'ಸಮರ್ಥನಂ'ನ ಹೊಸ ಶಾಲೆ
ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಈಗ ಮತ್ತೊಂದು ಸಾಧನೆಗೆ ಕೈಹಾಕಿದೆ. ಸಮರ್ಥನಂನ ಬುದ್ಧಿ ವಿಕಲಚೇತನ ಮಕ್ಕಳಿಗಾಗಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ತೆರೆದಿದೆ. ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಈ ಶಾಲೆಯಲ್ಲಿ ಶಿಕ್ಷಣ ಉಚಿತ. ಇದರ ಜತೆಗೆ ಸಮರ್ಥನಂ ಬನ್ನೇರುಘಟ್ಟ ಸಮೀಪವಿರುವ ಹುಳಿಮಾವು ಸೋಮೇಶ್ವರ ಬಡಾವಣೆಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಉಚಿತ ವಸತಿ ಪ್ರೌಢಶಾಲೆಯನ್ನು ಆರಂಭಿಸಿದೆ.
2013-14ನೇ ಸಾಲಿನ ತರಗತಿ ದಾಖಲಾತಿಗಳನ್ನು ಈಗಾಗಲೇ ಆರಂಭಿಸಲಾಗಿದೆ. 1ರಿಂದ 10ನೇ ತರಗತಿವರೆಗಿನ ಬುದ್ಧಿವಿಕಲಚೇತನ ಮಕ್ಕಳು ಈ ಶಾಲೆಗಳಲ್ಲಿ ಶಿಕ್ಷಣ ಪಡೆಯಬಹುದು. ಸೀಟುಗಳು ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಆದ್ಯತೆ.
ಸಮರ್ಥನಂ ತನ್ನ ಶಾಲೆಗಳಲ್ಲಿ ಅನುಭವಿ ಶಿಕ್ಷಕರನ್ನು ಹೊಂದಿದೆ. ಕಂಪೂಟರ್ ಲ್ಯಾಬ್, ಸ್ಪೋಕನ್ ಇಂಗ್ಲೀಷ್ ಕೋರ್ಸ್, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ವಿಶೇಷ ಟ್ಯೂಷನ್ ವ್ಯವಸ್ಥೆ ಕೂಡ ಸಮರ್ಥನಂನಲ್ಲಿದೆ.
ಸಮರ್ಥನಂ ಹಿರಿಯ ಪ್ರಾಥಮಿಕ ಶಾಲೆ ಸೇರಬಯಸುವವರು- ನಂ. 39, 15ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, 4ನೇ ಹಂತ, ಎಚ್‌ಎಸ್‌ಆರ್ ಬಡಾವಣೆ, ಬೆಂಗಳೂರು. 080-25721444, 9901868801, 94449864780 ಸಂಪರ್ಕಿಸಿ.
ಉಚಿತ ವಸತಿ ಶಾಲೆಗೆ- ನಂ. 9, ರೆಡ್ಡಿ ಬಿಲ್ಡಿಂಗ್, ಸೋಮೇಶ್ವರ ಬಡಾವಣೆ, ಹುಳಿಮಾವು, ಬನ್ನೇರುಘಟ್ಟ ರಸ್ತೆ, ಬೆಂಗಳೂರು. 080-264480589, 9449864776, 98880247209 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

