ಬೈಟುಕಾಫಿ

ಶತ್ರು

ಹಕ್ಕಿಯೊಂದು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಕುಕ್ಕಲು ಶುರುವಿಟ್ಟಿತು. ಕೊಕ್ಕಿಗೆ ನೋವಾದರೂ ...

Published On :

ಹಕ್ಕಿಯೊಂದು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಕುಕ್ಕಲು ಶುರುವಿಟ್ಟಿತು. ಕೊಕ್ಕಿಗೆ ನೋವಾದರೂ ಕುಕ್ಕುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಸುಸ್ತಾಗಿ ದೂರ ಹಾರಿಹೋಯ್ತು. ಮರುದಿನವೂ ಇದೇ ಪುನರಾವರ್ತನೆ ಆಯಿತು. ಪ್ರತಿಬಿಂಬವೆಂಬುದನ್ನು ತಿಳಿಯದ ಹಕ್ಕಿ ತನ್ನ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಕುಕ್ಕಿದಾಗ ಕನ್ನಡಿ ಒಡೆದು ಚೂರಾಯಿತು. ಈಗ ಅದರ ಪ್ರತಿಬಿಂಬ ನಾಲ್ಕಾಯ್ತು. ಅದು ತನ್ನ ಶತ್ರುಗಳ ಸಂಖ್ಯೆ ಹೆಚ್ಚಾದುದನ್ನು ಕಂಡು ಹೆದರಿ ಹಾರಿಹೋಯ್ತು...
ಮನುಷ್ಯನಿಗೆ ಶತ್ರುಗಳು ಹೆಚ್ಚಾಗುವುದು ಹೀಗೆಯೇ...
-
ಕಾಗೆಗಳು
ನಡೆದು ನಡೆದು ಸುಸ್ತಾದ ಅವನು ಕಲ್ಲಿನ ಮೇಲೆ ಕೂತ. ದೂರದಲ್ಲಿ ಕಾಗೆಗಳು ಏನನ್ನೋ ಕುಕ್ಕಿ ಎಳೆಯುತ್ತಿವೆ. ಜತೆಗೆ ಬೇರೆ ಕಾಗೆಗಳನ್ನು ಕೂಗಿ ಕರೆಯುತ್ತಿವೆ. ಅವನು ಅಲ್ಲಿಂದ ಎದ್ದು ನಡೆದ. ಅಲ್ಲಿಯವರೆಗೆ ಅವರ ಜತೆ ಗೆಳೆಯನಿದ್ದ. ಅಲ್ಲಿಂದ ಮುಂದೆ ಅವರು ಬೇರೆ ಬೇರೆ ದಾರಿ ಹಿಡಿದು ಹೊರಟರು. ನಡೆದು ಸುಸ್ತಾದ ಅವನು ಹೋಟೆಲನ್ನು ಹೊಕ್ಕ. ಹೊಟ್ಟೆತುಂಬ ತಿಂದು ತೇಗುತ್ತ ಹೊರಬರುತ್ತಿದ್ದಂತೆ ಅವನಿಗೆ ತನ್ನ ಗೆಳೆಯನ ನೆನಪಾಯ್ತು. ಅವನೀಗ ಹಸಿದು ಕಂಗಾಲಾಗಿ ನಡೆಯುತ್ತಿರಬಹುದೇನೋ ಎಂದುಕೊಂಡ!
ಮನುಷ್ಯರಿಗೂ, ಕಾಗೆಗಳಿಗೂ ಇರುವ ವ್ಯತ್ಯಾಸ ಇದು! ಟಿ
- ಸೌಮ್ಯಾ ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.