ಬೈಟುಕಾಫಿ

ಜನರಲ್‌ಸ್ಟೋರ್

Published On :

ಒಮ್ಮೆ ಪತ್ರಕರ್ತ ಕುಶವಂತ್ ಸಿಂಗ್‌ರು ಒಂದು ವಿಶಿಷ್ಟ ಪ್ರಯೋಗ ಮಾಡಿದರು. ಅವರು ಎರಡು ದೊಡ್ಡ ಸ್ಟೀಲ್ ಪಾತ್ರೆಗಳನ್ನು ತೆಗೆದುಕೊಂಡರು. ಎರಡು ಪಾತ್ರೆಗೂ ಭದ್ರವಾದ ಮುಚ್ಚಳಗಳಿದ್ದವು. ಒಂದು ಪಾತ್ರೆಯಲ್ಲಿ ಅವರ ಒಬ್ಬ ಸ್ನೇಹಿತ ಬೆಳಗ್ಗೆ ಹಾಸಿಗೆಯಿಂದ ಎದ್ದ ನಂತರ ರಾತ್ರಿ ಮಲಗುವವರೆಗೆ ಸೇವಿಸುತ್ತಿದ್ದ ಸ್ಟ್ರಾಂಗ್ ಕಾಫಿ, ಸಿಗರೇಟುಗಳು, ಮೊಟ್ಟೆಗಳು, ಸಾಸ್, ಬ್ರೆಡ್, ಬೆಣ್ಣೆ, ಹಲ್ವಾ, ಮಟನ್ ಬಿರಿಯಾನಿ, ರಾಯಿತ, ಕಾಫಿ, ಸಮೋಸ, ಫ್ರೈಡ್‌ರೈಸ್, ಫ್ರೈಡ್ ಚಿಕನ್, ಪ್ರಾನ್ ಕರಿ, ವಿಸ್ಕಿ, ಸೋಡಾ... ಇವುಗಳನ್ನೆಲ್ಲ ತುಂಬಿದ್ದರು! 2ನೆಯ ಪಾತ್ರೆಯಲ್ಲಿ ಇನ್ನೊಬ್ಬ ಸ್ನೇಹಿತ ಸೇವಿಸುತ್ತಿದ್ದ ಲೈಟ್ ಟೀ, ಹಾಲು, ಇಡ್ಲಿ ಸಾಂಬಾರ್, ಮೊಸರನ್ನ, ಉಪ್ಪಿನಕಾಯಿ, ಬಾಳೆಹಣ್ಣು, ಮಜ್ಜಿಗೆ, ಚಪಾತಿ ಮತ್ತು ವೆಜಿಟೆಬಲ್ ಕರಿ ತುಂಬಿದ್ದರು!
ಮಾರನೆಯ ದಿನ ಮೊದಲ ಪಾತ್ರೆ ಮುಚ್ಚಳ ತೆರೆದಾಗ ಬುರುಗು ನೊರೆ ಸೂರಿಗೆ ಹಾರುವ ಸ್ಥಿತಿಯಲ್ಲಿತ್ತು. ಗಬ್ಬು ವಾಸನೆ! 2ನೆಯ ಪಾತ್ರೆಯ ಪದಾರ್ಥ ಮೊದಲ ಪಾತ್ರೆಯ ಶೇಕಡ 10ರಷ್ಟು ಮಾತ್ರ ಕೆಟ್ಟಿತ್ತು!
ನೀವು ಇದು ಸರಳ ಪರೀಕ್ಷೆ ಎನ್ನಬಹುದು, ಇದರೊಡನೆ ಜಠರದ ಆಮ್ಲಗಳು, ಎಂಜೈಮ್‌ಗಳು ಸೇರಿಲ್ಲ ಎನ್ನಬಹುದು. ಹೊಟ್ಟೆಯಲ್ಲಿ ಜೀರ್ಣವಾಗಿಲ್ಲ ಎನ್ನಬಹುದು. ಆದರೆ ಆ ಎಲ್ಲ ಕೆಲಸಗಳೂ ಆಗಿದ್ದರೆ ಇನ್ನೆಷ್ಟು ಗಬ್ಬೇಳುತ್ತಿತ್ತೋ ಯೋಚಿಸಿ.
ನಾವು ನಮ್ಮ ಜೀರ್ಣಾಂಗ ವ್ಯೂಹದ ಜತೆ ಅದೆಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತೇವೆ? ಎಂಬುದನ್ನು ಈ ಸರಳ ಪ್ರಯೋಗ ಶೃತಪಡಿಸುತ್ತದೆ. ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ನೀಮಗೇ ಬಿಟ್ಟಿದ್ದು.
ಎಸ್. ವಿಶ್ವನಾಥ, ಮಂಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.