ಸರ್ಕಾರಿ ಬಸ್ಸುಗಳನ್ನು ನಷ್ಟ ಮುಕ್ತವಾಗಿಸಿ!
ಈ ಖಾಸಗಿ ಅನ್ನೋದು ಯಾವತ್ತು ಇದ್ದರೂ ಖಾಸಗಿನೇ. ಆದ ಕಾರಣ ನಮ್ಮಿಂದಲೇ ಇರುವ ನಮ್ಮದೇ ಆದ ಸರ್ಕಾರಿ ಬಸ್ಸುಗಳು ಪ್ರಯಾಣಕ್ಕೆ ಸುರಕ್ಷಿತ. ಏಕೆಂದರೆ ಈ ಬಸ್ಸುಗಳು ನಮಗೆ ಏನೆಲ್ಲ ಅನುಕೂಲ ಮಾಡಿಲ್ಲಾ ಹೇಳಿ. ಕಡಿಮೆ ದರದಲ್ಲಿ ತಿಂಗಳ ಪಾಸು, ದಿನದ ಪಾಸು. ಅಷ್ಟೆ ಏಕೆ ನಮ್ಮ ಮಕ್ಕಳ ಶಿಕ್ಷಣಕ್ಕೆ ಅತಿ ಕಡಿಮೆ ದರದಲ್ಲಿ ಪಾಸ್ ಕೊಟ್ಟಿದೆ. ಆದಕಾರಣ ಅದರ ಋಣ ನಾವು ತೀರಿಸಬೇಕು. ತನಗೆ ನಷ್ಟ ಮಾಡಿಕೊಂಡು ಇಷ್ಟೆಲ್ಲ ಮಾಡಿರುವ ಈ ಸರ್ಕಾರಿ ಬಸ್ಸುಗಳನ್ನು ನಾವು ಗೌರವಿಸಬೇಕು. ಖಾಸಗಿ ಬಸ್ಸುಗಳ ಆಡಂಬರಕ್ಕೆ ಮರುಳಾಗದೇ ಕ್ಷಣಿಕ ಸುಖದ ವಿಚಾರ ಬಿಟ್ಟು ಧೀರ್ಘ ವಿಚಾರ ಮಾಡಿ ಹೆಚ್ಚು ಹೆಚ್ಚು ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿ ನಷ್ಟ ಮುಕ್ತ ಇಲಾಖೆಯನ್ನಾಗಿ ಮಾಡಿ. ನಮ್ಮ ಸರ್ಕಾರಿ ಬಸ್ಸುಗಳಿಗೆ ನಷ್ಟ ಮಾಡಿ ಖಾಸಗಿಯವರನ್ನು ಲಾಭದಾಯಕವಾಗಿ ಮಾಡುವುದು ಮೂರ್ಖತನ, ನೆನಪಿರಲಿ. ಆಪಘಾತ ಸಂಭವಿಸುವುದು ಮಾಮೂಲಿ.
- ವಿ.ಹೆಚ್.ಖಂಡೋಬಾ, ಕಾದರವಳ್ಳಿ ಗ್ರಾಮ
ಹಣ ಗಳಿಕೆಗೆ ಪ್ರಧಾನ ಲಕ್ಷ್ಯ
ಖಾಸಗಿ ಬಸ್ಪ್ರಯಾಣ ಸುರಕ್ಷಿತವಲ್ಲ ಏಕೆಂದರೆ ಹಣ ಗಳಿಕೆಯೊಂದೆ ಅವರ ಪ್ರಧಾನ ಲಕ್ಷ್ಯವಾಗಿರುತ್ತದೆ. ಹೆಚ್ಚಿನ ಹಣದಾಸೆಗೆ ಕೆಲಮೊಮ್ಮೆ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆಯಂತಹ ಅಪಾಯಕಾರಿ ಇಂಧನಗಳನ್ನು ಸಾಗಿಸುತ್ತಾರೆ. ಸರಿಯಾಗಿ ತರಬೇತಿ ಪಡೆದ ವಾಹನ ಚಾಲಕರು ಇರುವುದಿಲ್ಲ. ನಿರ್ಜನ ಪ್ರದೇಶದಲ್ಲಿ ಬಸ್ಕೆಟ್ಟರೆ ಹಣ ವಾಪಸ್ ಮಾಡಿ ಬೇರೊಂದು ಬಸ್ಸಿಗೆ ಹೋಗಲು ಸೂಚಿಸುತ್ತಾರೆ. ಪ್ರಯಾಣಿಕರ ಜವಾಬ್ದಾರಿಯನ್ನು ವಹಿಸಿಕೊಳ್ಳದೇ ನುಣುಚಿಕೊಳ್ಳುತ್ತಾರೆ. ಆದರೆ ಸರ್ಕಾರಿ ಬಸ್ಸಿನಲ್ಲಿ ಅಪಾಯಕಾರಿ ಇಂಧನಗಳನ್ನು ಕಡ್ಡ್ಡಾಯವಾಗಿ ಸಾಗಿಸುವುದಿಲ್ಲ. ತರಬೇತಿ ಹೊಂದಿದ ಚಾಲಕರಿರುತ್ತಾರೆ. ಅಲ್ಲದೇ ಬಸ್ಸು ಕೆಟ್ಟರೆ ಬೇರೆ ವ್ಯವಸ್ಥೆ ಮಾಡಿ ಪ್ರಯಾಣಿಕರು ಹೋಗಬೇಕಾದ ಜಾಗಕ್ಕೆ ತಲುಪಿಸುತ್ತಾರೆ. ಅಪಘಾತವಾದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ ಜನರ ನೋವಿಗೆ ಸ್ಪಂದಿಸುತ್ತದೆ.
- ಮಹೇಶ್ ಸಣ್ಣಗಿರಿ, ಕೊಟ್ಟೂರು
ಮಾನವೀಯತೆಯೇ ಮಂತ್ರ
ನಾವು ಸುಮಾರು ಜನ ಶಿಕ್ಷಕರು ಮೈಸೂರಿನಿಂದ ಹೆಗ್ಗಡದೇವನ ಕೋಟೆಗೆ ಪ್ರತಿದಿನ ಪ್ರಯಾಣಿಸಲು ಮತ್ತು ಅಲ್ಲಿಂದ ಹಿಂತಿರುಗಲು ಖಾಸಗಿ ಬಸ್ಸನ್ನೇ ನಂಬಿದ್ದೇವೆ. ಏಕೆಂದರೆ, ನಿಖರವಾದ ಸಮಯಪಾಲನೆ, ಸುರಕ್ಷತೆ, ಹಣ ಉಳಿತಾಯ. ಇದಕ್ಕೆಲ್ಲ ಕಲಶವಿಟ್ಟಂತೆ ಆ ಚಾಲಕ-ನಿರ್ವಹಕರ ಶಿಸ್ತು, ನಯ-ವಿನಯ ಗಳು, ನಗು, ಸೌಜನ್ಯಮೀರದ ಮಾತುಕತೆ ಮೆಚ್ಚಿನ ವಿಚಾರವಾಗಿದೆ. ಅದಕ್ಕೂ ಮೀರಿ ಸ್ವಚ್ಛತೆಯ ಕಡೆಗೆ ಗಮನವಿರುತ್ತದೆ. ನಿಲ್ದಾಣ ಬಂದಾಗ ಕೂಗಿ ಕರೆದು ಮಲಗಿದ್ದರೆ ಎಬ್ಬಿಸಿ ಸಹಕರಿಸುತ್ತಾರೆ. ಲಗ್ಗೇಜುಗಳನ್ನು ಇಳಿಸಿಕೊಡುವ ಪರಿಪಾಟವಿದೆ. ನಿತ್ಯ ಪ್ರಯಾಣಿಸುವವರಿಗಾಗಿಯೇ ವಿಶೇಷವಾದ ರೀತಿಯಲ್ಲಿ ಹಾರನ್ ಮಾಡಿ ತಮ್ಮ ಬಸ್ಸು ಬಂದದ್ದನ್ನು ಪ್ರಚುರಪಡಿಸುತ್ತಾರೆ. ಇದು ಕೂಡ ತುಂಬಾ ಸಹಕಾರಿಯಾಗಿದೆ. ಖಾಸಗಿ ಬಸ್ಸುಗಳು ಕೂಡ ಪ್ರಯಾಣಿಕರಿಗೆ ಪರವಾಗಿಯೇ ಇವೆ.
- ಬಿ.ಕೆ.ಮೀನಾಕ್ಷಿ, ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

