ಪ್ರೊಟೀನ್ ಮೆದುಳಿನ ಸಾಮರ್ಥ್ಯ ಹೆಚ್ಚಿಸುವುದೆ?

ಇನ್ನೊಂದು ಸಣ್ಣ ಪರೀಕ್ಷೆ ಮಾಡಿ ನೋಡಿ. ಐಸ್ಕ್ರೀಂ, ಕ್ಯಾಂಡಿ ಅಥವಾ ಚಾಕೊಲೇಟ್ ತಿನ್ನಿ. ನಿಮಗೆ ಯಾವ ಅನುಭವ ಆಗುತ್ತದೆ ನೋಡಿ. ಬಹುತೇಕರಲ್ಲಿ ಸಣ್ಣ ಜಡತ್ವ ಕಾಡುತ್ತದೆ. ಮಾಡಬೇಕು ಅಂದುಕೊಂಡಿದ್ದ ಕೋಪವನ್ನು ಮುಂದೂಡುವ ಮನಸ್ಸಾಗುತ್ತದೆ. ಅದಕ್ಕೆ ಕಾರಣ ಏನೆಂದರೆ ಇಂತಹ ತಿನಿಸುಗಳಲ್ಲಿರುವ ಕಾರ್ಬೊಹೈಡ್ರೇಟ್ಗಳು. ಅದರಲ್ಲೂ ಪ್ರಮುಖವಾಗಿ ಸಕ್ಕರೆ ನಮ್ಮನ್ನು ಜಡಗೊಳಿಸಬಲ್ಲದು. ಟ್ರೈಪ್ಟೊಫಾನ್ಗಳಿಲ್ಲದ, ಕಾರ್ಬೊಹೈಡ್ರೇಟ್ ಇರುವ ಆಹಾರ ಸೇವಿಸಿದಾಗಲೂ ಏಕೆ ಮೆದುಳು ಆಲೋಚಿಸುವುದನ್ನು ಕೊಂಚಕಾಲ ನಿಲ್ಲಿಸುತ್ತದೆ ಎನ್ನುವುದಕ್ಕೂ ಇದೇ ಕಾರಣ.
ಮೆದುಳಿನ ಆರೋಗ್ಯದ ಕುರಿತು ಮಾತನಾಡುವಾಗ ಪ್ರೊಟೀನ್ಗಳ ಬಗ್ಗೆ ಹೇಳಬೇಕು. ಮೆದುಳು ಆರೋಗ್ಯಶಾಲಿಯಾಗಿರಬೇಕು ಅಂತಾದರೆ ಪ್ರೊಟೀನ್ಗಳು ಸಮೃದ್ಧವಾಗಿರುವ ಆಹಾರವನ್ನು ಜಾಸ್ತಿ ಸೇವಿಸಬೇಕು. ಕಾರ್ಬೊಹೈಡ್ರೇಟ್ಗಳು ಮೆದುಳನ್ನು ಜಡಗೊಳಿಸುವ ರಾಸಾಯನಿಕಗಳನ್ನು ಉತ್ತೇಜಿಸಿದರೆ, ಪ್ರೊಟೀನ್ಗಳು ಮೆದುಳನ್ನು ಕ್ರಿಯಾಶೀಲಗೊಳಿಸುವ ರಾಸಾಯನಿಕಗಳನ್ನು ಉತ್ತೇಜಿಸುತ್ತವೆ. ಮಾನಸಿಕವಾಗಿ ಲವಲವಿಕೆಯಿಂದ ಕೂಡಿರಬೇಕು ಅಂತಾದರೆ ಕೆಲಸದ ಅವಧಿಯಲ್ಲಿ ಕಾರ್ಬೊಹೈಡ್ರೇಟ್ಸ್ಗಳಿಂದ ಕೂಡಿರುವ ಆಹಾರ, ತಿನಿಸುಗಳಿಂದ ಸಾಧ್ಯವಾದಷ್ಟು ದೂರ ಇರುವುದು ಒಳ್ಳೆಯದು. ಐಸ್ಕ್ರೀಂ, ಕೇಕ್, ಪಾಸ್ತಾ, ತಂಪು ಪಾನೀಯಗಳು ಇವುಗಳಲ್ಲೆಲ್ಲ ಕಾರ್ಬೊಹೈಡ್ರೇಟ್ಸ್ಗಳಿಂದ ಜಾಸ್ತಿ ಇರುತ್ತವೆ. ಸರಳವಾಗಿ ಹೇಳುವುದಿದ್ದರೆ ಸಕ್ಕರೆಯನ್ನು ಯಾವ ಉತ್ಪನ್ನಗಳಲ್ಲಿ ಹೇರಳವಾಗಿ ಬಳಸಿರುತ್ತಾರೋ, ಅವುಗಳಲ್ಲೆಲ್ಲ ಕಾರ್ಬೊಹೈಡ್ರೇಟ್ ಜಾಸ್ತಿ ಇರುತ್ತದೆ. ಕೊಬ್ಬಿನ ಅಂಶ ಇರುವ ತಿನಿಸುಗಳು ಸಹ ಮೆದುಳನ್ನು ಜಡಗೊಳಿಸುತ್ತವೆ. ಏಕೆಂದರೆ ಅವು ಜೀರ್ಣವಾಗಲು ಜಾಸ್ತಿ ಸಮಯ ಬೇಕು. ತಟಸ್ಥ ಆಹಾರ ಎಂದರೆ ಹಸಿರು ತರಕಾರಿಗಳು, ಸೊಪ್ಪುಗಳು, ಅವು ಮೆದುಳಿನ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ; ಜಡಗೊಳಿಸುವುದೂ ಇಲ್ಲ, ಕ್ರಿಯಾಶೀಲಗೊಳಿಸುವುದೂ ಇಲ್ಲ.
ಕೆನೆ ತೆಗೆದ ಹಾಲು, ಕಡಿಮೆ ಕೊಬ್ಬು ಹೊಂದಿರುವ ಯೋಗರ್ಟ್ಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. 'ಪ್ರೊಟೀನ್ಗಳು ನಿಮ್ಮ ಮೆದುಳಿಗೆ ಬಲ ತುಂಬುವುದಿಲ್ಲ ಅಥವಾ ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಯೋಚಿಸುವುದಕ್ಕೆ ನಿಮ್ಮನ್ನು ಹುರಿದುಂಬಿಸುವುದಿಲ್ಲ. ಅವು ಮಾಡುವ ಕಾರ್ಯ ಎಂದರೆ ಕಾರ್ಬೊಹೈಡ್ರೇಟ್ಸ್ ನಿಮ್ಮ ಮೆದುಳನ್ನು ಜಡಗೊಳಿಸದಂತೆ ತಡೆಯುವುದು' ಎನ್ನುತ್ತಾರೆ ಚಿಕಾಗೊದ 'ಫುಡ್-ಮೂಡ್' ಸಂಶೋಧಕ ಬೊನ್ನಿ ಸ್ಪ್ರಿಂಗ್. ಊಟದಲ್ಲಿ ಕೆಲವೇ ಮಿಲಿಗ್ರಾಂಗಳಷ್ಟು ಪ್ರೊಟೀನ್ ಸಿಕ್ಕರೂ ಸಾಕು. ಇಡೀ ದಿನ ನಿಮ್ಮ ಮೆದುಳು ಕ್ರಿಯಾಶೀಲವಾಗಿರುತ್ತದೆ, ಜಾಗೃತವಾಗಿರುತ್ತದೆ ಎನ್ನುತ್ತಾರೆ ಅವರು. ಮೆದುಳಿನಲ್ಲಿ ಸೆರೊಟೊನಿನ್ ಎನ್ನುವ ಜಡತ್ವಕ್ಕೆ ಜಾರಿಸುವ ರಾಸಾಯನಿಕಗಳು ಉತ್ಪಾದನೆ ಆಗುವುದನ್ನೂ ಪ್ರೊಟೀನ್ಗಳು ತಡೆಯಬಲ್ಲವು. ಹೀಗಾಗಿಯೇ ಮೆದುಳಿನ ಆರೋಗ್ಯದಲ್ಲಿ ಪ್ರೊಟೀನ್ಗಳಿಗೆ ಬಹುಮುಖ್ಯ ಸ್ಥಾನ ಲಭಿಸಿರುವುದು.
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


