ನೆನಪಿನ ಶಕ್ತಿ ನಿರ್ಧರಿಸುವ ಕೊಬ್ಬು!
ನನ್ನ ಸಹೋದ್ಯೋಗಿಗಳಿಗೆ ಯಾವಾಗಲೂ ಹೇಳುತ್ತಿರುತ್ತೇನೆ, 'ವಿಚಾರ ಎಷ್ಟೇ ಸಣ್ಣದಾದರೂ ಅಲಕ್ಷ್ಯ ಮಾಡಬೇಡಿ' ಎಂದು. ನಾವು ಮೈಯ್ಯಾಸ್ನಿಂದ ಚಕ್ಕುಲಿ, ಕೋಡುಬಳೆ, ಖಾರಾ ಮತ್ತಿತರ ತಿನಿಸುಗಳನ್ನು ತಯಾರಿಸುತ್ತೇವೆ. ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆಯೂ ಇದೆ. ಇಂಥ ತಿನಿಸುಗಳ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳಿಗೆ ಎಷ್ಟು ಮಹತ್ವ ಕೊಡುತ್ತೇವೆಯೋ ಅಷ್ಟೇ ಪ್ರಾಮುಖ್ಯವನ್ನು ಕರಿಯುವ ಎಣ್ಣೆಗೂ ನೀಡುತ್ತೇವೆ. ಒಮ್ಮೆ ಬಳಸಿದ ಎಣ್ಣೆಯನ್ನೇ ಅದೇ ಸ್ಥಿತಿಯಲ್ಲಿ ಮತ್ತೆಮತ್ತೆ ಬಳಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ ಇಲ್ಲ. ತಾಜಾ ಎಣ್ಣೆಯನ್ನೇ ಬಳಸುತ್ತೇವೆ. ಅಲ್ಪಪ್ರಮಾಣದಲ್ಲಿ ಕರಿದ ಎಣ್ಣೆ ಉಳಿದಿದ್ದರೆ ಅದು ತಾನಾಗಿಯೇ ಸಂಸ್ಕರಿತಗೊಂಡು ಮತ್ತೆ ಫ್ರೆಶ್ ಆಗುವ ವಿಶಿಷ್ಟ ತಂತ್ರಜ್ಞಾನ ನಮ್ಮಲ್ಲಿದೆ. 'ಇದಕ್ಕೆಲ್ಲಾ ಕೋಟ್ಯಂತರ ರುಪಾಯಿ ಸುರಿಯಬೇಕಾ? ಎಲ್ಲರೂ ಒಮ್ಮೆ ಕರಿದ ಎಣ್ಣೆಯನ್ನೇ ಪುನಃ ಬಳಸುತ್ತಾರೆ ಅಲ್ಲವೆ' ಎಂದು ಸಹೋದ್ಯೋಗಿಯೊಬ್ಬರು ಆ ಸಂದರ್ಭದಲ್ಲಿ ಕೇಳಿದ್ದರು.
ಅವರ ಉದ್ದೇಶ ಅರ್ಥವಾಗಿತ್ತು. ಅನಗತ್ಯವಾಗಿ ಹಣ ಪೋಲು ಮಾಡುವುದು ಏಕೆ? ಉಳಿದ ಎಣ್ಣೆಯನ್ನು ಡ್ರಮ್ನಲ್ಲಿ ತುಂಬಿಟ್ಟುಕೊಂಡು ಮರುದಿನ ಮತ್ತೆ ಬಳಸಿದರಾಯಿತಲ್ಲ ಎನ್ನುವುದು ಅವರ ಚಿಂತನೆ. ಆದರೆ ನನ್ನ ಯೋಚನೆ ಏನೆಂದರೆ ನಾವು ಹಣ ಉಳಿಸುವ ಭರದಲ್ಲಿ ಗ್ರಾಹಕ ಆರೋಗ್ಯದೊಂದಿಗೆ ಆಟವಾಡಬಾರದು ಎನ್ನುವುದು. ಎಣ್ಣೆಯನ್ನು ಸಲಾಡ್ಗಳಲ್ಲಿ ಹಾಗೆಯೇ ಬಳಸಿದರೆ ತೊಂದರೆ ಏನಿಲ್ಲ. ಅದನ್ನೇ ಭಾರಿ ಉಷ್ಣತೆಯಲ್ಲಿ ಕಾಯಿಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಗಳಿಂದ ಅದರಲ್ಲಿನ ಒಮೇಗಾ-3 ಕೊಬ್ಬು ಒಮೇಗಾ-6 ಆಗಿ ಪರಿವರ್ತಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಯಾವ ಪದಾರ್ಥದಲ್ಲಿ ಒಮೇಗಾ-3 ಅಧಿಕವಾಗಿರುತ್ತದೆ ಎಂದು ನಾವು ಭಾವಿಸಿರುತ್ತೇವೆಯೊ ಅದೇ ಪದಾರ್ಥದ ಎಣ್ಣೆ ಬಳಸಿ ಸಿದ್ಧಪಡಿಸಿದ ತಿನಿಸಿನಲ್ಲಿ ಒಮೇಗಾ-6 ಜಾಸ್ತಿ ಇದ್ದರೆ ಅದಕ್ಕೆ ಇಂಥ ರಾಸಾಯನಿಕ ಪ್ರಕ್ರಿಯೆಗಳೇ ಕಾರಣ.
ಒಮೇಗಾ-3 ಆರೋಗ್ಯಪೂರ್ಣ ಕೊಬ್ಬು. ಉರಿ ಮತ್ತು ನೋವನ್ನು ಗಣನೀಯವಾಗಿ ತಗ್ಗಿಸುವುದಲ್ಲದೆ ಹೃದಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸೇವಿಸುವ ಆಹಾರದಲ್ಲಿ ಶರೀರಕ್ಕೆ ಅಗತ್ಯವಿರುವ ಪೌಷ್ಟಿಕಾಂಶ, ಆಮ್ಲಜನಕಗಳನ್ನು ಒದಗಿಸಿ, ತ್ಯಾಜ್ಯಗಳನ್ನು ಹೊರಕ್ಕೆ ಕಳಿಸುವುದರಲ್ಲಿಯೂ ಒಮೇಗಾ-3 ಪಾತ್ರವಿದೆ. ನರವ್ಯೂಹ ಬಲಪಡಿಸುವುದು, ದೃಷ್ಟಿ ಸಾಮರ್ಥ್ಯ ಹೆಚ್ಚಿಸುವುದು ಕೂಡ ಇದೇ ಫ್ಯಾಟಿ ಆ್ಯಸಿಡ್. ಇದು ಮುಖ್ಯವಾಗಿ ಮೆದುಳನ್ನು ಕೇಂದ್ರೀಕರಿಸುವುದರಿಂದ ನೆನಪಿನ ಶಕ್ತಿ, ಗ್ರಹಿಕೆ, ಕಲಿಕಾ ಸಾಮರ್ಥ್ಯ, ಮೂಡ್ ಮತ್ತು ಭಾವನೆಗಳ ನಿಯಂತ್ರಣದಲ್ಲಿಯೂ ಇದರ ಪಾತ್ರವುಂಟು. ಚರ್ಮದ ಸಮಸ್ಯೆ, ಮಧುಮೇಹ, ಆಸ್ತಮಾ, ಅಧಿಕ ಕೊಲೆಸ್ಟರಾಲ್ ನಿಯಂತ್ರಣಕ್ಕೂ ಒಮೇಗಾ-3 ಒಳ್ಳೆಯದು. <
-ಡಾ. ಪಿ. ಸದಾನಂದ ಮೈಯ್ಯ
ಮೊ.9900113699 (ಎಸ್ಎಂಎಸ್ಗೆ ಮಾತ್ರ)
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

