ವಿಶ್ವಾಸ

Updated on: 

ಸೈನಿಕನೊಬ್ಬ ತನ್ನ ಮೇಲಧಿಕಾರಿಗೆ ಹೇಳಿದ- 'ನನ್ನ ಸ್ನೇಹಿತ ರಣರಂಗದಿಂದ ಇನ್ನೂ ಹಿಂತಿರುಗಿಲ್ಲ, ಸರ್. ಹೊರಗೆ ಹೋಗಿ ಅವನನ್ನು ಹುಡುಕಲು ಅನುಮತಿ ನೀಡಬೇಕಾಗಿ ವಿನಂತಿ.'
ಮೇಲಧಿಕಾರಿ ಹೇಳಿದ- 'ನಿನ್ನ ವಿನಂತಿಯನ್ನು ತಿರಸ್ಕರಿಸಲಾಗಿದೆ. ಬಹುಶಃ ಈ ಹೊತ್ತಿಗಾಗಲೇ ಮೃತಪಟ್ಟಿರುವವನೊಬ್ಬನಿಗಾಗಿ ನೀನು ನಿನ್ನ ಪ್ರಾಣವನ್ನು ಅಪಾಯಕ್ಕೊಡ್ಡುವುದು ನನಗಿಷ್ಟವಿಲ್ಲ.'
ಆದರೂ ಆ ಯೋಧನಿಂದ ತಡೆಯಲಿಕ್ಕಾಗಲಿಲ್ಲ. ಹೊರಟೇಬಿಟ್ಟ. ಸುಮಾರು ಒಂದು ಗಂಟೆಯ ಬಳಿಕ ಸ್ವತಃ ಮಾರಣಾಂತಿಕವಾಗಿ ಗಾಯಗೊಂಡು, ತನ್ನ ಮೃತ ಸ್ನೇಹಿತನ ದೇಹವನ್ನು ಹೊತ್ತು ತಂದ.
ಅವನನ್ನು ನೋಡಿ ಅಧಿಕಾರಿ ಕೆಂಡಾಮಂಡಲವಾದ. 'ಅವನು ಸತ್ತಿರಬಹುದೆಂದು ನಾನು ಹೇಳಿದ್ದೆ. ನಿನ್ನ ಮೂರ್ಖತನದಿಂದ ನಾನೀಗ ಇಬ್ಬರನ್ನು ಕಳೆದುಕೊಳ್ಳುವಂತಾಯಿತು. ಹೇಳು, ಈ ಮೃತ ಶರೀರವನ್ನು ಹೊತ್ತು ತರಲು ನೀನು ಅಲ್ಲಿಗೆ ಹೋಗುವ ಅಗತ್ಯವಿತ್ತೇ?'
ಕೊನೆಯುಸಿರೆಳೆಯುತ್ತಿದ್ದ ಆ ಯೋಧ ಉತ್ತರಿಸಿದ- 'ಓಹ್! ಹೌದು, ಸರ್. ನಾನಾತನನ್ನು ಕಂಡಾಗ ಅವನಿನ್ನೂ ಜೀವಂತವಾಗಿದ್ದ ಮತ್ತು ಅವನು ಹೇಳಿದ 'ಜಾಕ್, ನೀನು ಖಂಡಿತವಾಗಿಯೂ ಬರುವೆಯೆಂದು ನನಗೆ ಗೊತ್ತಿತ್ತು...'

-  ನಂದಿನಿ ಡಿ. ಕಾಮತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com