ಬೈಟುಕಾಫಿ

ಇವರು ಪ್ರಾಣರಕ್ಷಕರು

Published On :

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಬೆಂಕಿ ಬಿದ್ದಾಗ ಮಾತ್ರ ಇವರು ನೆನಪಾಗುತ್ತಾರೆ!
ಇವರು ಪೊಲೀಸರಲ್ಲ, ಆದರೆ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡಲೆಂದೇ ಇರುವ ಸಿಬ್ಬಂದಿ. ಇವರು ಸಹ ಗೃಹ ಇಲಾಖೆಗೆ ಒಳಪಡುತ್ತಾರೆ. ಅವರೇ ಅಗ್ನಿಶಾಮಕ ದಳ ಸಿಬ್ಬಂದಿ.
ಇವರು ಬೆಂಕಿ ಅನಾಹುತ ಸಂಭವಿಸಿದಾಗ ಮಾತ್ರವಲ್ಲ, ಬೇರೆ ಪರಿಸ್ಥಿತಿಯಲ್ಲೂ ನಿಮ್ಮ ಪ್ರಾಣ ರಕ್ಷಿಸುವವರು.
ಆಕಸ್ಮಿಕ ಬೆಂಕಿ ಅನಾಹುತ, ಅಡುಗೆ ಅನಿಲ ಸ್ಫೋಟಗೊಂಡಾಗ, ಕಟ್ಟಡಗಳು ಬಿದ್ದು ಅದರಡಿಯಲ್ಲಿ ಜನ ಸಿಕ್ಕಿಹಾಕಿಕೊಂಡಾಗ, ಮಳೆ ಬಂದಾಗ ಮರ ಬಿದ್ದು ಯಾವುದಾದರೂ ಅನಾಹುತ ಸಂಭವಿಸಿದಾಗ, ಯಾರಾದರೂ ಮರದ ಕೆಳಗೆ ಸಿಕ್ಕಿಕೊಂಡಾಗ, ವಾಹನಗಳು ಜಖಂಗೊಂಡಾಗ, ಕೆಲವೊಮ್ಮೆ ಮಳೆ ವೇಳೆ ಮಕ್ಕಳು ಅಥಳಾ ಹಿರಿಯರು ಚರಂಡಿಯಲ್ಲಿ ಕೊಚ್ಚಿ ಹೋದಾಗ.. ಸೇರಿದಂತೆ ಇಂತಹ ಸಾಕಷ್ಟು ಪ್ರಕರಣಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ರಕ್ಷಣೆಗೆ ಮುಂದಾಗುತ್ತಾರೆ.
ಮನೆ, ಕಚೇರಿ, ಸಾರ್ವಜನಿಕ ಸ್ಥಳ ಸೇರಿ ಯಾವುದೇ ಸ್ಥಳದಲ್ಲಿ ಬೆಂಕಿ ಅನಾಹುಸ ಸಂಭವಿಸಿದರೆ, ಅದನ್ನು ನಂದಿಸಿ ಜನರನ್ನು ಕಾಪಾಡಿ ಅವರ ಪ್ರಾಣ ಉಳಿಸಲೆಂದೇ ಇರುವವರು ಈ ಅಗ್ನಿಶಾಮಕ ದಳದ ಸಿಬ್ಬಂದಿ.
ಹಾಗಾಗಿ ಬೆಂಕಿ ಬಿದ್ದಾಗ ಯಾವೇದು ಕಾರಣಕ್ಕೂ ಹೆದರದೆ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿ. ಮುಂದಾಗುವ ಅನಾಹುತ ತಪ್ಪಿಸಿ.
ನಿಮ್ಮ ಬಡಾವಣೆ, ಮನೆ ಸುತ್ತಮುತ್ತ ಇಂತಹ ಅನಾಹುತಗಳು ಸಂಭವಿಸಿದಾಗ ಯಾವುದೇ ಕಾರಣಕ್ಕೂ ಭಯಪಡದೆ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ನೀಡಿ. ಇದು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಆ ಸಂಖ್ಯೆ 101.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.