ಮತಗಾನ
ನಾದಬ್ರಹ್ಮ ಹಂಸಲೇಖ ಪ್ರೇಮಲೋಕದಿಂದ ಬಂದಿದ್ದು ಹೌದೇ ಆದರೂ, ಗ್ರಾಮೀಣ ಸೊಗಡಿನ ಹಾಡು ಹೊಸೆಯುವುದರಲ್ಲಿ...
ನಾದಬ್ರಹ್ಮ ಹಂಸಲೇಖ ಪ್ರೇಮಲೋಕದಿಂದ ಬಂದಿದ್ದು ಹೌದೇ ಆದರೂ, ಗ್ರಾಮೀಣ ಸೊಗಡಿನ ಹಾಡು ಹೊಸೆಯುವುದರಲ್ಲಿ ಎತ್ತಿದ ಕೈಯ್ಯೇ ಆಗಿದ್ದರೂ, ರಾಜಕೀಯ ಸಂಬಂಧಿ ಗೀತೆಗಳು, ಸಾಮಾಜಿಕ ಸಮಸ್ಯೆಗಳನ್ನು ಕುರಿತ ಗೀತೆಗಳನ್ನು ರಚಿಸುವುದರಲ್ಲಿ ಯಾವತ್ತೂ ಸೋಲಲಿಲ್ಲ. ಹವಾಲಾ ಹಗರಣ ಬಿಸಿಯೇರಿದ್ದ ಸಮಯದಲ್ಲಿ ಹವಾಲಾ ಎಂಬ ರಾಜಕೀಯ ಗೀತೆಗಳ ಕ್ಯಾಸೆಟ್ಟನ್ನು ಹೊರತಂದವರು ಹಂಸಲೇಖ. ಶಿವಮಣಿ ನಿರ್ದೇಶನದ ಗೋಲಿಬಾರ್ ಚಿತ್ರವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದದ್ದು ಚಿತ್ರದ ಪವರ್ಫುಲ್ ಗೀತೆಗಳು. ರಾಜಕೀಯ ಚಿತ್ರಗಳಲ್ಲಿ ಹಾಡುಗಳಿಗೇನು ಕೆಲಸ ಎಂಬ ಭಾವನೆ ಇರುವವರಿಗೆ, ಇದ್ದರೆ ಇಂಥಾ ಹಾಡುಗಳಿರಬೇಕು ಅನಿಸುವಂತೆ ಮಾಡಿದ ಹಿರಿಮೆ ಹಂಸಲೇಖರದು. ಹಾಡಿನ ಒಂದು ಸಾಲಿನಲ್ಲಿ ಹಂಸಲೇಖ ಅವರು ಪದಗಳೊಂದಿಗೆ ಸರಸವಾಡಿರೋದನ್ನು ಗಮನಿಸಿ. 'ಇಂಡಿಯಾನ ಹಿಂಡೊ ಹಿಂಡ... ಹಿಂಡಿ ಹಿಂಡಿ ಮಾಡು' ಈ ಸಾಲಿನಲ್ಲಿ ಬರುವ ಒಂದೇ ಪದ ಬೇರೆಬೇರೆ ಸ್ಥಾನಗಳಲ್ಲಿ ಬೇರೆ ಬೇರೆ ಅರ್ಥ ನೀಡುತ್ತದೆ. ಅದು ಹಂಸಲೇಖ ಸಾಹಿತ್ಯದ ಸ್ಪೆಷಾಲಿಟಿ. ಎಸ್ಪಿಬಿಯವರ ಎನರ್ಜೆಟಿಕ್ ಗಾಯನದಿಂದ ಈ ಹಾಡು ಮತ್ತಷ್ಟು ಪ್ರಖರವೆನಿಸಿದೆ.
ಬೂಟಿನ ಬೀಟಿಗೆ
ಲಾಠಿಯ ಏಟಿಗೆ
ಗಡಗಡ ಎನ್ನಲಿ
ಕಳ್ಳ ಖದೀಮರು
ಖಾಕಿಯ ಕಾವಿಗೆ ಕೋರ್ಟಿನ ಕೂಗಿಗೆ
ಕಟಕಟೆ ಏರಲಿ ಲಂಚಕುಬೇರರು
ಊರೇ ಕಲಬೆರೆಕೆಯಲುಂಟು
ದಾರಿ ಕಸಬರಿಕೆಯಲುಂಟು
ಊರೇ ಕಲಬೆರೆಕೆಯಂಟು
ದಾರಿ ಕಸಬರಿಕೆಯಲುಂಟು
ಗುಡಿಸೋ ಕೆಡುವ ಮಾರ್ಗಗಳ
ನಗಿಸೋ ದುಡಿಯೋ ವರ್ಗಗಳ
ಇಂಡಿಯಾನ ಹಿಂಡೋ ಹಿಂಡ
ಹಿಂಡಿ ಹಿಂಡಿ ಮಾಡು
ಮತದಾರ ಹೇಳೋ ಮಾತ
ನಾಡಗೀತೆ ಮಾಡು
ರೂಪಾಯಿ ಭೂಪರಿಂದ
ಲಾಬಿ ದೂರ ಮಾಡು
ಸಾರಾಯಿ ಶಾಪದಿಂದ
ನಾಡ ಮುಕ್ತ ಮಾಡು
ಲಂಚ ಅಂದ್ರೆ ಗುದ್ದು
ಹಾಕು ಒಳಗೆ ಒದ್ದು
ಅಲ್ಲೊಬ್ಬ ಹಾಲುಂಡು
ನಾಡೆಲ್ಲ ನೋವುಂಡು
ಅವನೊಬ್ಬ ಮೆರೆದಾಡೊ
ಜನರೆಲ್ಲಾ ಪರದಾಡೊ
ಬೇಧ ಭಾವಗಳೆಂಬ
ರೂಢಿಗಳನ್ನು ತಿಪ್ಪೆಗೆ ಹಾಕು
ಜಾತಿಬೆಳೆಸೋ ಎಲ್ಲ
ಮೂತಿಗಳನ್ನು ಗಲ್ಲಿಗೆ ಹಾಕು
ಬಾಂಬಿಗೆ ಹಣ ಪೋಲಾಗಿರಲು
ಧರ್ಮಕೆ ಹಣ ಕಾಲಾಗಿರಲು
ಹೇಯ್ ಹೇಯ್ ಹೇಯ್ ಖಾಕಿ....
ಆಗು ಜ್ವಾಲಾಮುಖಿ
ಬೂಟಿನ ಬೀಟಿಗೆ
ಲಾಠಿಯ ಏಟಿಗೆ
ಗಡಗಡ ಎನ್ನಲಿ
ಕಳ್ಳ ಖದೀಮರು
ಖಾಕಿಯ ಕಾವಿಗೆ
ಕೋರ್ಟಿನ ಕೂಗಿಗೆ
ಕಟಕಟೆ ಏರಲಿ
ಲಂಚಕುಬೇರರು
ಊರೇ ಕಲಬೆರೆಕೆಯಲುಂಟು
ದಾರಿ ಕಸಬರಿಕೆಯಲುಂಟು
ಊರೇ ಕಲಬೆರೆಕೆಯಂಟು
ದಾರಿ ಕಸಬರಿಕೆಯಲುಂಟು
ಗುಡಿಸೋ ಕೆಡುವ ಮಾರ್ಗಗಳ
ನಗಿಸೋ ದುಡಿಯೋ ವರ್ಗಗಳ
ಇಂಡಿಯಾನ ಹಿಂಡೋ ಹಿಂಡ
ಹಿಂಡಿ ಹಿಂಡಿ ಮಾಡು
ಮತದಾರ ಹೇಳೋ ಮಾತ
ನಾಡಗೀತೆ ಮಾಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

