ಬೈಟುಕಾಫಿ

ಚಿಂತೆಯ ಕಾರಣ

Published On :

ತನ್ನ ತರಗತಿಯ ಪುಟಾಣಿಗಳಲ್ಲಿ ಒಬ್ಬ ಹುಡುಗ ಯಾವಾಗಲೂ ಚಿಂತಾಗ್ರಸ್ತನಾಗಿ ಅನಾಸಕ್ತಿಯಿಂದ ಇರುವುದನ್ನು ಉಪಾಧ್ಯಾಯರು ಗಮನಿಸಿದರು.
'ನಿನಗೇನು ಚಿಂತೆ, ಮಗೂ?' ಉಪಾಧ್ಯಾಯರು ಕೇಳಿದರು.
'ನನ್ನ ಹೆತ್ತವರು' ಎಂದು ಹೇಳಿದನಾತ. 'ನನಗೆ ಊಟ, ತಿಂಡಿ, ಉಡುಪು ಕೊಡಿಸಿ, ನನ್ನನ್ನು ಊರಿನ ಅತ್ಯುತ್ತಮ ಶಾಲೆಗೆ ಕಳುಹಿಸಲು ನನ್ನ ತಂದೆಯವರು ಇಡೀ ದಿನ ದುಡಿಯುತ್ತಾರೆ. ಅಲ್ಲದೇ ನನ್ನನ್ನು ಕಾಲೇಜಿಗೆ ಕಳುಹಿಸಬೇಕೆಂದು ಅವರು ನಿಗದಿತ ಅವಧಿಗಿಂತಲೂ ಹೆಚ್ಚು ಸಮಯ ದುಡಿಯುತ್ತಾರೆ. ನನ್ನ ಅಮ್ಮ ಅಡುಗೆ ಮಾಡುವುದು, ಸ್ವಚ್ಛಗೊಳಿಸುವುದು, ಇಸ್ತ್ರಿ ಹಾಕುವುದು, ಸಾಮಾನುಗಳನ್ನು ಕೊಂಡು ತರುವುದು.. ಮೊದಲಾದ ಕೆಲಸಗಳಲ್ಲಿ ಇಡೀ ದಿನ ಕಳೆಯುತ್ತಾರೆ. ಹೀಗಾಗಿ ನನಗೆ ಯಾವ ಚಿಂತೆಯೂ ಇಲ್ಲ' ಎಂದ ಹುಡುಗ.
'ನೀನೇಕೆ ಮತ್ತೆ ಚಿಂತಾಕ್ರಾಂತನಾಗಿದ್ದೀ?'
'ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಬಹುದೆಂದು ನನಗೆ ಹೆದರಿಕೆಯಾಗುತ್ತದೆ!' <

- ನಂದಿನಿ ಡಿ. ಕಾಮತ್
-ಮೂಲ: ಅಂತೋನಿ ಡಿಮೆಲ್ಲೊ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.