ಅಲಿಯಾ ದಾರಿ ಬೇರೆ
'ಸ್ಟೂಡೆಂಟ್ ಆಫ್ ದಿ ಇಯರ್' ಪಟ್ಟ ಪಡೆದು ಹೆಸರಾದ ಅಲಿಯಾ ಭಟ್ ಕೇವಲ 'ಟು ಸ್ಟೇಟ್ಸ್' ಅಲ್ಲ, 'ಹೈವೇ' ಹಾಸಿದಷ್ಟೂ ದೂರ ಮನೆ...

'ಸ್ಟೂಡೆಂಟ್ ಆಫ್ ದಿ ಇಯರ್' ಪಟ್ಟ ಪಡೆದು ಹೆಸರಾದ ಅಲಿಯಾ ಭಟ್ ಕೇವಲ 'ಟು ಸ್ಟೇಟ್ಸ್' ಅಲ್ಲ, 'ಹೈವೇ' ಹಾಸಿದಷ್ಟೂ ದೂರ ಮನೆಮಾತಾಗುತ್ತಿದ್ದಾಳೆ. ಈಗ ತಾನೇ 21ನೇ ವಸಂತಕ್ಕೆ ಕಾಲಿಟ್ಟ ಅಲಿಯಾ ಬಾಲಿವುಡ್ ಭವಿಷ್ಯದ ಭರವಸೆಯ ಕೂಸಾಗಿ ಗುರುತಿಸಿಕೊಳ್ಳುತ್ತಿದ್ದಾಳೆ. ಈಕೆ ನಟಿಸಿದ 3 ಚಿತ್ರಗಳಿಗೂ ಮೀಡಿಯಾದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅಷ್ಟೇ ಅಲ್ಲ, ಅಲಿಯಾಳ ಸಹಜ, ಸರಳ ಮಾತುಗಳೂ ಪತ್ರಕರ್ತರ ಮನಗೆದ್ದಿವೆ. ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿಯಾಗಿ ತನ್ನ ಬುದ್ಧಿವಂತಿಕೆ ತೋರುತ್ತಿರುವ ಅಲಿಯಾ, ಅಭಿನಯ ಪ್ರಧಾನ ಚಿತ್ರಗಳಿಗೆ ಮಣೆ ಹಾಕುತ್ತಾ, ಅದಕ್ಕೆ ತಕ್ಕಂತೆ ತನ್ನನ್ನು ತಯಾರಿಗೊಳಿಸಿಕೊಂಡು ನಿರ್ದೇಶಕರ ನಟಿ ಎನಿಸಿಕೊಳ್ಳುತ್ತಿದ್ದಾಳೆ. 'ಹೈವೇ' ಚಿತ್ರದಲ್ಲಿ ಮೇಕಪ್ ಇಲ್ಲದೆ ನಟಿಸಿ ಸೈ ಎನಿಸಿಕೊಂಡರೆ, 'ಟು ಸ್ಟೇಟ್ಸ್'ನಲ್ಲಿ ತಮಿಳು ಹುಡುಗಿಯಾಗಿ ನಟಿಸಲೋಸ್ಕರ ತಮಿಳು ಕಲಿತು ತನ್ನ ಬದ್ಧತೆ ಪ್ರದರ್ಶಿಸಿದ್ದಾಳೆ. 'ಟು ಸ್ಟೇಟ್ಸ್'ನಲ್ಲಿ ಅರ್ಜುನ್ ಕಪೂರ್ಗೆ ಕಿಸ್ ಕೊಡುವ ಬಗ್ಗೆ ಕೇಳಿದರೆ, ಕಿಸ್ ಕೊಡುವುದು ಕೆನ್ನೆಗೆ ಬಾರಿಸುವಷ್ಟೇ ಸುಲಭ ಮತ್ತು ಕಷ್ಟ. ಒಂದು ಕ್ಷಣದಲ್ಲಿ ನಡೆದು ಹೋಗುತ್ತದೆ. ಈ ಪ್ರಶ್ನೆಯೇ ಅಸಂಗತ. ಯಾವ ಹೀರೋಯಿನ್ ಕೂಡಾ ಆ ಹೀರೋಗೆ ಕಿಸ್ ಕೊಡೋವಾಗ ನನಗೆ ಅಸಹ್ಯ ಆಯಿತು ಎನ್ನಲಾಗುವುದಿಲ್ಲ ಎನ್ನುವ ಈಕೆಗೆ ಬಾಲಿವುಡ್ ಹೊಸದೇನೂ ಅಲ್ಲ. ಹೆಸರಾಂತ ನಿರ್ದೇಶಕ ಮಹೇಶ್ ಭಟ್ ಹಾಗೂ ನಟಿ ಸೋನಿ ರಾಜ್ದಾನ್ ಮಗಳಾಗಿರುವ ಅಲಿಯಾಗೆ ನಟ ಇಮ್ರಾನ್ ಹಶ್ಮಿ, ನಿರ್ದೇಶಕ ಮೋಹಿತ್ ಸೂರಿ ಕಸಿನ್ ಆಗಬೇಕು. ಮತ್ತು ನಿರ್ಮಾಪಕ ಮುಖೇಶ್ ಭಟ್ ಈಕೆಯ ಅಂಕಲ್. ಸದ್ಯ ಕರಣ್ ಜೋಹರ್ ನಿರ್ದೇಶನದ 'ಹಂಪ್ಟಿ ಶರ್ಮಾ ಕಿ ದುಲ್ಹನಿಯಾ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


