ರಸಿಕ ಮೋಡ
ಕವಿಗಳು ಮನುಷ್ಯನ ಮನಸ್ಸಿನ ವ್ಯಾಪಾರವನ್ನು ಬಲ್ಲರು. ಹಾಗೆಯೇ ಅವರು ಪ್ರಕೃತಿ ವ್ಯಾಪಾರಗಳಿಗೆ ಮನುಷ್ಯನ ವರ್ತನೆಯನ್ನು ಲೇಪಿಸಲೂ ಬಲ್ಲರು. ಮಳೆ ಬರುತ್ತಿದ್ದರೆ, ...

ಕವಿಗಳು ಮನುಷ್ಯನ ಮನಸ್ಸಿನ ವ್ಯಾಪಾರವನ್ನು ಬಲ್ಲರು. ಹಾಗೆಯೇ ಅವರು ಪ್ರಕೃತಿ ವ್ಯಾಪಾರಗಳಿಗೆ ಮನುಷ್ಯನ ವರ್ತನೆಯನ್ನು ಲೇಪಿಸಲೂ ಬಲ್ಲರು. ಮಳೆ ಬರುತ್ತಿದ್ದರೆ, ಭೂಮಿಯೂ ಆಕಾಶವೂ ಮಿಲನಗೊಂಡಿದೆ ಅನ್ನುತ್ತಾರೆ. ದಿಗಂತದಲ್ಲಿ ಆಕಾಶ ಬಾಗಿ ಭೂಮಿಯನ್ನು ಚುಂಬಿಸಿದೆ ಅನ್ನುತ್ತಾರೆ. ಗಿಡಗಂಟಿಗಳ ಕೊರಳೊಳಗಿಂದ ಹಕ್ಕಿಗಳು ಹಾಡಿವೆ ಅನ್ನುತ್ತಾರೆ. ಈ ಕವಿಗಳಿಂದ ಪಾರಾದವರು ಯಾರು?
ಕಾಳಿದಾಸನೇನು ಈ ವಿಭಾಗದಲ್ಲಿ ಕಡಿಮೆ ಅಲ್ಲ. ಆತನ ಮೇಘದೂತದ ನಾಯಕ, ರಾಮಗಿರಿಯಿಂದ ಅಲಕಾವತಿಗೆ ಕಳುಹಿಸುತ್ತಿರುವ ಸಂದೇಶಕಾರ ಮೇಘನ ಮೂಲಕವೇ ನೆಲದ ನೂರಾರು ನೋಟಗಳನ್ನು ಕೆತ್ತಿ ಕೊಡುತ್ತಾನೆ.
ತಸ್ಯಾಃ ಕಿಂಚಿತ್ಕರಧೃತಮಿವ ಪ್ರಾಪ್ತವಾನೀರಶಾಖಂ
ಹೃತ್ವಾ ನೀಲಂ ಸಲಿಲವಸನಂ ಮುಕ್ತರೋಧೋನಿತಂಬಮ್
ಪ್ರಸ್ಥಾನಂ ತೇ ಕಥಮಪಿ ಸಖೇ ಲಂಭಮಾನಸ್ಯ ಭಾವಿ
ಜ್ಞಾತಾಸ್ವಾದೋ ವಿವೃತಜಘನಾಂ ಕೋ ವಿಹಾತುಂ ಸಮರ್ಥಃ
ದಾರಿಯಲ್ಲಿ ಗಂಭೀರೆ ಎಂಬ ನದಿ ನಿನಗೆ ಎದುರಾಗುತ್ತಾಳೆ. ಆಕೆ ತನ್ನ ಚಂಚಲ ನಯನಗಳಿಂದ ನಿನ್ನನ್ನು ಆಹ್ವಾನಿಸಬಹುದು. ಬೇಸಿಗೆ ತಾನೆ, ಆಕೆಯಲ್ಲಿ ಈಗ ಅಷ್ಟೊಂದು ನೀರು ಇರಲಿಕ್ಕಿಲ್ಲ. ಬತ್ತಿದ ನೀರಿನ ಪಾತ್ರದಲ್ಲಿ ಅಲ್ಲಲ್ಲಿ ಮರಳಿನ ದಿಣ್ಣೆಗಳು ಎದ್ದು ಮಾನಿನಿಯ ಘನ ನಿತಂಬಗಳ ಹಾಗೆ ಕಂಡು ರಂಜಿಸಿಯಾವು. ನೀರು ಇಳಿದಲ್ಲೆಲ್ಲ ಒಣಗಿ ಸೊಪ್ಪಾಗಿ ಹೋಗಿರುವ ಜಲಸಸ್ಯಗಳು ಬಾಡಿ ಬಿದ್ದು, ಆಕೆಯ ಜಾರಿದ ಕಟೀವಸ್ತ್ರದಂತೆ ಕಾಣಿಸಬಹುದು. ರಸಿಕರು ಇದನ್ನು ಕಡೆಗಣಿಸುವವರಲ್ಲ. ನೀನೂ ಬಲು ನಿಕಟವಾಗಿ ಆಕೆಯ ಬಳಿ ಸಾರಿ, ಆಕೆಯಲ್ಲಿರುವ ನೀರನ್ನು ಹೀರಿ ನಿನ್ನಲ್ಲಿ ತುಂಬಿಸಿಕೋ.
ಆದರೆ ಅಲ್ಲೇ ಎಲ್ಲವನ್ನೂ ಸುರಿದು ಖಾಲಿಯಾಗಬೇಡ, ನಿನ್ನ ದಾರಿ ಇನ್ನೂ ದೂರವಿದೆ ಎಂಬುದು ಕಾಳಿದಾಸನ ಸೂಚನೆ!
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


