ನಾಲಿಗೆ ನುಲಿ
ಮಲೆಗಳ ಮೇಲಿನ ಮರಗಳ ಮೆಳೆಗಳ ಮೂಲೆಮೂಲೆಗಳಲ್ಲಿ ಮತ್ತೆ ಮತ್ತೆ ಮಳೆ ಮೆರೆದಾಗ, ಮುಂಜಾವಿನಿಂದ ಮುಂದಿನ ಮುಂಜಾವಿನವರೆಗೆ ಮೆಳೆಗಳ ಮರಮರದಲ್ಲೂ ಮಳೆಯ ಮರ್ಮರದ ಮಧುರ ಮಂಜರಿ.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಈ ವ್ಯಕ್ತಿಗೆ ನೀರಮೇಲೆ ನಾವೆಯಲ್ಲಿ
ವಿಹರಿಸುವುದೇ ಸ್ವರ್ಗ -
ಇದು ನೇರವಾಗಿಲ್ಲ ವಕ್ರ, ಅಸಹಜ, ತಿರುಚಿದ್ದು. -
ತೆಂಗಿನಕಾಯಿಯನ್ನು ಸಂಪೂರ್ಣವಾಗಿ
ಹೆರೆದರೆ ಕೈಗೆ ಸಿಗುವ ಚಿಪ್ಪು -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಉಪವಾಸ ಮಾಡುವ ಹನ್ನೊಂದನೆಯ ದಿನದ ವ್ರತ-
ಕಾಡಿನಲ್ಲಿರುವ ಬೆಟ್ಟದಲ್ಲಿ ಮಳೆ ಸ್ವಲ್ಪವೇ ಮಂದ -
ಈ ನರಿ ಪಂಚತಂತ್ರದಲ್ಲಿ ಬರುವ ಕರಟಕನ
ಸಹೋದರ -
ಈ ವಿಗ್ರಹ ಕಲ್ಲಿನದು ಎಂದು ಹೇಳಲು
ಒಂದೇ ಒಂದು ಪದ -
ಗತಪ್ರತ್ಯಾಗತ
ಆ ಬುದ್ಧಿವಂತ ಎದುರಾಳಿ ಮಾಡಿದ ವಾದ, ಎಷ್ಟು ಸರಿ, ಸಮರ್ಪಕ, ಸಮಂಜಸ ಎಂದು ಗುಣಗ್ರಾಹಿ ಹಿರಿಯರು ಹೇಳಿದ್ದು ಒಂದೇ ಪದದಲ್ಲಿ-
'ಹದವಾದವಾದಹ!'
ನಿನ್ನೆಯ ಉತ್ತರಗಳು
3 ಅಕ್ಷರ: ಕದನ, ದಡಿಯ, ನಯನ.
4 ಅಕ್ಷರ: ಕಮಲೇಶ, ಮಹಾವಾಕ್ಯ, ಲೇವಾದೇವಿ, ಶಕ್ಯವಿಲ್ಲ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141