ವೈವಿಧ್ಯಮಯ ಕಾರ್ಯಕ್ರಮ
ಎಐಎಂ ಸಂಘಟನೆ ಸೆಪ್ಟೆಂಬರ್ 28, 29 ಮತ್ತು ಅಕ್ಟೋಬರ್ 2ರಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. 28ರಂದು ಸಂಜೆ 6.30ಕ್ಕೆ ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ 'ಮಲ್ಲೇಶ್ವರಂ ಯೂಥ್ ಫೆಸ್ಟಿವಲ್', ಸಂಜೆ 9 ಗಂಟೆಗೆ 'ಒಪಿಯುಎಸ್', ನಂ. 4, 1ನೇ ಮುಖ್ಯರಸ್ತೆ, ಚಕ್ರವರ್ತಿ ಲೇಔಟ್, ಅರಮನೆ ಅಡ್ಡರಸ್ತೆ, ಬೆಂಗಳೂರು-ಇಲ್ಲಿ ದೃಷ್ಟಿ ಸಮಗ್ರ ನ್ಯತ್ಯ- ಅದ್ಭುತ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ 'ಯುವಾಗ್ನಿ' ಪ್ರದರ್ಶನ. ಪ್ರವೀಣ್ ಡಿ. ರಾವ್ ಅವರಿಂದ ಸಿನಿಮಾ ಸಂಗೀತಾಧಾರಿತ ಅಸಾಮಾನ್ಯ ಫ್ಯೂಜನ್ ಪ್ರದರ್ಶನ. ಪಾಪ್ ಗಾಯಕ ಮೈಕೆಲ್ ಜಾಕ್ಸನ್ ನೆನಪಿಗಾಗಿ ಪಾಪ್ ಸಂಗೀತ ಕಾರ್ಯಕ್ರಮವಿದೆ.
ಸೆಪ್ಟೆಂಬರ್ 29, ಬೆಳಗ್ಗೆ 10 ಗಂಟೆಗೆ ಸುಕೃಷಿ ಆರ್ಗ್ಯಾನಿಕ್ ಫಾರ್ಮ್, ಮರಸರಹಳ್ಳಿ, ನೆಲಮಂಗಲದಲ್ಲಿ 'ಗೋ ಗ್ರೀನ್ ಬೆಂಗಳೂರು' ಗಿಡ ನೆಡುವ ಕಾರ್ಯಕ್ರಮ. ಅಕ್ಟೋಬರ್ 2ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಬಸವನಗುಡಿ ಬಿ.ಪಿ. ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ 'ವೀಣಾ ಫೆಸ್ಟಿವಲ್' ಆಯೋಜಿಸಲಾಗಿದೆ. ಹೊಸದಿಲ್ಲಿಯ ವೀಣಾ ಫೌಂಡೇಶನ್ ಸಹಯೋಗದೊಂದಿಗೆ ಜರುಗುವ ಈ ಕಾರ್ಯಕ್ರಮದಲ್ಲಿ ಗೀತಾ ರಮಾನಂದ ಮತ್ತು ರೇವತಿ ಮೂರ್ತಿಯವರಿಂದ ಜುಗಲ್ಬಂದಿ, ಶಾಂತಿ ರಾವ್ ತಂಡ, ಯೋಗವಂದನಾ ತಂಡ ಭಾಗವಹಿಸಲಿದೆ. ವಿವರಗಳಿಗೆ 9980327800 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

