ಬೈಟುಕಾಫಿ

ಕಾಗದದ ದೋಣಿ

Published On :

ಆ ಮಗುವಿಗೆ ಮಳೆಯೆಂದರೆ ತುಂಬಾ ಇಷ್ಟ. ಮಳೆ ನೀರಿನಲ್ಲಿ ದೋಣಿಗಳನ್ನು ತೇಲಿಬಿಡುವುದೆಂದರೆ ಎಲ್ಲಿಲ್ಲದ ಖುಷಿ. ಅವತ್ತು ಆಗಷ್ಟೇ ಮಳೆ ಬಂದು ನಿಂತಿತ್ತು. ರಸ್ತೆಯಲ್ಲಿ ನಿಂತಿದ್ದ ನೀರಿನ ಮೇಲೆ ಕಾಗದದ ದೋಣಿಯನ್ನು ಮಾಡಿ ತೇಲಿಬಿಟ್ಟು ಖುಷಿಪಟ್ಟ ಮಗು, ಇನ್ನಷ್ಟು ದೋಣಿಗಳನ್ನು ಮಾಡುವ ಸಲುವಾಗಿ ಕಾಗದವನ್ನು ತರಲು ಮನೆಯೊಳಗೆ ಓಡಿತು. ಇತ್ತ ರಸ್ತೆಯಲ್ಲಿ ವೇಗವಾಗಿ ಬಂದ ಸ್ಕೂಟರಿನ ಚಕ್ರಗಳು ಕಾಗದದ ದೋಣಿಗಳ ಮೇಲೆ ಹಾದುಹೋದವು. ಸ್ವಲ್ಪ ಹೊತ್ತಿನ ನಂತರ ಮನೆಯಿಂದ ಹೊರಬಂದ ಮಗುವಿನ ಕಣ್ಣಿಗೆ ಬಿದ್ದದ್ದು ಮುದ್ದೆಯಾಗಿ ರಸ್ತೆಗೆ ಅಂಟಿಕೊಂಡಿದ್ದ ದೋಣಿಗಳು. ಮಗು ಕ್ಷಣ ಹೊತ್ತು ಮೌನವಾಗಿಯೇ ಕಾಗದದ ದೋಣಿಗಳನ್ನು ನೋಡುತ್ತಾ ನಿಂತಿತ್ತು. ಒಂದೇ ಕ್ಷಣ ಆ ಮಗುವಿನ ಮನಸಿಗೆ ಏನನ್ನಿಸಿತೋ. ಕೈಯಲ್ಲಿನ ಕಾಗದಗಳಲ್ಲಿ ಇನ್ನಷ್ಟು ದೋಣಿಗಳನ್ನು ಮಾಡಿ ತೇಲಿಬಿಡುತ್ತಾ ಆಟವನ್ನು ಮುಂದುವರಿಸಿತು.
ನೀತಿ: ಕೆಲವೊಮ್ಮೆ ಖುಷಿ ಮತ್ತು ಕನಸುಗಳು ಕೈಕೊಟ್ಟಾಗ ಖಿನ್ನರಾಗಿ ಕೂರಬೇಕಿಲ್ಲ. ಮತ್ತಷ್ಟು ಖುಷಿ ಮತ್ತು ಕನಸುಗಳು ನಮ್ಮ ಕೈಯಲ್ಲಿಯೇ ಇರುತ್ತವೆ. ಅವನ್ನು ಬಿಡಿಸಿ ನೋಡುವ ಮನಸ್ಸಿರಬೇಕಷ್ಟೆ...

-  ನಂದಿನಿ ಡಿ. ಕಾಮತ್
-  ಮೂಲ: ಅಂತೋನಿ ಡಿಮೆಲ್ಲೊ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.