ಆಕೆ
ಮಾತನಾಡುವಾಗ
ಕಣ್ಣಿನ ಮೇಲೆ
ಕೂದಲು ಬೀಳುತ್ತಲೇ
ಇರುವುದು ಜಾರಿ ಜಾರಿ,
ಅದನ್ನವಳು
ಸರಿಮಾಡಿಕೊಳ್ಳುತ್ತ
ಹೇಳುವಳು
'ಸಾರಿ ಸಾರಿ'!
-ಪರೇಶ್ ಸರಾಫ್
---
ನುಲಿ ನಲಿ
ನಾಲಿಗೆ ನುಲಿ
ಬೆಳ್ಳಂಬೆಳಗು ಬಾಳಬೆಳಕು ಬಾನಿನಲ್ಲಿ ಬಂದಿತು ಬಂಗಾರದ ಬೆಳ್ಳಿಮೋಡವಾಗಿ!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಖಂಡಿತ ಆಗುತ್ತದೆ, ಆಗಬಹುದು
ಎನ್ನುವನಾದ್ಯತೆ ನೂರಕ್ಕೆ ನೂರು -
ಕಾಡಿಗೆ ಭಯಪ್ರವೇಶವಾಗಿ ಸುಂದರಮಂದಿರ
ಅಲ್ಲೇ ನಿರ್ಮಾಣ -
ಹೊಡೆದುಹಾಕುವುದಕ್ಕೆ ಕಾಡು ಬಂದು
ಸುಂದರ ಯುವತಿ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಹನುಮನ ಪ್ರಾಣ ರಾಮನಿಗೆ
ಮೊದಲಲ್ಲೇ 'ಜಯ'ಕಾರ -
ಇವನು ಪಾಂಡವರಲ್ಲಿ ಮೊದಲಿಗ, ಧರ್ಮ
ದೇವತೆಯ ಮಗ -
ಹಸು-ಎಮ್ಮೆ, ಕುರಿಯಂಥ 'ರಾಸು'ಗಳು
ಒಟ್ಟಿಗೆ ಕೂಗುವ 'ರಾಗ' -
ಚುನಾವಣೆಯಲ್ಲಿ ಆರಿಸಿ ಬರಬೇಕಾದರೆ
ಇವುಗಳು ಬೇಕೇಬೇಕು -
ಗತಪ್ರತ್ಯಾಗತ
ಮುಂದೋಡುವ ಪದಗಳು: ವರ, ವರದ, ವರಪ್ರದ, ವರಪ್ರಸಾದ.
ಹಿಂದೋಡುವ ಪದಗಳು: ಭವ, ಸಂಭವ, ಅಸಂಭವ
ನಿನ್ನೆಯ ಉತ್ತರಗಳು:
3 ಅಕ್ಷರ: ಬದನೆ, ದವನ, ನೆನಪು
4 ಅಕ್ಷರ: ಇತಿಹಾಸ, ತಿಮ್ಮನಿಲ್ಲ, ಹಾನಿಕರ, ಸಲ್ಲರಲ್ಲ.
-ಎಲ್.ಜಿ. ಜ್ಯೋತೀಶ್ವರ
-lgjyothish@gmail.com
ಮೊ:9845317141
----
ಲೆಕ್ಕಾ ರಾಜ ರಾಣಿ
1 ಜಗತ್ತಿನ ಅತಿವೇಗದ ಹಾವು ಬ್ಲ್ಯಾಕ್ ಮಾಂಬಾ. ಗಂಟೆಗೆ 16- 19 ಕಿ.ಮೀ. ವೇಗ.
24 ಬಾಕ್ಸ್ ಜೆಲ್ಲಿ ಫಿಶ್ಗೆ ಇಷ್ಟು ಕಣ್ಣುಗಳು ಇರುತ್ತವೆ!
150 ಹಾಕಿ ಸ್ಟಿಕ್ ಇರಬೇಕಾದ ಕನಿಷ್ಠ ಉದ್ದ ಇಷ್ಟು ಸೆಂಟಿಮೀಟರ್.
1898 ಇಷ್ಟನೇ ಇಸವಿಯಲ್ಲಿ ಅಮೆರಿಕದ ನಿಕೋಲ ಟೆಲ್ಸಾ ಎಂಬಾತ ಟಿವಿ ರಿಮೋಟ್ ಕಂಡುಹಿಡಿದ.