(ಅ)ಪರಿಚಿತರ ಬಗ್ಗೆ ಎಚ್ಚರವಿರಲಿ
ಇತ್ತೀಚಿನ ದಿನಗಳಲ್ಲಿ ಯಾರನ್ನು ನಂಬಬೇಕು ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಪರಿಚಯಸ್ಥರಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಸುಮ್ಮನೇ ಇರುವಂತಿಲ್ಲ. ಮತ್ತೊಂದೆಡೆ ಅಪರಿಚಿತರ ಬಗ್ಗೆಯೂ ಸಾಕಷ್ಟು ಜಾಗೃತರಾಗಿರಬೇಕು.
ಈ ರೀತಿ ಪರಿಚಯಸ್ಥರು ಎಂದು ಹೇಳಿಕೊಂಡು ನಂಬಿಕೆ ಗಳಿಸುವವರು ದ್ರೋಹಿಗಳಾಗುತ್ತಿದ್ದಾರೆ. ಮನೆಗಳಲ್ಲಿ ಕಳ್ಳತನ ಮಾಡುವುದು, ಮನೆಯಲ್ಲಿ ಹಿರಿಯ ಜೀವಗಳಿದ್ದರೆ ಅವರನ್ನು ಹತ್ಯೆ ಮಾಡಿ ಅಥವಾ ಬೆದರಿಸಿ ಚಿನ್ನಾಭರಣ ದೋಚುವುದು, ಸಾಮಾನ್ಯವಾಗಿದೆ.
ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಸಾಕಷ್ಟು ಅರಿವು ಮೂಡಿಸಿದ್ದಾರೆ. ಆದರೆ ಜನರಲ್ಲಿ ಅರಿವು ಮೂಡಿಲ್ಲ. ಹಾಗಾಗಿ ಅವರಲ್ಲಿ ಅರಿವು ಮೂಡದ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ.
ಆದ್ದರಿಂದ ಮನೆಗೆ ಬರುವ ಸೇಲ್ಸ್ಮನ್ಗಳ ಬಗ್ಗೆ ಎಚ್ಚರಇರಲಿ. ಅಂತಹವರನ್ನು ಯಾವುದೇ ಕಾರಣಕ್ಕೂ ಒಳಗೆ ಸೇರಿಸಬೇಡಿ. ಅದಕ್ಕೂ ಮೊದಲು ಅವರಿಂದ ಯಾವುದೇ ವಸ್ತುಗಳನ್ನು ಖರೀದಿಸುವುದು ಬೇಡ. ಒಂದು ವೇಳೆ ಅಗತ್ಯಬಿದ್ದಲ್ಲಿ ಅಕ್ಕಪಕ್ಕದವರ ಜತೆ ಸೇರಿ ಖರೀದಿಸಿ. ಅವರನ್ನು ಗೇಟ್ನಿಂದ ಹೊರಗಿಡಿ. ಸಂಸಾರದ ಕೆಲವು ಗುಟ್ಟುಗಳನ್ನು ಅವರ ಮುಂದೆ ಮಾತನಾಡುವುದು ಸರಿಯಲ್ಲ.
ಇದು ಮನೆಯಲ್ಲಿ ಮಾತ್ರವಲ್ಲ ಹೊರಗೆ ಹೋದಾಗಲೂ ಅಪರಿಚಿತರ ಬಗ್ಗೆ ಎಚ್ಚರ ವಹಿಸದಿದ್ದಲ್ಲಿ ಆಭರಣ/ಪರ್ಸ್ಗಳ ಕಳವಾಗುವುದು, ಗಮನ ಬೇರೆಡೆ ಸೆಳೆದು ಕಳವು ಮಾಡುವುದು ಹೆಚ್ಚಾಗಿ ನಡೆಯುತ್ತದೆ.
ಇನ್ನು ಪರಿಚಿತರು ಎಂದು ಅವರನ್ನೂ ನಂಬುವಂತಿಲ್ಲ(ರಕ್ತಸಂಬಂಧಿಗಳನ್ನು ಹೊರತುಪಡಿಸಿ). ಮನೆಯ ಸಂಪ್ ರಿಪೇರಿ, ಚರಂಡಿ ಪೈಪ್ ರಿಪೇರಿ, ಬಾಗಿಲು ರಿಪೇರಿ.. ಎಂಬಿತ್ಯಾದಿ ರಿಪೇರಿಗಳ ನೆಪದಲ್ಲಿ ಮನೆಗೆ ಬರುವವರ ಬಗ್ಗೆ ಎಚ್ಚರವಿರಲಿ. ಮನೆಯಲ್ಲಿ ಒಬ್ಬರು/ ಇಬ್ಬರಿದ್ದಲ್ಲಿ ಸಂಬಂಧಿಕರಿಗೆ ವಿಷಯ ತಿಳಿಸಿ. ಸಾಧ್ಯವಾದಲ್ಲಿ ಸಿಸಿಟಿವಿ ಅಳವಡಿಸಿ. ಆದರೆ ಈ ವಿಷಯ ಹೊರಗಿನವರಿಗೆ ತಿಳಿಸುವುದು ಬೇಡ ಎನ್ನುತ್ತಾರೆ ಪೊಲೀಸರು.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

