ಬಾಲಿವುಡ್ ನ 'ಆಕ್ಷನ್ ಕ್ವೀನ್' ಕತ್ರಿನಾ ಕೈಫ್, 'ಧೂಮ್- 3' ಚಿತ್ರ ಸ್ಟಂಟ್ ಸೀನ್ ಗಳಿಗೆಲ್ಲ ಕೈಕೊಟ್ಟಿದ್ದಾಳಂತೆ. ತನ್ನ ಬಾಡಿ ಮೇಲೆ ಆಕೆಗಿರುವ ಕಾಳಜಿಯೇ ಇದಕ್ಕೆ ಕಾರಣವಂತೆ.
ನೀವು 'ಏಕ್ ಥಾ ಟೈಗರ್' ನೋಡಿದ್ದೀರಲ್ವಾ? ಹೋಗ್ಲಿ, 'ಝಿಂದಗಿ ನ ಮಿಲೇಗಿ ದೊಬಾರಾ'ನಾದ್ರೂ ನೋಡಿದ್ದೀರಲ್ವಾ? ನೋಡಿಲ್ಲಾ ಅಂದ್ರೆ, ನೋಡಿ. ಕೊನೇಪಕ್ಷ ಕತ್ರೀನಾಳ ಆಕ್ಷನ್ಗೋಸ್ಕರನಾದ್ರೂ ನೋಡ್ಲೇಬೇಕು. ಕೈಫ್ ಳ ಅಂಥ ಜಂಪ್ಗಳನ್ನು 'ಆಕ್ಷನ್ ಬ್ರಹ್ಮ' ಅಕ್ಷಯ್ ಕುಮಾರ್ ಕೂಡ ಹೊಗಳಿದ್ದಾರೆ. ಅದರಲ್ಲೂ 'ಏಕ್ ಥಾ ಟೈಗರ್'ನಲ್ಲಿ ಸಲ್ಮಾನ್ಖಾನ್ನ ಕಸರತ್ತಿಗಿಂತ ಹೆಚ್ಚು ಗಮನ ಸೆಳೆಯೋದು ಕತ್ರೀನಾಳ ಸ್ಟಂಟ್ ಗಳೇ.
ಆದರೆ, 'ನಾನೀಗ ಅಂಥ ಸಾಹಸವನ್ನು ಮಾಡುವ ಹುಮ್ಮಸ್ಸಿನಲ್ಲಿಲ್ಲ. ಸಣ್ಣಪುಟ್ಟ ಪೆಟ್ಟಾಗುತ್ತೆ ಎಂಬ ಭಯ ಕಾಡ್ತಿದೆ' ಎಂದು ಸಿಂಪಲ್ಲಾಗಿ ಹೇಳಿ ಕತ್ರಿನಾ 'ಧೂಮ್- 3' ಸಾಹಸ ದೃಶ್ಯಗಳಿಂದ ದೂರವುಳಿದಿದ್ದಾಳೆ.