ಹೀಗೇ ಆದರೆ ಭವಿಷ್ಯದ ಗತಿ...?
ದೇವರ ಮೇಲೆ ಭಕ್ತಿ ಜಾಸ್ತಿ. ಬಡವರನ್ನು ಕಂಡರೆ ಕನಿಕರ. ಎಷ್ಟೋ ಬಾರಿ ಕೇಳಿದವರಿಗೆ ನನ್ನಲ್ಲಿ ಇದ್ದುದನ್ನು ಕೊಟ್ಟು ಬಿಟ್ಟಿದ್ದೇನೆ. ಇದುವರೆಗೆ ನನಗಾಗಿ ಏನೂ ಉಳಿಸಿಕೊಂಡಿಲ್ಲ. ಎಲ್ಲರಿಗೂ ಸಹಾಯ ಮಾಡಿದರೂ ನನ್ನ ಕಷ್ಟದಲ್ಲಿ ನೆರವಾದವರು ಬಹಳ ಕಡಿಮೆ. ಆದರೂ ನನಗೆ ಬದುಕುವ ಹಠ ಜಾಸ್ತಿ. ಸ್ವಾರ್ಥಿಗಳ ಮಧ್ಯೆ ನಾನು ಈ ರೀತಿ ಇದ್ದರೆ ನನಗೆ ಭವಿಷ್ಯ ಇದೆಯಾ?
- ಬರ್ಕಲಿ ರಮೇಶ್, ಮಂಡ್ಯ
ನಿಮ್ಮ ಪರೋಪಕಾರ ಬುದ್ಧಿ ಮತ್ತು ಬದುಕುವ ಹಠ ಎರಡನ್ನೂ ಪ್ರಶಂಸಿಸುತ್ತೇನೆ. ಬೇರೆಯವರಿಗೆ ನೆರವಾಗಬೇಕು ನಿಜ, ಆದರೆ ಅದರಿಂದ ನಾವು ಬೀದಿಗೆ ಬರುವಂತೆ ಆಗಬಾರದು ಅಲ್ಲವೆ? ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಖಂಡಿತವಾಗಿ ತಪ್ಪಲ್ಲ. ಆದರೆ ಅದರಿಂದ ನೀವು ಮತ್ತು ನಿಮ್ಮನ್ನು ನಂಬಿಕೊಂಡಿಕೊಂಡಿರುವವರಿಗೆ ತೊಂದರೆ ಆಗಬಾರದು ಅಲ್ಲವೆ? ಸಹಾಯ ಬುದ್ಧಿ ಒಂದು ಮಿತಿಯಲ್ಲಿದ್ದರೆ ಯಾವುದೇ ತೊಂದರೆ ಇಲ್ಲ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

