ಬೈಟುಕಾಫಿ

ಸರ್ವರ್ನಲ್ಲಿ ಸಂಗ್ರಹ

Published On :

ನಿಯಮ ಉಲ್ಲಂಘಿಸುವವರ ವಿರುದ್ಧ ಸಂಚಾರ ಪೊಲೀಸರು ದಾಖಲಿಸುವ ಎಲ್ಲಾ ದೂರುಗಳು (ಅಂದರೆ ಬ್ಲಾಕ್ಬೆರ್ರಿಯಲ್ಲಿ ದಾಖಲಿಸುವ ದೂರುಗಳು ಮಾತ್ರ) ಸರ್ವರ್ನಲ್ಲಿ ಸಂಗ್ರಹವಾಗುತ್ತವೆ. ಸಿಸಿಟಿವಿಯಲ್ಲಿ ಪತ್ತೆ ಮಾಡಿ ದಾಖಲಿಸುವ ದೂರುಗಳು ಸರ್ವರ್ನಲ್ಲಿ ಸಂಗ್ರಹವಾಗುವುದಿಲ್ಲ.
ಪೊಲೀಸರು ವಾಹನ ಸವಾರರಿಗೆ ಮೋಸ ಮಾಡದಿರಲಿ, ಸುಳ್ಳು ಪ್ರಕರಣ ದಾಖಲಿಸದಿರಲಿ ಹಾಗೂ ಅವರು ಹಣದಾಸೆಗೆ ಬಲಿಯಾಗದೆ ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂಬ ಉದ್ದೇಶದಿಂದ ಈ ಸರ್ವರ್ ವ್ಯವಸ್ಥೆ ಅಳವಡಿಸಲಾಗಿದೆ.
ದಾಖಲಾಗುವ ದೂರು ಸರ್ವರ್ನಲ್ಲಿ ಸಂಗ್ರಹವಾಗದಿದ್ದಲ್ಲಿ, ಬ್ಲಾಕ್ಬೆರ್ರಿಯಲ್ಲಿ ದಾಖಲಿಸಿರುವ ದೂರನ್ನು ಅಳಿಸಿ, ಸವಾರನಿಂದ ಲಂಚ ಪಡೆದು ಕೇಸು ಹಾಕದೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ. ಇಂತಹ ಪ್ರಕರಣಗಳಲ್ಲಿ ಬ್ಲಾಕ್ಬೆರ್ರಿ ಹಾಗೂ ಸರ್ವರ್ ಹೆಚ್ಚು ಉಪಯೋಗಕ್ಕೆ ಬರುತ್ತದೆ.
ಪೊಲೀಸರು ಸವಾರನಿಗೆ ನೀಡುವ ರಸೀತಿ ಕಳೆದುಹೋದರೂ, ಅದರ ಮೇಲಿನ ಅಕ್ಷರಗಳು ಅಳಿಸಿಹೋದರೂ ಸಹ ಸರ್ವರ್ನಲ್ಲಿ ಮಾತ್ರ ವರ್ಷಗಟ್ಟಲೆ ಈ ಎಲ್ಲೂ ದೂರುಗಳ ಮಾಹಿತಿಯೂ ಸಂಗ್ರಹವಾಗಿರುತ್ತದೆ.
ಅಂತಹ ತುರ್ತು ಸಮಯದಲ್ಲಿ, ನ್ಯಾಯಾಲಯಕ್ಕೆ ರಸೀತಿ ನೀಡುವ ಅಗತ್ಯ ಇದ್ದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮತ್ತೊಂದು ರಸೀತಿ ಪಡೆಯಲು ಅವಕಾಶ ಇರುತ್ತದೆ.
ಪೊಲೀಸರು ಒಮ್ಮೆ ಬ್ಲಾಕ್ಬೆರ್ರಿಯಲ್ಲಿ ವಾಹನದ ಸಂಖ್ಯೆ ದಾಖಲಿಸಿ ದಂಡ ವಿಧಿಸಬೇಕು ಎಂದು 'ಓಕೆ' ಎಂಬ ಬಟನ್ ಒತ್ತಿದರೆ ಸಾಕು ಅದು ನೇರವಾಗಿ ಸರ್ವರ್ನಲ್ಲಿ ಸಂಗ್ರಹವಾಗುತ್ತದೆ. ಇಂತಹ ಪದ್ಧತಿ ಎಲ್ಲಾ ಜಿಲ್ಲೆಗಳಲ್ಲೂ ಇಲ್ಲ. ಬೆಂಗಳೂರು, ಮೈಸೂರು, ಮಂಗಳೂರಿನಂತಹ ಕೆಲವು ನಗರಗಳಲ್ಲಿ ಮಾತ್ರ ಈ ಸರ್ವರ್ನ ವ್ಯವಸ್ಥೆ ಇದೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.