ಬೈಟುಕಾಫಿ

ಯಜ್ಞಾ ಶೆಟ್ಟಿ, ನಟಿ

Published On :

1.    ನಿಮ್ಮ ಪ್ರಕಾರ ನಟಿಯಾಗಲು ಮಾಡಬೇಕಾದ 'ಯಜ್ಞ-ಯಾಗ' ಯಾವುದು ?
    - ಅವೆಲ್ಲ ಅನಗತ್ಯ, ನಟನೆಯ ಮಂತ್ರ- ತಂತ್ರ ಗೊತ್ತಿದ್ರೆ ಸಾಕು.
2.    'ಲವ್ ಗುರು'ನಲ್ಲಿ ಮಿಂಚಿದ ನಿಮ್ಮ ರಿಯಲ್ ಲವ್ ಗುರು ಯಾರು?
    - ಇನ್ನೂ 'ಗುರು'ತಿಸಲು ಆಗಿಲ್ಲ
3.    ಅದ್ಸರಿ... ಪ್ರತಿನಿತ್ಯ ನಿಮ್ಮ ದಿನ ಆರಂಭವಾಗುವುದು ಹೇಗೆ ?
    - 'ಎದ್ದೇಳು ಮಂಜುನಾಥ.. ಏಳು ಬೆಳಗಾಯಿತು' ಗೀತೆಯಿಂದ. (ಕಾಲ್ಪನಿಕ)

-ರವಿಕಾಂತ ಕುಂದಾಪುರ
ravikantha27@gmail.com

---
ಹಾರ್ಡ್ ವರ್ಡ್
ಈಗಲೂ ಓದಬೇಕೆಂಬಾಸೆ..
ನಾನು ಪದವಿ ಮುಗಿಸಿದ್ದೇನೆ. ಪಿ.ಜಿ. ಮಾಡುವ ಆಸೆ ತುಂಬಾ ಇತ್ತು. ಆದರೆ ಮನೆಯಲ್ಲಿ ಮದುವೆ ಮಾಡಿಬಿಟ್ಟರು. ಈಗಲೂ ನನ್ನ ಓದಬೇಕೆಂಬ ಆಸೆ ಇದ್ದೇ ಇದೆ. ಹೇಗೆ ನನ್ನ ಆಸೆ ಪೂರೈಸಿಕೊಳ್ಳಲಿ?
- ಸುಜಾತಾ ಜಾಗೀರ್ದಾರ್, ವಿಜಾಪುರ
ನಿಮ್ಮ ಓದಬೇಕೆಂಬ ಆಸೆ ಒಳ್ಳೆಯದೇ ಆಗಿದೆ. ಇದಕ್ಕಾಗಿ ನೀವು ನಿರಾಶರಾಗಬೇಕಾಗಿಲ್ಲ, ಈಗಲೂ ಓದನ್ನು ಮುಂದುವರಿಸಬಹುದು. ನೀವು ಯುನಿವರ್ಸಿಟಿಗೆ ನಿಯಮಿತ ವಿದ್ಯಾರ್ಥಿನಿ ಆಗಿಯೇ ಸೇರಿಕೊಳ್ಳಬಹುದು. ಅಂತಹ ಅನುಕೂಲವಿಲ್ಲದಿದ್ದರೆ ಅಂಚೆ ತೆರಪಿನ ಮೂಲಕ ಸ್ನಾತಕೋತ್ತರ ಪದವಿ ಪಡೆಯಬಹುದು. ಈಗ ಎಷ್ಟೋ ವಿ.ವಿ.ಗಳು ಈ ಅನುಕೂಲಗಳನ್ನು ಕಲ್ಪಿಸಿವೆ. ಆದ್ದರಿಂದ ನಿಮಗೆ ಅನುಕೂಲವಾಗುವ ವಿ.ವಿ.ಯನ್ನು ಆಯ್ಕೆ ಮಾಡಿಕೊಂಡು, ಓದನ್ನು ಮುಂದುವರಿಸಿ. <

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

-ಡಾ. ಸ್ಯಾಟಲೈಟ್
anekaby2@gmail.com

---
ಪದಸ್ಪರ್ಶ
ಮತದಾನ

ದಾನ ದಾನಗಳಲ್ಲಿ ಶ್ರೇಷ್ಠದಾನ ಯಾವುದು ಅಂತ ರಾಜಕಾರಣಿಗಳಿಗೆ ಪ್ರಶ್ನೆ ಕೇಳಿದರೆ ಅವರು ಹೇಳುವುದು ಮತದಾನ ಎಂದು!
- ಕಾಳೀಹುಂಡಿ ಶಿವಕುಮಾರ್, ಮೈಸೂರು

ವೋಟು ಕೊಟ್ಟೋನ್ ಕೋಡಂಗಿ, ಇಸ್ಕೊಂಡೋನ್ ಈರಭದ್ರ!
- ಪಿ.ಜೆ. ರಾಘವೇಂದ್ರ, ಮೈಸೂರು

ಯೋಚನೆ ಮಾಡದೇ, ಮತ-ದಾನ ಮಾಡಿದ ಪ್ರಜೆಗಳು, ನಂತರದ ದಿನಗಳಲ್ಲಿ ಬಲಿದಾನ. ಕಾರಣ, ನಮ್ಮಲ್ಲಿರಲಿ ಸಾವಧಾನ!
- ಪವನಕುಮಾರ ಕೆ.ವಿ., ಬಳ್ಳಾರಿ

ಬೇರೆಲ್ಲ ದಾನಗಳು ಹಕ್ಕಲ್ಲ ಆದರೆ ಮತದಾನ ನಮ್ಮ ಹಕ್ಕು.
- ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಬೆಂಗಳೂರು
---
ಸುಹಾಸಿನಿ
ಆ್ಯಕ್ಷನ್ಗೆ ಕೈಕೊಟ್ಟ ಕೈಫ್!


ಬಾಲಿವುಡ್ನ 'ಆ್ಯಕ್ಷನ್ ಕ್ವೀನ್' ಕತ್ರಿನಾ ಕೈಫ್, 'ಧೂಮ್- 3' ಚಿತ್ರ ಸ್ಟಂಟ್ ಸೀನ್ಗಳಿಗೆಲ್ಲ ಕೈಕೊಟ್ಟಿದ್ದಾಳಂತೆ. ತನ್ನ ಬಾಡಿ ಮೇಲೆ ಆಕೆಗಿರುವ ಕಾಳಜಿಯೇ ಇದಕ್ಕೆ ಕಾರಣವಂತೆ.
ನೀವು 'ಏಕ್ ಥಾ ಟೈಗರ್' ನೋಡಿದ್ದೀರಲ್ವಾ? ಹೋಗ್ಲಿ, 'ಝಿಂದಗಿ ನ ಮಿಲೇಗಿ ದೊಬಾರಾ'ನಾದ್ರೂ ನೋಡಿದ್ದೀರಲ್ವಾ? ನೋಡಿಲ್ಲಾ ಅಂದ್ರೆ, ನೋಡಿ. ಕೊನೇಪಕ್ಷ ಕತ್ರೀನಾಳ ಆ್ಯಕ್ಷನ್ಗೋಸ್ಕರನಾದ್ರೂ ನೋಡ್ಲೇಬೇಕು. ಕೈಫ್ಳ ಅಂಥ ಜಂಪ್ಗಳನ್ನು 'ಆ್ಯಕ್ಷನ್ ಬ್ರಹ್ಮ' ಅಕ್ಷಯ್ಕುಮಾರ್ ಕೂಡ ಹೊಗಳಿದ್ದಾರೆ. ಅದರಲ್ಲೂ 'ಏಕ್ ಥಾ ಟೈಗರ್'ನಲ್ಲಿ ಸಲ್ಮಾನ್ಖಾನ್ನ ಕಸರತ್ತಿಗಿಂತ ಹೆಚ್ಚು ಗಮನ ಸೆಳೆಯೋದು ಕತ್ರೀನಾಳ ಸ್ಟಂಟ್ಗಳೇ.
ಆದರೆ, 'ನಾನೀಗ ಅಂಥ ಸಾಹಸವನ್ನು ಮಾಡುವ ಹುಮ್ಮಸ್ಸಿನಲ್ಲಿಲ್ಲ. ಸಣ್ಣಪುಟ್ಟ ಪೆಟ್ಟಾಗುತ್ತೆ ಎಂಬ ಭಯ ಕಾಡ್ತಿದೆ' ಎಂದು ಸಿಂಪಲ್ಲಾಗಿ ಹೇಳಿ ಕತ್ರಿನಾ 'ಧೂಮ್- 3' ಸಾಹಸ ದೃಶ್ಯಗಳಿಂದ ದೂರವುಳಿದಿದ್ದಾಳೆ.
-------
ಮಾಹಿತಿ.ಕಾಂ
ಶುಕ್ರಗ್ರಹ

ಸೂರ್ಯನಿಗೆ ಅತಿ ಸಮೀಪದ ಎರಡನೆ ಗ್ರಹ. ಸೂರ್ಯನನ್ನು 224.7 ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ.
ರಾತ್ರಿಯ ಆಗಸದಲ್ಲಿ ಚಂದ್ರನ ನಂತರ ಅತ್ಯಂತ ಪ್ರಕಾಶಮಾನವಾದ ಕಾಯ.
ಶುಕ್ರಗ್ರಹ ಮುಂಜಾನೆ, ಮುಸ್ಸಂಜೆಗಳಲ್ಲಿ ಚೆನ್ನಾಗಿ ಕಾಣಿಸುವುದರಿಂದ  ಇದಕ್ಕೆ 'ಹಗಲು ನಕ್ಷತ್ರ', 'ಸಂಜೆ ನಕ್ಷತ್ರ' ಎಂದೂ ಕರೆಯುತ್ತಾರೆ.
ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ. ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ!
--
ಸಿಲ್ಲಿ ಕ್ವಿಜ್
ಗುರುವಿನ ಜತೆ ಜಗಳ ನಡೆದ ದಿನಕ್ಕೆ
ಏನೆನ್ನಬಹುದು?
- ಗುರುವಾರ (ಗುರುಗಿಆಖಅ)

-ಆರ್.ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.