ಬೈಟುಕಾಫಿ

ಮತಗಾನ

ಮತಗಾನ
Published On :

ಶಂಕರ್ ಮಹಾದೇವನ್ ಹಾಡಿರುವ ಈ ಗೀತೆಗೆ ಸಾಹಿತ್ಯ ಒದಗಿಸಿದವರು ಹಂಸಲೇಖ. ನಿರುದ್ಯೋಗ ಸಮಸ್ಯೆ, ರಾಜಕಾರಣಿಗಳ ಭ್ರಷ್ಟತೆ, ಯುವಶಕ್ತಿಗಳ ದುರುಪಯೋಗದ ಪ್ರಯತ್ನ, ಯುವಕರೇ ಸಿಡಿದೆದ್ದು ರಾಜಕಾರಣಕ್ಕಿಳಿದು ಭ್ರಷ್ಟಾಚಾರ ಮುಕ್ತ ಸಮಾಜದ ಕನಸು ಕಾಣುವ ಅಂಶಗಳನ್ನು ಕಮರ್ಷಿಯಲ್ಲಾಗಿ ಚಿತ್ರಿಸಿದ ಸಿನಿಮಾ ಕಿಚ್ಚ. ಅರುಣ್ ಪ್ರಸಾದ್  ನಿರ್ದೇಶನದ ಈ ಚಿತ್ರದ ಎಲ್ಲ ಹಾಡುಗಳೂ ಸಾಹಿತ್ಯಿಕವಾಗಿ ಅದ್ಭುತವಾಗಿದ್ದವು. ಹಲವು ಹೊಸ ಪದಗಳನ್ನು ಪರಿಚಯಿಸಿದ್ದವು. ಹಂಸಲೇಖ ಈ ಗೀತೆಯಲ್ಲಿ ಯುವಕರ ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರದ ಲಂಚಕೋರತನಗಳು, ಶ್ರೀಮಂತರ ಕಪಿಮುಷ್ಟಿಯಲ್ಲಿರುವ ವ್ಯವಸ್ಥೆ, ಯುವಕರ ಹತಾಶೆ ಇವೆಲ್ಲವನ್ನು ಗಟ್ಟಿಪದಗಳಲ್ಲಿ ಕಟ್ಟಿಕೊಟ್ಟಿದ್ದರು.

ತಮ್ಮಾ...   ಓದೋದಕ್ಕೆ ಯಾಕೋ ನಿಂಗೆ ಆತುರ?
ಕೆಲಸ ಹುಟ್ಟದೆ.. ಕಾಲ ಕೆಟ್ಟಿದೆ
ಆಡಿಕೋ .. ಪಾಡಿಕೋ..
ಮಂಕು ತಿಮ್ಮ ಮಂಕು ತಿಮ್ಮ
ಕೆಲಸಾ ಖಾಲಿ ಇಲ್ಲ ತಮ್ಮ
ಮಂಕುತಿಮ್ಮ ಮಂಕುತಿಮ್ಮ
ಇಂಟರ್‌ವ್ಯೂ ಅಂದ್ರೆ ಗುಮ್ಮ
ಅನ್‌ಲಿಮಿಟೆಡ್ ಟೆನ್ಷನ್ಸ್.. ಅನ್‌ವಾಂಟೆಡ್ ಕ್ವೆಶ್ಚನ್ಸ್
ಇಂಪಾರ್ಟೆಂಟ್ ಫೋನ್ ಇಲ್ದಿದ್ರೆ
ಇಂಪೊಟೆಂಟು ನಮ್‌ಕೈಲಿರೋ..
 ಡಿಗ್ರಿಗಳು ಅರ್ಜಿಗಳು ನಾಯಿ ಮೊಲೆ ಹಾಲಿದ್ದಂತೆ
ಇಲ್ಲಿಟ್ರೇಸಿ ವಾಸಿ ಈಗ ಕೂಲಿ ನಾಲಿ ಸರ್ವರ್ ಕ್ಲೀನರ್
ಜಾಬಿದೆ... ಇಲ್ಲಿ ಸೇಫಿದೆ
ಗವರ್ನಮೆಂಟಿನ್ ಕೆಲಸಕ್ಕಾಗಿ ಓದಿ ಓಡಿ ಬಂದ್ರೆ ನೋಡಿ
ಏನಿದೆ..?  ಹಾ  ಟುಸ್‌ಇದೆ
ಮಗುವಿಗೆ ಮುಂಚೆ ಎದೆಯಲ್
ಹಾಲಿನ್ ಅರೇಂಜ್‌ಮೆಂಟು..
ಇದ್ದಂಗೆ ಓದ್ದೋರ್ಗೆಲ್ಲ..  
ಇರಲಿ ಅಪಾಯಿಂಟ್‌ಮೆಂಟು
ಸರ್ಕಾರಗಳ  ಪ್ರಾಜೆಕ್ಟುಗಳು..
ಶಾಸಕರುಗಳ ಪ್ರಾಮಿಸ್ಸುಗಳು
ಆಸೆಪಾಸೆ ಕಣ್ಣಾ ಮುಚ್ಚೆ ಆಟಗಳು ....
ಪದಕ ಪತ್ರ ನೂರೆಂಟಿದ್ರೂ
ಬಂಡಲ್‌ಬಂಡಲ್ ನೋಟಿಲ್‌ದಿದ್ರೆ ನಾವಿಲ್ಲಿ ...
ಆ ಜಾಬಲ್ಲೇ
ಓದಿದ್ ತಕ್ನಂಗ್ ಕೆಲಸ ಸಿಗದೆ
ವಿದ್ಯಾವಂತ ಕ್ರಿಮಿನಲ್ ಆಗೋದ್ ಈವಾಗ್ಲೇ
ಇವರಿಂದಲೇ
ನಮ್ಮಪ್ಪ ಮಂತ್ರಿ ಅಲ್ಲ
ನಿಮ್ಮಪ್ಪ ದಾವೂದ್ ಅಲ್ಲ
ಕೈಯಲ್ಲಿ ಗನ್ನು ಇಲ್ಲ
ಅದೃಷ್ಟದ ಲೈನು ಇಲ್ಲ
ಆರಕ್ಕೇರದ ಮೂರಕ್ಕಿಳಿಯದ
ಮಧ್ಯಮ ವರ್ಗದ ಮಾನಕೆ ಅಂಜುವ ಮಾನವರು
ಮಾನದಿಂದ ದಕ್ಕೋದೊಂದೇ ದಾರಿದ್ರ್ಯ
ಮಂಕು ತಿಮ್ಮ ಮಂಕು ತಿಮ್ಮ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.