ಬೈಟುಕಾಫಿ

ಕಾಮನ ವಾಮಗತಿ

ಕಾಮನ ವಾಮಗತಿ
Published On :

ಕೆಲವರ ನಡೆಯೇ ವಿಚಿತ್ರ. ಅವರು ಹೋಗುತ್ತಿರುವುದು ವಿರುದ್ಧ ದಿಕ್ಕಿಗೆ ಎಂಬಂತೆ ಕಾಣುತ್ತದೆ, ಸರಿಯಾದ ಜಾಗವನ್ನೇ ಸೇರುತ್ತಾರೆ. ಕೆಲವರು ನೋಡುತ್ತಿರುವುದೇ ವಕ್ರವಾಗಿ ಎಂಬಂತೆ ಕಾಣುತ್ತದೆ, ಆದರೆ ಸರಿಯಾದ ಒಳನೋಟವನ್ನೇ ಹೊಂದಿರುತ್ತಾರೆ. ಇದಕ್ಕೆ ನಮ್ಮ ಮನ್ಮಥನೂ ಹೊರತಲ್ಲ.

ದೋರ್ಭ್ಯಾಂ ಸಂಯಮಿತಃ ಪಯೋಧರಭರೇಣಾ ಪೀಡಿತಃ ಪಾಣಿಜೈ
ರಾವಿದ್ಧೋ ದಶನೈಃ ಕ್ಷತಾಧರಪುಟಃ ಶ್ರೋಣೀತಟೇನಾಹತಃ
ಹಸ್ತೇನಾನಮಿತಃ ಕಚೇಧರಮಧುಸ್ಯಂದೇನ ಸಮ್ಮೋಹಿತಃ
ಕಾಂತಃ ಕಾಮಪಿ ತೃಪ್ತಿಮಾಪತದಹೋ ಕಾಮಸ್ಯ ವಾಮಾ ಗತಿಃ


ಎರಡೂ ಕೈಗಳಿಂದ ಆತನನ್ನು ಬಂಧಿಸಲಾಗಿದೆ. ಉಗುರುಗಳು ಆತನನ್ನು ಪರಚಿ ಗಾಯಗೊಳಿಸಿವೆ. ಹಲ್ಲುಗಳು ಅತನನ್ನು ಎಲ್ಲೆಂದರಲ್ಲಿ ಕಡಿದು ಗುರುತು ಮೂಡಿಸಿವೆ. ಅಧರಗಳಿಂದ ಮಧುಪಾನ ಮಾಡಿ ಮತ್ತನಾಗಿದ್ದಾನೆ, ಮತಿ ತಪ್ಪಿದಂತಿದ್ದಾನೆ. ತೊಡೆಗಳು, ಸೊಂಟದಿಂದ ಪದೇ ಪದೆ ಏಟು ತಿಂದಿದ್ದಾನೆ. ಮೇಲಾಗಿ, ಸೂಕ್ಷ್ಮವಾಗಿ ಕಟುವಾದ ಕುಚಚೂಚುಕಗಳೆಂಬ ಎರಡು ಮುಳ್ಳುಗಳು ಆತನನ್ನು ಚುಚ್ಚುತ್ತಿವೆ! ಮದನ ಕದನದಲ್ಲಿ ಬಳಲಿದಂತೆ ಬಾಗಿ ಬಸವಳಿದಿದ್ದಾನೆ. ಆದರೂ ಆತ ಸುಖಿಯಾಗಿಯೇ ಇದ್ದಾನೆ. ಈ ಪೀಡನೆಯ ಅಂಗಗಳೇ ಆತನಿಗೆ ಸುಖಕಾರಿಯಾಗಿವೆ. ಇದಲ್ಲವೆ ಮನ್ಮಥನ ವಕ್ರಗತಿ ಎಂದರೆ!
ಇಲ್ಲಿ ರತಿಯ ಕ್ರಿಯಾವಸ್ಥೆಗಳನ್ನು ಚಮತ್ಕಾರಿಯಾಗಿ ತೇಜೋಭಂಗಕ್ಕೆ ಜೋಡಿಸಲಾಗಿದೆ. ಏನಾದರೇನಪ್ಪ! ಕೊನೆಗೆ ಸುಖ ಸಿಕ್ಕಿದರೆ ಸಾಕು. ಅದಲ್ಲವೆ ಮನುಷ್ಯನ ಮನೋಭಿಲಾಷೆ! ಅದಕ್ಕಾಗಿಯೇ ತಾನೆ ಯತಿಗಳೂ ರತಿಮೋಹಿತರಾಗುವುದು, ಸ್ವಾಮಿಗಳೂ ಕಾಮಿಗಳಾಗುವುದು?

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.