ದಿಟ್ಟ ಬಾಲಕನ ಧೀರ ಕ್ರಮ!
ನರೇಂದ್ರನಿಗೆ ನಾಟಕವೆಂದರೆ ಬಹಳ ಇಷ್ಟ. ಎಲ್ಲಾದರೂ ನಾಟಕ ನಡೆಯುತ್ತಿದೆ ಎಂದರೆ ಅಲ್ಲಿಗೆ ಇವನ ಸ್ನೇಹಿತರೆಲ್ಲ ಹಾಜರು. ಒಂದು ದಿನ ನಾಟಕ ನೋಡಲು ಪಕ್ಕದೂರಿಗೆ ಗೆಳೆಯರೆಲ್ಲ ಕೂಡಿ ಹೋದರು. ಅಲ್ಲಿ ಆಗಲೇ ಬಹಳ ಜನ ಸೇರಿದ್ದರು. ಇವರೂ ನಡುವೆ ಜಾಗ ಮಾಡಿಕೊಂಡು ಕೂತರು. ಸ್ವಲ್ಪ ಹೊತ್ತಿಗೆ ನ್ಯಾಯಾಲಯದ ಅಮೀನ ನಾಟಕದ ಮುಖ್ಯ ಪಾತ್ರಧಾರಿಯನ್ನು ದಸ್ತಗಿರಿ ಮಾಡಲು ವಾರೆಂಟು ಹಿಡಿದು ಬಂದ. ನೇರವಾಗಿ ರಂಗಮಂಟಪಕ್ಕೇ ನುಗ್ಗಿಬಿಟ್ಟ! ಆದರೆ ನಾಟಕ ಅಷ್ಟು ರಸವತ್ತಾಗಿ ನಡೆಯುತ್ತಿರುವಾಗ ಇವನು ಹಿಂದುಮುಂದು ನೋಡದೆ ಒಳಗೆ ನುಗ್ಗಿದನಲ್ಲದೆ, ಆ ಪಾತ್ರಧಾರಿಗೆ 'ನಿನ್ನನ್ನು ದಸ್ತಗಿರಿ ಮಾಡಲಾಗಿದೆ' ಎಂದು ತಿಳಿಸಿದ. ಜನರೆಲ್ಲ ತಬ್ಬಿಬ್ಬಾದರು.
ಇದ್ದಕ್ಕಿದ್ದಂತೆ ಸಭೆಯ ಮಧ್ಯದಲ್ಲಿ ಕೂತಿದ್ದ ನರೇಂದ್ರ 'ಈ ಕಡೆ ಬಾರಯ್ಯ, ನಾಟಕ ಮುಗಿಯುವ ತನಕ ಕಾಯುತ್ತಿರು. ಮಧ್ಯೆ ಬಂದು ಇಡೀ ಸಭೆಗೆ ತೊಂದರೆ ಕೊಡುವುದು ಯಾವ ನ್ಯಾಯ?' ಗತ್ತಿನ ಈ ಧ್ವನಿ ಯಾವಾಗ ಹೊರಬಿತ್ತೋ ತಕ್ಷಣವೇ ಸಭೆಯಲ್ಲಿ ಹಲವಾರು ಧ್ವನಿಗಳು ಕೂಗಿಕೊಂಡವು 'ಏಯ್, ಹೋಗಾಚೆ' ಎಂದು ಜನರೆಲ್ಲ ಕೂಗಲು ಪ್ರಾರಂಭಿಸಿದಾಗ ಅಮೀನ ಕಣ್ಕಣ್ಣು ಬಿಡುತ್ತಾ ಕೆಳಗಿಳಿದು ಬಂದ. ನಾಟಕ ಮುಂದುವರಿಯಿತು. ಜನರೆಲ್ಲ ನರೇಂದ್ರನ ಬೆನ್ನುತಟ್ಟಿ 'ಭೇಷ್! ಒಳ್ಳೆಯ ಕೆಲಸ ಮಾಡಿದೆ. ನೀನು ಹಾಗೆ ಕೂಗದೇ ಇದ್ದಿದ್ದರೆ ಎಲ್ಲ ಹಾಳಾಗಿ ಹೋಗುತ್ತಿತ್ತು' ಎಂದು ಅಭಿನಂದಿಸಿದರು.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

