ಬೈಟುಕಾಫಿ

ಘೋಷ್ ಕುರಿತು ಸಂವಾದ

Published On :

ಕಳೆದ ಮೇ 30ರಂದು ನಿಧನರಾದ ಬೆಂಗಾಲಿ ಸಿನಿಮಾ ನಿರ್ದೇಶಕ-ನಿರ್ಮಾಪಕ ರಿತುಪರ್ಣೋ ಘೋಷ್ ಅವರ ಗೌರವಾರ್ಥ ಬೆಂಗಳೂರಿನ ಕೆ.ವಿ. ಸುಬ್ಬಣ್ಣ ಆಪ್ತ ಸಮೂಹವು ಗಿರೀಶ್ ಕಾಸರವಳ್ಳಿಯವರ ಜತೆ ರಿತುಪರ್ಣೋ ಘೋಷ್ ನಿರ್ದೇಶಿಸಿದ, ಪ್ರಶಸ್ತಿ ಪುರಸ್ಕೃತ ಎರಡು ಬೆಂಗಾಲಿ ಸಿನಿಮಾ ಕುರಿತು ಚರ್ಚೆಯನ್ನು ಇದೇ ತಿಂಗಳ 8 ಮತ್ತು 9ರಂದು ಏರ್ಪಡಿಸಿದೆ.
ಜೂನ್ 8 ರಂದು ಸಂಜೆ 6 ಗಂಟೆಗೆ 'ಉನಿಶೆ ಏಪ್ರಿಲ್‌' ಮತ್ತು ಜೂನ್ 9 ರಂದು ಸಂಜೆ 4 ಗಂಟೆಗೆ 'ದಹನ್‌'ಗಳ ಕುರಿತು ಚರ್ಚೆ ನಡೆಯಲಿದೆ. ಈ ಎರಡೂ ಚಿತ್ರಗಳ ನಿರ್ದೇಶನ, ನಿರ್ಮಾಣ, ಚಿತ್ರಕಥೆ ರಿತುಪರ್ಣೋ ಘೋಷ್ ಅವರದ್ದು.
ಹೆಚ್ಚಿನ ಮಾಹಿತಿಗಾಗಿ ಗೋಪಿನಾಥ್ ಬಿ.ಆರ್ ಅವರನ್ನು ಮೊ: 9964152999 ಮೂಲಕ ಸಂಪರ್ಕಿಸಬಹುದು.
ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ನಂ. 151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ 1ನೇ ಹಂತ, (ದಯಾನಂದ ಕಾಲೇಜ್ ಸಮೀಪ, 'ವಸುಧಾ ಭವನ'ದ ಎದುರು), ಬೆಂಗಳೂರು-560 078.

ಹುತ್ತದಲ್ಲಿ ಹುತ್ತ
ಅಂತರಂಗ ತಂಡ ಜೂನ್ 9 (ಭಾನುವಾರ) ಸಂಜೆ 7 ಗಂಟೆಗೆ ಕೆ.ಎಚ್. ಕಲಾಸೌಧದಲ್ಲಿ ಕೈಲಾಸಂ ನಾಟಕ 'ಹುತ್ತದಲ್ಲಿ ಹುತ್ತ' ಪ್ರದರ್ಶಿಸಲಿದೆ. ಮಾಹಿತಿಗೆ ಅಂಕಲ್ ಶ್ಯಾಂ ಅವರನ್ನು (ಮೊ: 9880914509) ಸಂಪರ್ಕಿಸಬಹುದು.
ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ.
ಸಮಯ: ಸಂಜೆ 7 ಗಂಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.