ಭಗವಂತನಲ್ಲಿ ಅಚಲಭಕ್ತಿ
'ಮನುಷ್ಯ ಮೂಲತಃ ಧಾರ್ಮಿಕ ಜೀವಿ. ಯಾವ ದೇಶದಲ್ಲೇ ಹುಟ್ಟಲಿ ಅವನು ಒಂದಿಲ್ಲೊಂದು ಧರ್ಮಕ್ಕೆ ಒಳಪಟ್ಟು ಭಗವಂತನನ್ನು ಆರಾಧಿಸುತ್ತಾನೆ. ಧರ್ಮ ಮತ್ತು ದೇವರುಗಳು ಬೇರೆಯಾದರೂ ಅಂತರಾಳದಲ್ಲಿ ಪುಟ್ಟುವ ಭಕ್ತಿ ಮಾತ್ರ ಒಂದೇ. ಭಗವಂತ ಒಲಿಯುವುದು ಆ ಭಕ್ತಿಗೆ. ಈ ಭಕ್ತಿ, ಶ್ರದ್ಧೆ, ವ್ಯಾಕುಲತೆಗಳು ಭಕ್ತನಿಗೆ ಭಗವಂತನನ್ನು ಸಾಕ್ಷಾತ್ಕರಿಸುತ್ತವೆ.
ಎಲ್ಲಿಯವರೆಗೂ ಪ್ರಪಂಚದಲ್ಲಿ ಸಾವು ಎಂಬುದು ಇರುತ್ತದೆಯೋ, ಮಾನವನ ಹೃದಯದಲ್ಲಿ ದುರ್ಬಲತೆ ಎಂಬುದು ಇರುತ್ತದೆಯೋ, ಬಳಲಿದಾಗ ಹೃದಯಾಂತರಾಳದಿಂದ ಒಂದು ಪ್ರಾರ್ಥನೆ ಹೊಮ್ಮುವುದೋ ಅಲ್ಲಿಯವರೆಗೂ ದೇವರಲ್ಲಿ ನಂಬಿಕೆಯೆಂಬುದು ಇದ್ದೇ ಇರುತ್ತದೆ.
ಅತ್ಯುನ್ನತ ಸಾಕ್ಷಾತ್ಕಾರ ಮಾಡಿ ಕೊಂಡವನು ಎಲ್ಲ ಪರಿಸ್ಥಿತಿಗಳಲ್ಲೂ ಸ್ಥಿರಬುದ್ಧಿಯುಳ್ಳವನಾಗಿ ಇರುತ್ತಾನೆ. ಅಂತಹ ಆತ್ಮ ಸಾಕ್ಷಾತ್ಕಾರವನ್ನು ಹೊಂದಿರುವವನು ಶಕ್ತಿಯ ಉಗ್ರಾಣದಂತಿರುತ್ತಾನೆ.
ಎಲ್ಲರೂ ಪೂಜಿಸುವುದು ಆ ಸರ್ವಶಕ್ತನಾದ ಪರಮಾತ್ಮನನ್ನೇ. ಅವನೇ ಶುದ್ಧ ಜ್ಞಾನಸ್ವರೂಪಿ. ಭಗವಂತ ಅವರವರ ತಿಳಿವಳಿಕೆ, ಭಾವನೆಗಳಿಗೆ ಅನುಗುಣವಾಗಿ ಕಾಣಿಸಿಕೊಳ್ಳುತ್ತಾನೆ.
ಶ್ರದ್ಧೆಯನ್ನು ಹೊರಗಿನಿಂದ ತುಂಬಲು ಸಾಧ್ಯವೇ? ಸ್ವಂತ ಅನುಭವವಾಗದ ಹೊರತು ನಿಜವಾದ ಶ್ರದ್ಧೆಯುಂಟಾಗಲು ಸಾಧ್ಯವಿಲ್ಲ. ಪರಬ್ರಹ್ಮನ ಆವಿರ್ಭಾವವೆಂದು ಮನಗಂಡು ಯಾರನ್ನೂ ತಿರಸ್ಕಿಸಬೇಡಿ. ಯಾರನ್ನೂ ಪಾಪಿಯೆನ್ನಬೇಡಿ'.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

