ಬೈಟುಕಾಫಿ

ಗಳಿಸುವುದಕ್ಕೆ ಕಳಕೊಳ್ಳಿ

Published On :

ಯಾರಿಗೆ ಗೊತ್ತು, ಅದಕ್ಕಿಂಥ ಹೆಚ್ಚಿನ ಪ್ರೀತಿ ನಿಮಗೆ ಸಿಗುವುದಿದೆಯೇನೋ? ಆ ಕೆಲಸ ಕಳಕೊಂಡರೆ ಕತ್ತೆ ಬಾಲ ಎಂದುಕೊಳ್ಳಿ, ಇದಕ್ಕಿಂಥ ಉತ್ತಮ ಉದ್ಯೋಗ ಸಿಕ್ಕುವ ಅವಕಾಶ ನಿಮ್ಮದಾಗಬಹುದು. ಅಥವಾ ನೀವೇ ಹತ್ತಾರು ಜನರಿಗೆ ಕೆಲಸ ಕೊಡುವ ಸ್ವ ಉದ್ಯಮಿಯಾಗಿ ಬೆಳೆಯುವ ಸಾಧ್ಯತೆಗೆ ಈ ಕ್ಷಣ ಮುನ್ನುಡಿ ಬರೆದಿರಬಹುದು. ಅಯ್ಯೋ ಆ ಆಸ್ತಿ ಕೈತಪ್ಪಿ ಹೋಯಿತೆಂದು ಯಾಕೆ ಕೊರಗುತ್ತೀರ? ಇದಕ್ಕಿಂತ ಹೆಚ್ಚು ಮೌಲ್ಯಯುತ, ಆಸ್ತಿಯ ಮಾಲೀಕರಾಗಲು ಪ್ರಯತ್ನಿಸಬಹುದು... ಕಳೆದುಕೊಂಡದ್ದರ ಬಗ್ಗೆ ಹೀಗೊಂದು ಆಶಾಭಾವದಿಂದ ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಪ್ರತಿ ಬಾರಿ ಕಳೆದುಕೊಂಡಾಗಲೂ ಆ ಸಂದರ್ಭವನ್ನು ಜೀವನದಲ್ಲಿ ಅದಕ್ಕಿಂತ ಉತ್ತಮವಾದುದರ ಗಳಿಕೆಗೆ ನಿಮ್ಮೆದುರು ಸೃಷ್ಟಿಯಾದ ಅವಕಾಶವೆಂದುಕೊಳ್ಳಿ. ಆಗ ಕಳೆದುಹೋದದ್ದರ ನೋವು ನಿಮ್ಮನ್ನು ಬಾಧಿಸುವುದೇ ಇಲ್ಲ. ಈ ಕಳೆದುಕೊಳ್ಳುವ ಸಂದರ್ಭವಿದೆಯಲ್ಲಾ, ಆಗ ನಾವು ಕಳೆದುಕೊಂಡದ್ದಕ್ಕಿಂತ ಅದರ ಬಗ್ಗೆ ಯೋಚಿಸುತ್ತಾ ಚಿಂತೆಗೆ ಬಿದ್ದೇ ಕಳೆದುಕೊಳ್ಳುವುದು ಹೆಚ್ಚು. ವ್ಯಕ್ತಿ, ಸಂಬಂಧ, ವಿಷಯ, ವಸ್ತು ಹೀಗೆ ಅದು ಯಾವುದೇ ಇರಬಹುದು. ನಮ್ಮ ಕೈ ತಪ್ಪಿ ಹೋದ ತಕ್ಷಣ ಜೀವನವನ್ನೇ ಕಳೆದುಕೊಂಡಂತೆ ಕುಳಿತು ಬಿಡುತ್ತೇವೆ. ನಿಜವಾಗಿ ಆಗಲೇ ನಿಮ್ಮ ಕಣ್ಣೆದುರು ಅದಕ್ಕಿಂತ ಹೆಚ್ಚಿನದ್ದು ಬಂದು ನಿಂತಿರುತ್ತದೆ. ಅದನ್ನು ಗ್ರಹಿಸುವುದೇ ಇಲ್ಲ. ಇನ್ನೊಂದು ಅಪಾಯವೆಂದರೆ ಮಹತ್ವಾಕಾಂಕ್ಷೆಯನ್ನೇ ಮರೆಯವುದು. ಹೇಗೆಂದು ಕೇಳುತ್ತೀರಾ? ಒಂದೊಮ್ಮೆ ನಮ್ಮ ನಿರೀಕ್ಷೆಯಂತೆಯೇ ನಡೆಯಿತು ಅಂದುಕೊಳ್ಳಿ. ಜೀವನ ಅಷ್ಟಕ್ಕೇ ನಿಂತುಬಿಡುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ ಲೀಸ್‌ಗೆ ಒಂದು ಮನೆ ಸಿಕ್ಕರೆ ಸಾಕಪ್ಪಾ ಅಂದುಕೊಳ್ಳುತ್ತೇವೆ. ಹತ್ತಾರು ಕಡೆ ತಿರುಗಿದ ಮೇಲೆ ನಿಮ್ಮಲ್ಲಿರುವ ಐದು ಲಕ್ಷಕ್ಕೆ ನಿಲುಕುವ, ನಿಮ್ಮ ನಿರೀಕ್ಷೆಗೆ ಅನುಗುಣವಾಗಿರುವ, ಉತ್ತಮ ಮನೆಯೊಂದು ಸಿಗುತ್ತದೆ. ಸರಿ, ಇವತ್ತು ದಿನ ಸರಿ ಇಲ್ಲ, ನಾಳೆ ಬಂದು ಅಡ್ವಾನ್ಸ್ ಕೊಟ್ಟರಾಯಿತು ಎಂದು ಮನೆ ಮಾಲೀಕರಲ್ಲಿ ತಿಳಿಸಿ ಹೋಗಿರುತ್ತೀರಿ. ಮರುದಿನ ನೀವು ಬರುವಷ್ಟರಲ್ಲಿ ಬೇರೊಬ್ಬರು ಟೋಕನ್ ಮಾಡಿ ಹೋಗಿಬಿಟ್ಟಿರುತ್ತಾರೆ. ಸಹಜವಾಗಿ ಬೇಸರವಾಗುತ್ತದೆ. ಆಗಲೇ ಗೆಳೆಯನ ಸಲಹೆ, ಇದೇ 5 ಲಕ್ಷವನ್ನು ಅಡ್ವಾನ್ಸ್ ಆಗಿ ಕೊಟ್ಟು, ಬ್ಯಾಂಕ್‌ನಲ್ಲಿ ಸಾಲ ತೆಗೆದು ಪುಟ್ಟದೊಂದು ಫ್ಲ್ಯಾಟ್ ಖರೀದಿಸಬಾರದೇಕೆ? ಹಾಗೊಂದು ಯೋಚನೆಯಿಂದಲೇ ರೋಮಾಂಚಿತರಾಗುತ್ತೀರಿ. ಒಂದಷ್ಟು ಕಷ್ಟಪಟ್ಟ ಬಳಿಕ, ಓಡಾಟ- ಪ್ರಯತ್ನದ ನಂತರ ಅಂತೂ ಸ್ವಂತ ಮನೆ ನಿಮ್ಮದಾಗುತ್ತದೆ. ಅವತ್ತು ಲೀಸ್ ಮನೆ ನಿಮ್ಮ ಕೈತಪ್ಪದಿದ್ದರೆ ಸ್ವಂತ ಸೂರಿನ ಅವಕಾಶ ನಿಮ್ಮದಾಗುತ್ತಲೇ ಇರಲಿಲ್ಲ ಅಲ್ಲವೇ? ಹೀಗೆಯೆ ನೀವು ಕಳಕೊಳ್ಳುವ ಪ್ರೀತಿ, ಉದ್ಯೋಗ ಪ್ರತಿಯೊಂದರಲ್ಲೂ ಯೋಚಿಸಿ. ಒಂದನ್ನು ಕಳಕೊಳ್ಳುವುದೆಂದರೆ, ಇನ್ನೂ ಉತ್ತಮವಾದುದನ್ನು ಪಡೆಯುವ ಅವಕಾಶ ಎಂದು ಭಾವಿಸಿ ಮುನ್ನುಗ್ಗಿ. <

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.