ?
ಗಂಡ : ಯಾವುದೇ ಒಂದು ಒಳ್ಳೆ ಕೆಲಸ ಶುರು ಮಾಡುವಾಗ ಬಾಯಿ ಸಿಹಿ ಮಾಡ್ಕೋಬೇಕು...
--
ಭಿಕ್ಷುಕ : ಏ ಸುಂದರೀ... ಎರಡು ದಿನದಿಂದ ಊಟ ಮಾಡಿಲ್ಲ, ನನಗೆ ಕಣ್ಣಿಲ್ಲ, ಏನಾದರೂ ಭಿಕ್ಷೆ ಹಾಕು...
ಗುಂಡ : ನೋಡೇ... ಅವ್ನು ನಿನ್ನನ್ನು ಸುಂದರಿ ಅನ್ನುತ್ತಿದ್ದಾನೆ. ಪಾಪ ನಿಜವಾಗಲೂ ಕುರುಡನಿರಬೇಕು. ತಗೋ, ಹತ್ತು ರುಪಾಯಿ ಅವನ ತಟ್ಟೆಗೆ ಹಾಕು..
---
ಗುಂಡ : ಒಂದು ಟೀ ಕೊಡಪ್ಪಾ...
ಮಾಣಿ : ಸ್ಪೆಷಲ್ ಟೀ ಕೊಡ್ಲಾ... ಅಥವಾ ಆರ್ಡಿನರಿ ಟೀ ಕೊಡ್ಲಾ...?
ಗುಂಡ : ಎರಡಕ್ಕೂ ಏನು ವ್ಯತ್ಯಾಸ ?
ಮಾಣಿ : ಸ್ಪೆಷಲ್ ಟೀ ಅಂದ್ರೆ ಗ್ಲಾಸ್ ತೊಳೆದು ಕೊಡ್ತೀವಿ... ಹಾಗೇ ಕೊಟ್ರೆ ಆರ್ಡಿನರಿ ಟೀ...