ಬೈಟುಕಾಫಿ

ಸ್ಥಳದಲ್ಲೇ ದಂಡ ನೀಡಿ

Published On :

ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ನಂತಹ ಅಧಿಕಾರಿಗಳಿಗೆ ಮಾತ್ರ ಬ್ಲಾಕ್‌ಬೆರ್ರಿಯನ್ನು ಬಳಸಲು ಅವಕಾಶ ಇರುತ್ತದೆ.
ಪ್ರತಿ ಠಾಣೆಯಲ್ಲೂ ಇರುವ ನಾಲ್ಕೈದು ಮಂದಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್‌ಗೆ ಒಂದೊಂದು ಬ್ಲಾಕ್‌ಬೆರ್ರಿಯನ್ನು ನೀಡಲಾಗಿರುತ್ತದೆ. ಅವರಿಗೆ ಯಾವ ಸಂಖ್ಯೆಯ ಬ್ಲಾಕ್‌ಬೆರ್ರಿಯನ್ನು ನೀಡಲಾಗಿದೆ ಎಂಬುದು ಇಲಾಖೆಯಲ್ಲಿ ಸಂಗ್ರಹವಾಗಿರುತ್ತದೆ. ಅದಕ್ಕೆ ಪ್ರತ್ಯೇಕ ಕೋಡ್‌ಗಳಿರುತ್ತವೆ. ದಂಡ ವಿಧಿಸುವ ಮುನ್ನ ಅದನ್ನು ಆನ್ ಮಾಡಲು ಸಿಕ್ರೇಟ್ ಕೋಡ್ ಬಳಸಲೇಬೇಕು. ತಪ್ಪಿತಸ್ಥ ಸವಾರನಿಗೆ ನೀಡುವ ರಸೀತಿಯಲ್ಲಿ ಆ ಬ್ಲಾಕ್‌ಬೆರ್ರಿಯ ನಂಬರ್ ದಾಖಲಾಗಿರುತ್ತದೆ. ನಿಯಮ ಉಲ್ಲಂಘಿಸಿದವರು ದಂಡ ಕಟ್ಟಲು ಸಾಧ್ಯವಾಗದಿದ್ದಾಗ ಅವರಿಗೆ ನೀಡಿದ ಗಡುವಿಗೂ ಮುನ್ನ ಠಾಣೆಗೆ ಬಂದು ಅದೇ ಅಧಿಕಾರಿ ಬಳಿ ದಂಡ ನೀಡಿ ಅದಕ್ಕೆ ರಸೀತಿ ಪಡೆಯಬೇಕು.
ಒಂದೇ ಠಾಣೆಯ ಇನ್ಸ್‌ಪೆಕ್ಟರ್ ಅಥವಾ ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ನೀಡುವ ಬ್ಲಾಕ್‌ಬೆರ್ರಿಗೆ ಬೇರೆ ನಂಬರ್ ಇರುವುದರಿಂದ ಯಾವ ಕಾರಣಕ್ಕೂ ಅದೇ ಠಾಣೆಯ ಮತ್ತೊಬ್ಬ ಅಧಿಕಾರಿ ಬಳಿಯೂ ದಂಡ ಪಾವತಿಸಲು ಆಗುವುದಿಲ್ಲ. ಅಲ್ಲದೆ ದೂರು ನ್ಯಾಯಾಲಯದ ಮೆಟ್ಟಿಲೇರಿದರೆ ಸಂಬಂಧಪಟ್ಟ ಅಧಿಕಾರಿಯೇ ನ್ಯಾಯಾಲಯಕ್ಕೆ ಹೋಗಬೇಕು.
ಒಂದು ವೇಳೆ ಸವಾರರು ಠಾಣೆಗೆ ಹೋದ ಸಮಯದಲ್ಲಿ ಅಧಿಕಾರಿಗಳು ಸಿಗದಿದ್ದರೆ ಅವರಿಗಾಗಿ ಕಾಯಲೇಬೇಕು. ದಂಡ ವಿಧಿಸಿರುವ ಇನ್ಸ್‌ಪೆಕ್ಟರ್ ಅಥವಾ ಸಬ್‌ಇನ್ಸ್‌ಪೆಕ್ಟರ್ ಬ್ಲಾಕ್‌ಬೆರ್ರಿಯನ್ನು ಠಾಣೆಯಲ್ಲೇ ಬಿಟ್ಟು ಹೋಗಿದ್ದರೆ, ಅವರ ನೆರವಿನಿಂದ ಅದೇ ಠಾಣೆಯ ಹಿರಿಯ ಅಧಿಕಾರಿಯ ಸಹಾಯದಿಂದ ಪಿನ್ ನಂಬರ್ ಬಳಸಿ (ಆ ಅಧಿಕಾರಿ ಪಿನ್ ನಂಬರ್ ನೀಡಿದಲ್ಲಿ) ದಂಡ ಕಟ್ಟಿಸಿಕೊಳ್ಳಬಹುದು. ಹಾಗಾಗಿ ಸವಾರರು ಸ್ಥಳದಲ್ಲೇ ದಂಡ ನೀಡುವುದು ಸೂಕ್ತ. ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಠಾಣೆಗೆ ಹೋಗುವ ಮೊದಲೇ ಅಧಿಕಾರಿ ಬಗ್ಗೆ ವಿಚಾರಿಸಿಕೊಂಡು ಹೋಗುವುದು ಒಳಿತು.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.