ಬೈಟುಕಾಫಿ

ಕಣ್ಣು COOL

ಫ್ಯಾಶನ್ ದುನಿಯಾದಲ್ಲಿ ನಾವು ಧರಿಸುವ ಪ್ರತಿಯೊಂದೂ ಫ್ಯಾಶನ್‌ನ ಭಾಗವೇ. ಕನ್ನಡಕ ಕೂಡ ಹಾಗೆಯೇ. ಆದರೆ ಬೇಸಿಗೆ ಕನ್ನಡಕ...

ಕಣ್ಣು  COOL
Published On :

ವೈಶಾಖದ ಸುಡು ಬಿಸಿಲು ಆರಂಭವಾಗಿದೆ. ಹತ್ತು ಮಾರು ನಡೆದರೆ ಸೂರ್ಯ ನೆತ್ತಿ ಸುಡುತ್ತಿದ್ದಾನೆ ಎಂಬಂತೆ ಭಾಸ. ಕನ್ನಡಕಗಳಿಲ್ಲದೆ ಹೊರಗೆ ಕಾಲಿಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಹಲವರದ್ದು. ಸನ್‌ಗ್ಲಾಸ್ ಖರೀದಿಗೆ ಮುನ್ನ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಇಲ್ಲಿದೆ ಕಿವಿಮಾತು.

ಫ್ಯಾಶನ್ ದುನಿಯಾದಲ್ಲಿ ನಾವು ಧರಿಸುವ ಪ್ರತಿಯೊಂದೂ ಫ್ಯಾಶನ್‌ನ ಭಾಗವೇ. ಕನ್ನಡಕ ಕೂಡ ಹಾಗೆಯೇ. ಆದರೆ ಬೇಸಿಗೆ ಕನ್ನಡಕಗಳನ್ನು ಅದೊಂದೇ ಉದ್ದೇಶಕ್ಕೆ ಬಳಸಬಾರದು. ಇವುಗಳನ್ನು ಕಣ್ಣಿನ ಸಂರಕ್ಷಣೆ ಉದ್ದೇಶದಿಂದ ಉಪಯೋಗಿಸಬೇಕು.
ಸೂರ್ಯನ ಕಿರಣಗಳಿಂದ ಕಣ್ಣಿನ ಸುತ್ತ ಸುಡುತ್ತದೆ. ಕಣ್ಣಿನ ಕಾರ್ನಿಯಾ, ಲೆನ್ಸ್ ಮತ್ತು ರೆಟಿನಾ ನೇರಳಾತೀತ ಕಿರಣಗಳ ಆಹಾರವಾಗಬಹುದು. ಹೀಗಾಗಿ ಸೂರ್ಯನ ಕಿರಣಗಳಿಂದ ಹೊರಹೊಮ್ಮುವ ಬೆಳಕಿನಿಂದ ರಕ್ಷಿಸಿಕೊಳ್ಳಲು ಯುವಿ-ಬ್ಲಾಕಿಂಗ್ ಸನ್‌ಗ್ಲಾಸ್‌ಗಳ ಬಳಕೆ ಸೂಕ್ತ. ಸನ್‌ಗ್ಲಾಸ್ ಎರಡು ಮಹತ್ವದ ದಾರಿಯನ್ನು ತೋರಿಸುತ್ತದೆ. ಬೆಳಕನ್ನು ಫಿಲ್ಟರ್ ಮಾಡುತ್ತದೆ ಮತ್ತು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ.
ಸನ್‌ಗ್ಲಾಸ್ ಅನ್ನು ಯಾವ ಅಂಗಡಿಯಲ್ಲಿ ಕೊಳ್ಳುತ್ತೀರಿ ಅಥವಾ ಅದರ ಬೆಲೆ ಎಷ್ಟು ಎನ್ನುವುದು ಮುಖ್ಯವಲ್ಲ. ಗಮನಿಸಬೇಕಾದ ಅಂಶವೆಂದರೆ ಅಗ್ಗದ ಪಾರದರ್ಶಕ ಸನ್‌ಗ್ಲಾಸ್‌ಗಳು ಹಾಗೂ ಪರಿಮಿತ ಕಿರಣಗಳನ್ನು ತಡೆಹಿಡಿಯುವ ಸನ್‌ಗ್ಲಾಸ್‌ಗಳು ಹಾನಿಯನ್ನು ತರುತ್ತವೆ.
ಸನ್‌ಗ್ಲಾಸ್ ಕೊಳ್ಳುವಾಗ ಗಮನಿಸಬೇಕಾದ ಪ್ರಮುಖ ಸಂಗತಿಗಳು:

  • ದೋಷಯುಕ್ತ ಯುವಿ ಸನ್‌ಗ್ಲಾಸ್‌ನಿಂದ ಮೋಸ ಹೋಗಬೇಡಿ. ನಿಖರವಾದ ಲೇಬಲ್ ಹೊಂದಿದ ಯುವಿ ಸನ್‌ಗ್ಲಾಸ್ ಬಳಸಿ. ಲೆನ್ಸ್‌ಗಳನ್ನು ಪರೀಕ್ಷಿಸಿಕೊಳ್ಳಿ. ನೇರಳಾತೀತ ಕಿರಣಗಳನ್ನು ತಡೆಹಿಡಿಯುತ್ತವೆ ಎಂದು ಖಚಿತ ಪಡಿಸಿಕೊಳ್ಳಿ. ನೇತ್ರತಜ್ಞರನ್ನು ಕೇಳಿ ಕನ್ನಡಕ ಖರೀದಿಸುವುದು ಉತ್ತಮ.
  • ಲೆನ್ಸ್‌ಗಳು (ಮಸೂರ) ಏಕರೂಪವಾಗಿದೆಯೆ ಎಂಬುದನ್ನು ಪರಿಶೀಲಿಸಿ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಬ್ಬಾಗಿ ಕಾಣಿಸುತ್ತದೆಯೇ ಎಂಬುದನ್ನು ಗಮನಿಸಿ. ಸನ್‌ಗ್ಲಾಸ್ ಛಾಯೆ ವಾಹನದ ಬೂದುಬಣ್ಣ ಮತ್ತು ಟ್ರಾಫಿಕ್ ಬೆಳಕನ್ನು ಗುರುತಿಸಲು ಸಹಾಯಕವಾಗಿದೆ.
  • ಮಸೂರಗಳು ಸಮರ್ಪಕವಾಗಿವೆಯೇ ಎಂಬುದನ್ನುಖಾತ್ರಿಪಡಿಸಿಕೊಳ್ಳಿ. ಕೈ ಉದ್ದಗಲಕ್ಕೆ ಮಸೂರ ಹಿಡಿಯಿರಿ. ದೂರದ ಅಂತರವನ್ನು ನೇರವಾದ ಸಾಲಿನಲ್ಲಿ ನೋಡಿ, ನಿಧಾನವಾಗಿ ಲೆನ್ಸ್ ಅನ್ನು ಲೈನ್ ಕಡೆಗೆ ತಿರುಗಿಸಿರಿ. ಈಗ ಲೆನ್ಸ್‌ನ ತುದಿ ತೂಗಾಡುತ್ತಿರುತ್ತದೆ. ವಕೃ ಮತ್ತು ಚಲನೆಯ ಸಮಯದಲ್ಲಿ ವಿರೂಪವಾಗಿದ್ದರಿಂದ ಲೆನ್ಸ್ ನೈಜತೆಯನ್ನು ಹೊಂದಿದೆ ಎಂದರ್ಥ.
  • ಮಸೂರಗಳು ಸಾಕಷ್ಟು ಬೆಳಕನ್ನು ಹೊಂದಿದೆವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಕನ್ನಡಿಯ ಮುಂದೆ ಬೆಳಕನ್ನು ಪರೀಕ್ಷಿಸಿ. ಮಬ್ಬಾಗಿ ಕಾಣದಿದ್ದರೆ ಅವು ಬಳಸಲು ಯೋಗ್ಯ.
  • ಹೊಸ ತಂತ್ರಜ್ಞಾನದಲ್ಲಿ ಪೊಲಾರೈಸ್ಡ್ ಫಿಲ್ಟರ್ ಜೊತೆ ಲೆನ್ಸ್ ನಡುವೆ ಅಂಟಿನ ದ್ರಾವಣ ಬಳಸಲಾಗುತ್ತದೆ. ಅಂಟಿನ ಬಳಕೆ ಇಲ್ಲದೆಯೂ ಫಿಲ್ಟರ್ ಮತ್ತು ಲೆನ್ಸ್ ಉತ್ತಮ ಗುಣಮಟ್ಟ ನೀಡುತ್ತದೆ. ಪೋಲಾರೈಸ್ಡ್ ಮಸೂರಗಳು ವಿಶೇಷವಾಗಿ ನೀರಿನಲ್ಲಿ ಆಡುವ ಕ್ರೀಡೆಗಳಿಗೆ ಸಂಬಂಧಿಸಿದ್ದು, ಸಮತಟ್ಟಾದ ಬೆಳಕಿನ ಕಿರಣಗಳನ್ನು ನಿರ್ಬಂಧಿಸುವುದರ ಜೊತೆ ಪ್ರಕಾಶಮಾನವಾದ ಬೆಳಕಿನ ಪ್ರಮಾಣ ಕುಗ್ಗಿಸುತ್ತದೆ.
  • ಫ್ರೇಮ್ ನಿಮ್ಮ ಮೂಗು ಮತ್ತು ಕಿವಿಗೆ ಸರಿ ಹೊಂದುವಂತೆ ಇರಬೇಕು. ಇವುಗಳು ಇತರೆ ಅಂಗಗಳಿಗೆ ತಾಗಬಾರದು. ಕಿವಿ ಮತ್ತು ಮೂಗಿನ ನಡುವೆ ಸಮಾನ ಭಾರವನ್ನು ಹೊಂದಿರಬೇಕು. ಎರಡು ಬಿಂದುಗಳ ನಡುವೆ ಸಾಕಷ್ಟು ಬೆಳಕನ್ನು ನೀಡಬೇಕು. ಫ್ರೇಮ್ ಕಣ್ಣಿನ ರೆಪ್ಪೆಗಳಿಗೆ ತಾಗುವಂತೆ ಮತ್ತು ಕಣ್ಣಿಗೆ ಕಟ್ಟುವಂತೆ ಇರಬಾರದು.
ಕನ್ನಡಕ ಸ್ವಚ್ಛಗೊಳಿಸುವುದು ಹೇಗೆ?
  • ಮೃದುವಾದ, ಗೆರೆರಹಿತ ಬಟ್ಟೆಗಳನ್ನು ಲೆನ್ಸ್ ಸ್ವಚ್ಛಗೊಳಿಸಲು ಬಳಸಿ.
  • ಟಿಶ್ಯುದಂಥ ಉತ್ಪನ್ನ ಬಳಸಿ.
  • ಲೆನ್ಸ್ ಕ್ಲೀನ್ ಸ್ಪ್ರೆ ಅಥವಾ ನೀರನ್ನು ಸ್ವಚ್ಛಗೊಳಿಸಲು ಬಳಸಬಹುದು.
ಯಾವ ಬಣ್ಣ ಚೆನ್ನ?
  • ಎಷ್ಟು ಪ್ರಮಾಣದ ಬೆಳಕು ನಿಮ್ಮ ಕಣ್ಣುಗಳಿಗೆ ಕಾಣಿಸುತ್ತದೆ.
  • ಇತರ ಬಣ್ಣಗಳನ್ನು ಹೇಗೆ ನೋಡುತ್ತೀರಿ.
  • ಹೇಗೆ ಚೆನ್ನಾಗಿ ನೋಡಲು ಸಾಧ್ಯವಿದೆ.
  • ಬೂದು, ಕಂದು, ಹಸಿರು ಬಣ್ಣಗಳ ಲೆನ್ಸ್‌ಗಳಲ್ಲಿ ಬಣ್ಣಗಳು ಸ್ಥಿರವಾಗಿರುತ್ತದೆ. ಗಾಢ ಛಾಯೆಯನ್ನು ಕಡಿಮೆ ಮಾಡಿ, ಮಧ್ಯಮ ಪ್ರಮಾಣದ ಬೆಳಕು ಹೊಂದುತ್ತವೆ. ಹಳದಿ, ಬಂಗಾರ, ಆಕಾಶ ಬಣ್ಣಗಳು ಮಸೂರಗಳಲ್ಲಿ ಕಡಿಮೆ ಬೆಳಕನ್ನು ಒದಗಿಸಿ, ಹೆಚ್ಚಿನ ಬೆಳಕನ್ನು ಪ್ರತಿಬಂಧಿಸುತ್ತವೆ. ಗುಲಾಬಿ, ಕಡುಗುಲಾಬಿ ಮಸೂರಗಳು ಪ್ರಕಾಶಮಾನವಾಗಿ ಗೋಚರಿಸುತ್ತವೆ. ಮೋಡ ಕವಿದ ವಾತಾವರಣಕ್ಕೆ, ಅರಣ್ಯದಲ್ಲಿ ವಾಹನ ಚಾಲನೆ ಮಾಡುವಾಗ ಈ ಬಣ್ಣ ಉತ್ತಮ.
ಸುಜಯ್ ಸುರೇಶ್ ಢಾಂಘಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.